Advertisement

FB ಫ್ರೆಂಡ್‌ ಜತೆ ಇದ್ದ

07:35 AM Apr 25, 2018 | Team Udayavani |

ಲಾಹೋರ್‌: ಬೈಸಾಕಿ ಉತ್ಸವದಲ್ಲಿ ಪಾಲ್ಗೊಳ್ಳಲು ಪಾಕಿಸ್ಥಾನಕ್ಕೆ ತೆರಳಿದ್ದ ಭಾರತೀಯ ಸಿಕ್ಖ್ ಯುವಕ ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದ ಶೇಖ್‌ಪುರದಲ್ಲಿ ತನ್ನ ಫೇಸ್‌ ಬುಕ್‌ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿದ್ದು, ಮಂಗಳವಾರ ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿಸಲಾಗಿದೆ. ಅಮೃತ್‌ಸರದ ನಿವಾಸಿ ಅಮರ್‌ಜಿತ್‌ ಸಿಂಗ್‌ ಎ. 12ರಂದು ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದ. ಗುಂಪಿನಿಂದ ಆತ ಕಾಣೆಯಾಗಿದ್ದ. ಆತ ತನ್ನ ಸ್ನೇಹಿತ ಅಮೀರ್‌ ರಜಾಕ್‌ನನ್ನು ಭೇಟಿಯಾಗಲು ಬಂದಿದ್ದ. ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ, ರಜಾಕ್‌ನ ಕುಟುಂಬವೇ ಈ ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next