Advertisement

ನಾಪತ್ತೆಯಾಗಿದ್ದಾಕೆ ಮುಂಬಯಿಯಲ್ಲಿ  ಪತ್ತೆ; ಲವ್‌ ಜೆಹಾದ್‌ ಆರೋಪ

11:10 AM Jan 02, 2018 | Team Udayavani |

ಮಂಗಳೂರು: “ಲವ್‌ ಜೆಹಾದ್‌’ ಆರೋಪದ ಪ್ರಕರಣವೊಂದು ಮಂಗಳೂರಿನಲ್ಲಿ ಇದೀಗ ಬೆಳಕಿಗೆ ಬಂದಿದ್ದು, ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕಾಲೇಜು ಓದುತ್ತಿದ್ದ ಯುವತಿಯನ್ನು ಮುಂಬಯಿ ನಗರದಲ್ಲಿ ಪತ್ತೆ ಮಾಡಿ ಮರಳಿ ಹೆತ್ತವರ ಮನೆಗೆ ಕರೆತರಲಾಗಿದೆ. ವಿಶೇಷ ಅಂದರೆ ಈ ಯುವತಿ ಹಿಂದೂ ಪರ ಸಂಘಟನೆಯೊಂದರ ಮುಖಂಡರ ಪುತ್ರಿಯಾಗಿದ್ದಾರೆ.

Advertisement

ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ರೇಷ್ಮಾ ವಿ.ಕೆ. ಇದೀಗ ಲವ್‌ ಜೆಹಾದ್‌ ಆರೋಪದಡಿ ಸಿಲುಕಿ ಕೊಂಡಿರುವ ಯುವತಿ. ಮೂಲತಃ ಕಾಸರಗೋಡಿ ನವರಾಗಿರುವ ರೇಷ್ಮಾ ಮಂಗಳೂರಿನ ಬೆಂದೂರ್‌ವೆಲ್‌ನ ಮನೆಯೊಂದರಲ್ಲಿ ವಾಸ್ತವ್ಯ ಹೂಡಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದಳು. ಸಾಮಾಜಿಕ ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ಮೂರು ವರ್ಷಗಳ ಹಿಂದೆ ಈಕೆಗೆ ಮುಂಬಯಿ ಮಾಂಕುರ್ಡ್‌ ಎಂಬ ಊರಿನ  ಮಹಮದ್‌ ಇಕ್ಬಾಲ್‌ ಚೌಧುರಿ ಎಂಬಾತನ ಪರಿಚಯವಾಗಿತ್ತು. ಐದು ತಿಂಗಳ ಹಿಂದೆಯಷ್ಟೇ ರೇಷ್ಮಾ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದಳು. ರೇಷ್ಮಾ ನಾಪತ್ತೆಯಾಗಿರುವ ಬಗ್ಗೆ ಆಕೆ ಪೋಷಕರು ನಗರದ ಕದ್ರಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ ಇಲ್ಲಿವರೆಗೆ ರೇಷ್ಮಾ ಬಗ್ಗೆ ಹೆತ್ತವರಿಗೆ ಯಾವುದೇ ಮಾಹಿತಿ ಲಭಿಸಿರಲಿಲ್ಲ. ಪೊಲೀಸರಿಂದಲೂ ಈ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ರೇಷ್ಮಾ ಮುಂಬಯಿ ಯಲ್ಲಿ ಇರುವುದು ಪೋಷಕರ ಗಮನಕ್ಕೆ ಬಂದಿದ್ದು, ಆ ಪ್ರಕಾರ ಆಕೆಯ ಹೆತ್ತವರು ಮತ್ತು ಸಂಬಂಧಿಕರು ಮುಂಬಯಿಗೆ ತೆರಳಿ ರೇಷ್ಮಾಳನ್ನು ಇದೀಗ ಮಂಗಳೂರಿಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಲವ್‌ ಜೆಹಾದ್‌ ಆರೋಪ
ಇದೊಂದು ಲವ್‌ ಜೆಹಾದ್‌ ಪ್ರಕರಣವಾಗಿದ್ದು, ಸೂಕ್ತ ಕ್ರಮ ಜರಗಿಸ ಬೇಕು ಎಂದು ಬಜರಂಗ ದಳ ಪ್ರಾಂತ ಸಂಚಾ ಲಕ ಶರಣ್‌ ಪಂಪ್‌ವೆಲ್‌ ಆಗ್ರಹಿಸಿದ್ದಾರೆ. ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಹೆಣ್ಮಕ್ಕಳು ಲವ್‌ ಜೆಹಾದ್‌ಗೆ ಬಲಿಯಾಗಿ ನಾಪತ್ತೆಯಾಗುತ್ತಿರುವ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಕ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ವತಿಯಿಂದ ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ  ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಮತ್ತು ಕೇರಳ ದಲ್ಲಿ ಹೆಣ್ಮಕ್ಕಳು ನಾಪತ್ತೆ ಪ್ರಕರಣ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಯುವತಿಯರ ಪೈಕಿ ಹಲವರು ಮುಸ್ಲಿಂ ಹುಡುಗರೊಂದಿಗೆ ತೆರಳಿ, ಇಸ್ಲಾಂಗೆ ಮತಾಂತರವಾಗುತ್ತಿರುವುದೂ ತಿಳಿದು ಬಂದಿದೆ. ಕೆಲವು ಹುಡುಗಿಯರು ನಿರಂತರ ಕಿರುಕುಳ ಅನುಭವಿಸುವುದರೊಂದಿಗೆ, ಅವರು ವಿವಾಹವಾದ ಯುವಕರಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಇರುವುದನ್ನು ಅರಿತು ಮರಳಿ ಮನೆಗೆ ಬಂದ ಉದಾಹರಣೆಗಳೂ ಇವೆ.

ಎನ್‌ಐಎ ಮುಖಾಂತರ ತನಿಖೆ ನಡೆಸಿ ಎಲ್ಲ ಪ್ರಕರಣಗಳನ್ನು ಪ್ರಕರಣಗಳನ್ನು ಭೇದಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಹಿಂದೂ ಪರ ಸಂಘಟನೆಗಳು ಹೇಳುವ ಪ್ರಕಾರ, ರೇಷ್ಮಾ ನಾಪತ್ತೆ ಕೂಡ ಲವ್‌ ಜೆಹಾದ್‌ ಪ್ರಕರಣ ಆಗಿರುವ ಬಗ್ಗೆ ಅನುಮಾನ ಮೂಡಿದ್ದು, ಆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ.

Advertisement

ಹೆತ್ತವರಿಗೆ ರೇಷ್ಮಾ ಅಫಿದವಿತ್‌
ಈಗ ರೇಷ್ಮಾ ತನ್ನ ಪೋಷಕರಿಗೆ ನೀಡಿರುವ ಅಫಿದವಿತ್‌ ಬಹಿರಂಗ ಗೊಂಡಿದ್ದು, ಅದರಲ್ಲಿ “ನಾನು ನನ್ನ ಹೆತ್ತವರ ಜತೆ ಮಂಗಳೂರಿನಲ್ಲಿ ವಾಸ್ತವ್ಯ ಮಾಡಲು ಇಷ್ಟ ಪಡುತ್ತೇನೆ. ಸ್ವ ಇಚ್ಛೆಯಿಂದ ಈ ನಿರ್ಧಾರಕ್ಕೆ ಬಂದಿ ದ್ದೇನೆ; ಯಾರದೇ ಒತ್ತಡಕ್ಕೆ ಮಣಿದು ಈ ತೀರ್ಮಾನ ಮಾಡಿಲ್ಲ. ಹೆತ್ತವರ ಜತೆ ಸಂತೋಷದಿಂದ ಇದ್ದೇನೆ’ ಎಂದು ಆಕೆ ಅದರಲ್ಲಿ ಉಲ್ಲೇ ಖೀಸಿ ದ್ದಾರೆ. ಇದರಲ್ಲಿ ರೇಷ್ಮಾ ಅವರದು ಎನ್ನಲಾದ ಸಹಿಯೂ ಇದೆ.

ಅಪಹರಣ – ಪ್ರಿಯಕರನ ದೂರು
ಈ ನಡುವೆ ಆಕೆಯ ಪ್ರಿಯಕರ ಎನ್ನಲಾದ ಮಹಮದ್‌ ಇಕ್ಬಾಲ್‌ ಚೌಧುರಿ ಮುಂಬಯಿಯ ಮಾಂಕುದ್‌ì ಪೊಲೀಸ್‌ ಠಾಣೆಯಲ್ಲಿ ರೇಷ್ಮಾ ಕಾಣೆಯಾಗಿರುವುದಾಗಿ ದೂರು ಕೊಟ್ಟಿದ್ದಾರೆ. “ನನ್ನ ಪತ್ನಿಯನ್ನು ಮಂಗಳೂರಿನಿಂದ ನಾಲ್ವರು ಬಂದು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ನಾನು ರೇಷ್ಮಾಳನ್ನು ಮದುವೆ ಯಾಗಿದ್ದೇನೆ’ ಎಂದು ಆತ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖೀಸಿದ್ದಾನೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಆಕೆಯನ್ನು ಹುಡುಕಿಕೊಂಡು ಮಂಗಳೂರಿಗೆ ಆಗಮಿಸಿರುವುದಾಗಿ ವದಂತಿಗಳು ಹಬ್ಬಿವೆ. ಆದರೆ ಮಂಗಳೂರಿನ ಪೊಲೀಸರಿಗೆ ಈ ಕುರಿತು ಮುಂಬಯಿ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಕಮಿಷನರ್‌ ಹೇಳಿಕೆ
ರೇಷ್ಮಾ ನಾಪತ್ತೆಯಾದ ಬಗ್ಗೆ ಅವರ ಹೆತ್ತವರು ಸುಮಾರು 5 ತಿಂಗಳ ಹಿಂದೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮಹಾ ರಾಷ್ಟ್ರ ಪೊಲೀಸರು ಮಂಗಳೂರಿಗೆ ಬಂದಿರುವ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ ಎಂದು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಸ್ಪಷ್ಟಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next