ಪಾಟ್ನಾ: ಏಪ್ರಿಲ್‌ನಲ್ಲಿ ನಾಪತ್ತೆಯಾಗಿದ್ದ ನೇಪಾಳದ ಅಪರೂಪದ ರಣಹದ್ದು 8 ತಿಂಗಳ ಬಳಿಕ ಈಗ ಬಿಹಾರದಲ್ಲಿ ಪತ್ತೆಯಾಗಿದೆ!
ಅಳಿವಿನಂಚಿನಲ್ಲಿರುವ ಅಪರೂಪದ ಜೀವಿಗಳು ಮತ್ತು ಅವುಗಳ ಸಂತಾನೋತ್ಪತ್ತಿ ಅಭಿಯಾನದ ಯಶಸ್ಸಿನ ಮೇಲೆ ನಿಗಾ ಇಡಲೆಂದು ನೇಪಾಳವು ಈ ಬಿಳಿ ಬೆನ್ನಿನ ರಣಹದ್ದನ್ನು ನಿಯೋಜಿಸಿತ್ತು. ಅದಕ್ಕೆ ಸ್ಯಾಟಲೈಟ್ ಟ್ಯಾಗ್ ಕೂಡ ಅಳವಡಿಸಲಾಗಿತ್ತು. ನೇಪಾಳದ ಅಧಿಕಾರಿಗಳು ಈ ರಣಹದ್ದನ್ನು ಅರಣ್ಯಕ್ಕೆ ಬಿಟ್ಟ 10 ತಿಂಗಳ ಬಳಿಕ, ಅಂದರೆ ಏಪ್ರಿಲ್‌ನಲ್ಲಿ ಏಕಾಏಕಿ ಅದು ರೇಡಾರ್ ಸಂಪರ್ಕವನ್ನು ಕಡಿದುಕೊಂಡು ನಾಪತ್ತೆಯಾಗಿತ್ತು.
ಸೆಪ್ಟೆಂಬರ್‌ನಲ್ಲಿ ನೇಪಾಳದ ತನಾಹುನ್ ಜಿಲ್ಲೆಯಲ್ಲಿ ಒಮ್ಮೆ ಸಂಪರ್ಕಕ್ಕೆ ಬಂದು, ಮತ್ತೆ ಕಣ್ಮರೆಯಾಗಿತ್ತು. ಅಲ್ಲಿನ ಅರಣ್ಯಾಧಿಕಾರಿಗಳಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ನ.13ರಂದು ಬಿಹಾರದ ದರ್ಭಾಂಗ ಜಿಲ್ಲೆಯ ಬೇನಿಪುರದ ಹೊಲದಲ್ಲಿ ರಣಹದ್ದು ಅಧಿಕಾರಿಗಳ ಕಣ್ಣಿಗೆ ಬಿದ್ದಿತ್ತು.
ಬಹಳ ದುರ್ಬಲವಾಗಿ, ಹಸಿವಿನಿಂದ ಕಂಗೆಟ್ಟಿದ್ದ ರಣಹದ್ದನ್ನು ಅವರು ಸೆರೆಹಿಡಿದು, ಅದಕ್ಕೆ ಸಾಕಷ್ಟು ಆಹಾರ ಒದಗಿಸಿದರು. ಕೆಲವು ದಿನಗಳ ಬಳಿಕ ಅದನ್ನು ಬಿಡುಗಡೆ ಮಾಡಲಾಗುವುದು. ನೇಪಾಳದ ಅಧಿಕಾರಿಗಳು ಕೂಡ ನಮ್ಮ ಶ್ರಮವನ್ನು ಶ್ಲಾ ಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋದಿಂದ ನಿರ್ಮಾಣವಾದ ಸಕಾರಾತ್ಮಕ ಶಕ್ತಿ ಕೊಚ್ಚಿ ಹೋಗಿದೆ: ರಾವುತ್