ಕಾಠ್ಮಂಡು: ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ಚಾರಣ ಕೈಗೊಂಡಿದ್ದ ಸಮಯದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಅನುರಾಗ್ ಮಾಲೂ ಅವರನ್ನು ಪತ್ತೆ ಹಚ್ಚಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ವೃತ್ತಿಪರ ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್- ಜಿಂಬಾಬ್ವೆ ಆಟಗಾರ ಗ್ಯಾರಿ ಬ್ಯಾಲೆನ್ಸ್
ಸೋಮವಾರ ಕಣ್ಮರೆಯಾಗಿದ್ದ ಮಾಲೂ:
ರಾಜಸ್ಥಾನದ ಕಿಶನ್ ಗಢ್ ನಿವಾಸಿ ಮಾಲೂ (34ವರ್ಷ) ಅವರು ಸೋಮವಾರ ಕ್ಯಾಂಪ್ IIIನಿಂದ ಇಳಿಯುತ್ತಿದ್ದ ವೇಳೆ ಕಾಲುಜಾರಿ ಬರೋಬ್ಬರಿ 6,000 ಅಡಿ ಆಳಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಅನ್ನಪೂರ್ಣ ಪರ್ವತವು ವಿಶ್ವದ 10ನೇ ಅತೀ ಎತ್ತರದ ಪರ್ವತವಾಗಿದೆ.
ಶೋಧಕಾರ್ಯಾಚರಣೆಯಲ್ಲಿ ಅನುರಾಗ್ ಮಾಲೂ ಅವರು ಜೀವಂತವಾಗಿ ಪತ್ತೆಯಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಹೋದರ ಸುಧೀರ್ ತಿಳಿಸಿದ್ದಾರೆ.
ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಲೂ ಅವರು 8,000 ಮೀಟರ್ ಗಿಂತಲೂ ಅಧಿಕ ಎತ್ತರದ ಎಲ್ಲಾ 14 ಪರ್ವತಗಳನ್ನು ಏರಿ ಸಾಧನೆ ಮೆರೆದಿದ್ದರು. ಇವರು ಅಂಟಾರ್ಟಿಕ್ ಯೂತ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮಂಗಳವಾರ ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ಕಣ್ಮರೆಯಾಗಿದ್ದ ಬಲ್ಜೀತ್ ಕೌರ್ ಮತ್ತು ಅರ್ಜುನ್ ವಾಜಪೇಯಿ ಎಂಬ ಪರ್ವತಾರೋಹಿಗಳನ್ನು ರಕ್ಷಿಸಲಾಗಿತ್ತು ಎಂದು ವರದಿ ತಿಳಿಸಿದೆ.