Advertisement

ಸ್ವಲ್ಪದರಲ್ಲೆ ತಪ್ಪಿತು ಮಾನಭಂಗ ಯತ್ನ

11:12 AM Aug 12, 2017 | |

ಬೆಂಗಳೂರು: ರಾಜಧಾನಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆಯಲಿದ್ದ ಪೈಶಾಚಿಕ ಕೃತ್ಯವೊಂದು ಸ್ವಲ್ಪದರಲ್ಲೇ ತಪ್ಪಿದೆ. ರೈಲಿನಲ್ಲಿ ಹೋಗಲು ಹಣವಿಲ್ಲದ ಕಾರಣ ನಿಲ್ದಾಣದಲ್ಲೇ ಕುಳಿತಿದ್ದ ಯುವತಿಯನ್ನು ಮೂವರು ದುಷ್ಕರ್ಮಿಗಳು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಪೈಕಿ ಇಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಿ.ಕೆ.ನಗರದ ಆಟೋ ಚಾಲಕ ಫ‌ಯಾಜ್‌(33),
ಜುಬ್ಬೇರ್‌ಖಾನ್‌(24) ಬಂಧಿತರು. ಮತ್ತೂಬ್ಬ ಆರೋಪಿ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಆರೋಪಿಗಳು ಸಂತ್ರಸ್ತ ಯುವತಿಯ ಜತೆಗಿದ್ದ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮೂವರ ವಿರುದ್ಧ ಲೈಂಗಿಕ ಕಿರುಕುಳ, ಅಪಹರಣ ಹಾಗೂ ಹಲ್ಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಚಿತ್ರದುರ್ಗ ಮೂಲದ ಸಂತ್ರಸ್ತೆ ಹಾಗೂ ಸಹೋದರ ಹೊಸೂರು ರಸ್ತೆಯಲ್ಲಿರುವ ಸಂಬಂಧಿಯೊಬ್ಬರನ್ನು ಭೇಟಿಯಾಗಲು ಬಂದಿದ್ದು, ಅವರು ಸಿಗದಿದ್ದಾಗ ವಾಪಸ್‌ ತೆರಳಲು ನಿಲ್ದಾಣಕ್ಕೆ ಬಂದಿದ್ದಾರೆ. ಚಿತ್ರದುರ್ಗದ ರೈಲು ತಡರಾತ್ರಿ 12 ಗಂಟೆಗೆ ಹೊರಡಲಿದೆ ಎಂಬ ಮಾಹಿತಿ ಪಡೆದುಕೊಂಡ ಇಬ್ಬರು, ರೈಲು ಪ್ರಯಾಣಕ್ಕೆ ಹಣವಿಲ್ಲದೇ ಅಲ್ಲೇ ಕುಳಿತಿದ್ದಾರೆ. ಈ ವೇಳೆ ಮೂವರು ದುಷ್ಕರ್ಮಿಗಳು ಯುವತಿಯ ಸಹೋದರನ ಮೇಲೆ ಹಲ್ಲೆನಡೆಸಿ, ಯುವತಿಯನ್ನು ಹೊತೊಯ್ದಿದ್ದರು. ಇದನ್ನು ನೋಡಿದ್ದ ಆಟೋ ಚಾಲಕ ಅಸ್ಗರ್‌ಪಾಷಾ ನೀಡಿದ ಮಾಹಿತಿ ಮೇರೆಗೆ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೃತ್ಯ ನಡೆದ ಒಂದು ಗಂಟೆಯಲ್ಲೇಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಏನಿದು ಘಟನೆ?: ಚಿತ್ರದುರ್ಗದ ಯುವತಿ ಮತ್ತು ಆಕೆಯ ದೊಡ್ಡಪ್ಪನ ಮಗ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ತನ್ನ ಅಕ್ಕನ ಮನೆಗೆಂದು ಗುರುವಾರ ಬೆಳಗ್ಗೆ ನಗರಕ್ಕೆ ಬಂದಿದ್ದಾರೆ. ಹೊಸೂರುನಲ್ಲಿರುವ ಸಹೋದರಿ ಮನೆ ಬದಲಾಯಿಸಿದ್ದರು. ಅಲ್ಲದೇ
ಅವರ ಮೊಬೈಲ್‌ ಕೂಡ ಸ್ವೀಚ್‌ ಆಫ್ ಆಗಿತ್ತು. ಕೊನೆಗೆ ಭೇಟಿಯಾಗಲು ಸಾಧ್ಯವಾಗದೆ, ವಾಪಸ್‌ ಹೋಗಲು ನಿರ್ಧರಿಸಿದ್ದರು. ಮಧ್ಯಾಹ್ನ ಇಬ್ಬರು ಚಿತ್ರದುರ್ಗಕ್ಕೆ ತೆರಳಲು ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಊರಿಗೆ ತೆರಳಲು
ಬೇಕಿರುವಷ್ಟು ಹಣ ಇಬ್ಬರ ಬಳಿಯೂ ಇರಲಿಲ್ಲ. ಇದರಿಂದಾಗಿ ರೈಲು ನಿಲ್ದಾಣದಲ್ಲೇ ಉಳಿದುಕೊಂಡು, ಮರುದಿನ ಬೆಳಗ್ಗೆ ಪರಿಸ್ಥಿತಿಯನ್ನು ತಿಳಿಸಿ ಯಾರಿಂದಾದರೂ ಸಹಾಯ ಪಡೆದು ತೆರಳಲು ತೀರ್ಮಾನಿಸಿದ್ದರು. ಇಬ್ಬರೇ ರೈಲು ನಿಲ್ದಾಣದಲ್ಲಿ ಕುಳಿತಿದ್ದನ್ನು
ಗಮನಿಸಿದ ದುಷ್ಕರ್ಮಿಗಳು, ತಡರಾತ್ರಿ ಅಣ್ಣ-ತಂಗಿಯ ಬಳಿ ಬಂದು ವಿಚಾರಸಿದ್ದಾರೆ. ಆಗ ವಾಸ್ತವ ಸ್ಥಿತಿಯನ್ನು ಇಬ್ಬರು ಹೇಳಿಕೊಂಡಿದ್ದಾರೆ. ಬಳಿಕ ಹಣ ಕೊಡುವುದಾಗಿ ಕರೆದೊಯ್ಯುವಾಗ ಸಂತ್ರಸ್ತೆಯ ಸಹೋದರ ಮೇಲೆ ಹಲ್ಲೆ ನಡೆಸಿದ್ದಾರೆ. ಒಬ್ಟಾತ ಯುವತಿಯ ಬಾಯಿ ಮುಚ್ಚಿ ಆಟೋದಲ್ಲಿ ಕೂರಿಸಿಕೊಂಡಿದ್ದಾನೆ. ಕೊನೆಗೆ ಸಹೋದರನನ್ನು ಅಲ್ಲೇ ಪಕ್ಕಕ್ಕೆ ತಳ್ಳಿ ಆಟೋದಲ್ಲಿ ಸಂತ್ರಸ್ತೆಯನ್ನು ಕರೆದೊಯ್ದಿದ್ದಾರೆ. ಇದೇ ವೇಳೆ ರೈಲ್ವೆ ನಿಲ್ದಾಣದ ಬಳಿಯಿದ್ದ ಅಟೋ ಚಾಲಕ ಅಸ್ಗರ್‌ ಪಾಷಾ ಕೃತ್ಯವನ್ನು ನೋಡಿ
ದ್ದಾನೆ. ಬಳಿಕ ನೆರವಿಗೆ ಬಂದು, ಹಲ್ಲೆಗೊಳಗಾದ ಯುವಕನನ್ನ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ.

ಟ್ರಾನ್ಸ್‌ಪೊರ್ಟ್‌ ಕಚೇರಿಯಲ್ಲಿದ್ದ ಆರೋಪಿಗಳು: ನಂತರ ಠಾಣೆಯಲ್ಲಿದ್ದ ಎಎಸ್‌ಐ ರಾಜಣ್ಣ ಮತ್ತು ಗೃಹ ರಕ್ಷಕದಳ ಸಿಬ್ಬಂದಿ ಶ್ರೀನಿವಾಸ್‌ ಗಸ್ತು ಪೊಲೀಸರಿಗೆ ಮಾಹಿತಿ ನೀಡಿ ತಾವೂ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಆರೋಪಿಗಳು ಹೋದ ಸ್ಥಳದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ರೈಲು ನಿಲ್ದಾಣದಿಂದ 250 ಮೀಟರ್‌ ದೂರದಲ್ಲಿರುವ ಕಟ್ಟಡದಲ್ಲಿದ್ದ ಟ್ರಾನ್ಸ್‌ ಪೋರ್ಟ್‌ ಕಚೇರಿಯನ್ನು ತಪಾಸಣೆ ನಡೆಸಿದಾಗ ಯುವತಿ ಪತ್ತೆಯಾಗಿದ್ದಾರೆ. ಇದೇ ವೇಳೆ ಆರೋಪಿಗಳ ಪೈಕಿ ಫ‌ಯಾಜ್‌ ಯುವತಿಯ ಮೇಲೆ ಎರಗಿದ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೂಡಲೇ ಯುವತಿ
ಕೂಗಿಕೊಂಡಿದ್ದಾಳೆ. ಈ ಶಬ್ಧ ಕೇಳಿದ ಸಿಬ್ಬಂದಿ ಕೂಡಲೇ ಟ್ರಾನ್ಸ್‌ಪೊರ್ಟ್‌ ಕಚೇರಿಯ ಶೆಟರ್‌ ಎಳೆದು, ಯುವತಿಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ತಪ್ಪಿಸಿಕೊಂಡಿದ್ದರು. ಈ ಪೈಕಿ ಜುಬೇರ್‌ನನ್ನು ಶುಕ್ರವಾರ ಮುಂಜಾನೆ
ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಸುರಕ್ಷಿತವಾಗಿದ್ದಾರೆ ಚಿಕ್ಕಮಗಳೂರಿನ ಫ‌ಯಾಜ್‌ಗೆ ನಗರದಲ್ಲಿ ಮನೆಯಾಗಲಿ, ಕೆಲಸವಾಗಲಿ ಇಲ್ಲ. ಆಟೋ ಚಾಲನೆ, ಕೂಲಿಕೆಲಸ ಎಲ್ಲವನ್ನು ಮಾಡುತ್ತಾನೆ. ಎಲ್ಲೆಂದರಲ್ಲೇ ಮಲಗುತ್ತಿದ್ದ. ಟ್ರಾನ್ಸ್‌ಪೊರ್ಟ್‌ ಕಚೇರಿಯ ಬಾಗಿಲನ್ನು ಸಾಮಾನ್ಯವಾಗಿ ಹಾಕುತ್ತಿರಿಲಿಲ್ಲ. ಈ ಮಾಹಿತಿ ತಿಳಿದಿದ್ದ ಆರೋಪಿ ಅಲ್ಲಿಗೇ ಯುವತಿಯನ್ನು ಕರೆದೊಯ್ದಿದ್ದಾನೆ. ಕೃತ್ಯವೆಸಗುವಾಗ ಆರೋಪಿಗಳು ಮಾದ್ಯ ಹಾಗೂ ಮಾದಕ ವಸ್ತು ಸೇವನೆ ಮಾಡಿದ್ದರು ಎಂಬುದು ತಿಳಿದು
ಬಂದಿದೆ. ಅಲ್ಲದೇ ಯುವತಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸುವ ವೇಳೆ ಫ‌ಯಾಜ್‌ನನ್ನು ಕೆಳಗೆ ತಳ್ಳಿದ್ದಾಳೆ. ಮದ್ಯದ ನಶೆಯಲ್ಲಿದ್ದ ಆತ ಮೇಲೇಳಲು ಸಾಧ್ಯವಾಗದೆ ಅಲ್ಲಿಯೇ ಬಿದಿದ್ದ. ಯುವತಿ ಮೇಲೆ ಯಾವುದೇ ದೌರ್ಜನ್ಯವಾಗಿಲ್ಲ. ಆಕೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗದು ಬಹುಮಾನ ವಿತರಣೆ ಕ್ಷಿಪ್ರಕಾರ್ಯಾಚರಣೆ ನಡೆಸಿದ ಯಶವಂತಪುರ ಠಾಣೆ ಇನ್‌ಸ್ಪೆಕ್ಟರ್‌ ಮುದ್ದರಾಜು ಮತ್ತು ಪೇದೆ ನಟರಾಜ್‌, ಪ್ರಸನ್ನ, ರಮೇಶ್‌ ಸೇರಿದಂತೆ ಸಿಬ್ಬಂದಿಗೆ 25 ಸಾವಿರ ನಗದು ಮತ್ತು ಆಟೋ ಚಾಲಕ ಆಸ್ಗರ್‌ ಪಾಷಾ 5ಸಾವಿರ ಚೆಕ್‌ ನೀಡಿ ಪೊಲೀಸ್‌ ಆಯುಕ್ತರು ಗೌರವಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next