Advertisement

ಬ್ರಿಟನ್‌ನಿಂದ ಬಂದ 151 ಜನರ ಲಿಂಕ್ ಮಿಸ್ಸಿಂಗ್: ಪಾಲಿಕೆಗೆ ರೂಪಾಂತರದ ತಲೆನೋವು !

10:34 PM Dec 25, 2020 | mahesh |

ಬೆಂಗಳೂರು: ನಗರಕ್ಕೆ ಬ್ರಿಟನ್‌ನಿಂದ ಬಂದಿರುವ 1,512 ಜನರಲ್ಲಿ 151ಜನ ಎಲ್ಲಿದ್ದಾಾರೆ ಎಂದು ನಾಲ್ಕು ದಿನವಾದರೂ ಪತ್ತೆಯಾಗದೆ ಇರುವುದು ಪಾಲಿಕೆ ವ್ಯಾಪ್ತಿಯಲ್ಲಿ ರೂಪಾಂತರ ಕೊರೊನಾ ಸೋಂಕು ಭೀತಿ ಸೃಷ್ಟಿಯಾಗಿದೆ.

Advertisement

ಈ ಮಧ್ಯೆ ಬ್ರಿಟನ್‌ನಿಂದ ಬಂದ ನಾಲ್ವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾದಂತಾಗಿದೆ.

ಬ್ರಿಟನ್‌ನಿಂದ ಬಂದಿರುವವರನ್ನು ಪತ್ತೆ ಮಾಡಿ ಕೊಡಲೇ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಸರ್ಕಾರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಒಟ್ಟು 1,512 ಜನರಲ್ಲಿ ಇಲ್ಲಿಯವರೆಗೆ 542 ಜನರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 11 ಜನರಿಗೆ ಕೊರೊನಾ ಸೋಂಕು ಇರುವುದು ದೃಪಟ್ಟಿದೆ.

ಉಳಿದ 319 ಜನರ ಕೊರೊನಾ ಸೋಂಕು ವರದಿ ನೆಗೆಟಿವ್ ಬಂದಿದ್ದು, 212 ಜನರ ಪರೀಕ್ಷಾಾ ವರದಿಯನ್ನು ಪಾಲಿಕೆ ನಿರೀಕ್ಷೆೆ ಮಾಡುತ್ತಿಿದೆ. 706 ಜನರನ್ನು ಇನ್ನಷ್ಟೇ ಸೋಂಕು ಪರೀಕ್ಷೆಗೆ ಒಳಪಡಿಸಬೇಕಾಗಿದೆ. 1,512 ಜನರಲ್ಲಿ 1,248 ಜನರ ಮಾಹಿತಿ ಲಭ್ಯವಾಗಿದೆ ಎಂದು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾಾರೆ.

47 ಜನ ಹೊರಜಿಲ್ಲೆ ಮತ್ತು ಹೊರ ರಾಜ್ಯದವರು: ನಗರಕ್ಕೆ ಬ್ರಿಿಟನ್‌ನಿಂದ ಆಗಮಿಸಿದವರಲ್ಲಿ 47 ಜನ ಹೊರ ಜಿಲ್ಲೆ ಮತ್ತು ಹೊರ ರಾಜ್ಯಕ್ಕೆ ಸೇರಿದವರಾಗಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಆಯಾ ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next