Advertisement
ಇದೀಗ ಈ ಸಾಲಿಗೆ ಮೈಂಡ್-ಬಾಡಿ ಕೋಚಿಂಗ್ ಹೊಸದಾಗಿ ಸೇರಿಕೊಂಡಿದೆ. ಮೈಂಡ್-ಬಾಡಿ ಕೋಚಿಂಗ್ ಇತ್ತೀಚೆಗೆ ಕ್ರಿಕೆಟ್‌ನ ಒಂದು ಭಾಗವೇ ಆಗಿರುವುದು ವಿಶೇಷ. ಹೀಗಾಗಿ ಎಲ್ಲ ಕ್ರಿಕೆಟ್ ಕ್ಲಬ್‌ನವರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಂತೆಯೇ ಬೆಂಗಳೂರಿನಲ್ಲಿ ಹೊಸದಾಗಿ ಆರಂಭವಾಗಿರುವ “ಕಾಸ್ಮಿಕ್ ಡ್ಯಾರೆನ್ ಲೆಹ್ಮನ್ ಕ್ರಿಕೆಟ್ ಅಕಾಡೆಮಿ’ ರಾಜ್ಯದಲ್ಲಿ ಮೊದಲ ಬಾರಿಗೆ ನುರಿತ ಮಹಿಳಾ ಸೈಕಾಲಾಜಿಸ್ಟ್ ಆಸ್ಟ್ರೇಲಿಯಾದ ಜ್ಯಾಮಿ ಎ ಕಾರ್ಟ್ ಅವರನ್ನು ಪರಿಚಯಿಸುತ್ತಿದೆ. ರಾಜ್ಯ ಕ್ರಿಕೆಟಿಗರ ಮನಸ್ಸನ್ನು ಅರಿತು ಅವರಿಗೆ ಉಪಯುಕ್ತ ಸಲಹೆಗಳನ್ನು ಜ್ಯಾಮಿ ಎ ಕಾರ್ಟ್ ನೀಡಲಿದ್ದಾರೆ. ಇದು ಪ್ರಮುಖ ಕೂಟಗಳಲ್ಲಿ ಕ್ರಿಕೆಟಿಗರಿಗೆ ನೆರವಾಗಲಿದೆ.
Related Articles
ಜ್ಯಾಮಿ ಎ ಕಾರ್ಟ್ ಆಸ್ಟ್ರೇಲಿಯಾದವರು. ಅಡಿಲೇಡ್ ವಿಶ್ವವಿದ್ಯಾನಿಲಯದಿಂದ “ಬ್ಯಾಚುಲರ್ ಆಫ್ ಸೈಕಾಲಾಜಿಕಲ್ ಸೈನ್ಸ್’ ಪದವಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ 4 ವರ್ಷ ಆಸೀಸ್‌ನಲ್ಲಿ ವ್ಯಕ್ತಿಯ ವರ್ತನೆ ಕುರಿತಂತೆ ಅಧ್ಯಯನ ನಡೆಸಿದರು. ಅಷ್ಟೇ ಅಲ್ಲ ಭಾರತದ ಯೋಗಾ ಶಿಕ್ಷಣವನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಕ್ರಿಕೆಟ್‌ಗೆ ಬರುವ ಮೊದಲು ಫುಟ್‌ಬಾಲ್, ಈಜು ಸೇರಿದಂತೆ ವಿವಿಧ ಕ್ರೀಡೆಗಳಲ್ಲಿರುವ ಆಟಗಾರರಿಗೆ ಮೈಂಡ್ ಕೋಚಿಂಗ್ ಮಾಡಿದ್ದಾರೆ. ಜತೆ ಜತೆಯಾಗಿ ಯೋಗಾ ತರಬೇತಿಯನ್ನೂ ನೀಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಆರಂಭವಾಗಿರುವ ಆಸೀಸ್ ಕ್ರಿಕೆಟ್ ದಿಗ್ಗಜ ಡ್ಯಾರೆನ್ ಲೆಹ್ಮನ್ ಅವರ ಅಕಾಡೆಮಿಯಲ್ಲಿ ರಾಜ್ಯ ಕ್ರಿಕೆಟಿಗರಿಗೆ ಇವರು ತರಬೇತಿ ನೀಡಲಿದ್ದಾರೆ.
Advertisement
ಬೆಂಗಳೂರಿನಲ್ಲಿ ನೂತನವಾಗಿ ಆರಂಭವಾಗಿರುವ ಅಕಾಡೆಮಿಯಲ್ಲಿ ಜ್ಯಾಮಿ ಎ ಕಾರ್ಟ್ 6 ವಾರಗಳ ತನಕ ಆಟಗಾರರಿಗೆ ಮೈಂಡ್-ಬಾಡಿ ಕೋಚಿಂಗ್ ನೀಡಲಿದ್ದಾರೆ. ಜತೆಗೆ ಯೋಗವನ್ನು ಹೇಳಿಕೊಡಲಿದ್ದಾರೆ. ಮೇ.13ರಿಂದ ಕಿಣಿ ನ್ಪೋರ್ಟ್ಸ್ ಅರೆನಾದಲ್ಲಿ ತರಬೇತಿ ಆರಂಭವಾಗಲಿದೆ.– ಆರ್.ಕಿರಣ್ ಕುಮಾರ್, ನಿರ್ವಾಹಕ ಕಿಣಿ ನ್ಪೋರ್ಟ್ಸ್ ಅರೆನಾ – ಹೇಮಂತ್ ಸಂಪಾಜೆ