Advertisement
ದಿಲ್ಲಿಯ ತಿಲಕ್ ಮಾರ್ಗ್ ಸಮೀಪ ನೀರು ಮತ್ತು ಆಹಾರಕ್ಕಾಗಿ ಬೇಡುತ್ತಿದ್ದ ಆತನ ಬಳಿ ಎಸ್‌ಪಿಜಿ ಐಡಿ ಕಾರ್ಡ್ ಇದ್ದುದನ್ನು ಕಂಡ ಯಾರೋ ದಾರಿ ಹೋಕರು ಕಂಟ್ರೋಲ್ ರೂಮಿಗೆ ಫೋನ್ ಮಾಡಿದರು.
Related Articles
Advertisement
ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ರಾಕೇಶ್ ಕುಮಾರ್ ನ ತಂದೆ ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿದ್ದರು. ಹೊಸದಿಲ್ಲಿ, ಎಸ್‌ಪಿಜಿ ಕಮಾಂಡೋ ಪತ್ತೆ, ಅನ್ನ, ನೀರಿಗಾಗಿ ಭಿಕ್ಷೆ ಹೊಸದಿಲ್ಲಿ ; ಕಳೆದ ಸೆ.1ರಂದು ನಾಪತ್ತೆಯಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದ ಎಸ್‌ಪಿಜಿ ಕಮಾಂಡೋ, 31ರ ಹರೆಯದ ರಾಕೇಶ್ ಕುಮಾರ್ ಮಧ್ಯ ದಿಲ್ಲಿಯ ರಸ್ತೆಯಲ್ಲಿ ಅಲೆದಾಡುತ್ತಿದ್ದುದು ಪತ್ತೆಯಾಗಿದೆ. ದಿಲ್ಲಿಯ ತಿಲಕ್ ಮಾರ್ಗ್ ಸಮೀಪ ನೀರು ಮತ್ತು ಆಹಾರಕ್ಕಾಗಿ ಬೇಡುತ್ತಿದ್ದ ಆತನ ಬಳಿ ಎಸ್‌ಪಿಜಿ ಐಡಿ ಕಾರ್ಡ್ ಇದ್ದುದನ್ನು ಕಂಡ ಯಾರೋ ದಾರಿ ಹೋಕರು ಕಂಟ್ರೋಲ್ ರೂಮಿಗೆ ಫೋನ್ ಮಾಡಿದರು. ಒಡನೆಯೇ ಧಾವಿಸಿ ಬಂದ ಭದ್ರತಾ ಸಿಬಂದಿಗಳು ಆತನನ್ನು ಆಸ್ಪತ್ರೆಗೆ ಒಯ್ದು ಅಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಆತನನ್ನು ಆತನ ಕುಟುಂಬದವರಿಗೆ ಒಪ್ಪಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ. ಎಸ್‌ಪಿಜಿ ಕಮಾಂಡೋ ರಾಕೇಶ್ ಕುಮಾರ್‌ಗೆ ನಾಲ್ಕು ಲಕ್ಷ ರೂ. ಸಾಲದ ಹೊರೆ ಇದ್ದು ಅದರಿಂದ ಆತ ಮಾನಸಿಕ ಖನ್ನತೆಗೆ ಗುರಿಯಾಗಿದ್ದ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸದ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಆತ ಸೆ.1ರಂದು ನಾಪತ್ತೆಯಾಗಿದ್ದಾಗ ತನ್ನ ಸರ್ವಿಸ್ ರಿವಾಲ್ವರ್ ಮತ್ತು ಮೊಬೈಲ್ ಫೋನನ್ನು ಭದ್ರತಾ ಕೊಠಡಿಯಲ್ಲೇ ಬಿಟ್ಟು ಹೋಗಿದ್ದ. ಆ ದಿನದಿಂದ ಈ ವರೆಗೆ ಆತ ದಿಲ್ಲಿಯ ದ್ವಾರಕಾ ದಲ್ಲಿನ ತನ್ನ ಮನೆಗೂ ಹೋಗಿರಲಿಲ್ಲ ಎಂದು ವರದಿ ತಿಳಿಸಿದೆ. ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ರಾಕೇಶ್ ಕುಮಾರ್ ನ ತಂದೆ ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿದ್ದರು.