Advertisement
ಈ ಭಾರಿ ಸತತವಾಗಿ ಸುರಿದ ನಿರಂತರ ಮಳೆಯಿಂದ್ದಾಗಿ ಕಳೆದ ೨೨ ವರ್ಷಗಳ ಬಳಿಕ ಬೇಗೂರು ಕೆರೆ ತುಂಬಿ ಕೆರೆ ಕೋಡಿ ಬಿದ್ದಿದೆ, ಇದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಸಂತಸಕ್ಕೆ ಕಾರಣವಾಗಿದೆ, ಸಂತಸದಲ್ಲಿ ಇದ್ದ ರೈತರಿಗೆ ದುಷ್ಟಕರ್ಮಿಗಳು ಕೆರೆಯ ಕೋಡಿ ಹೊಡೆದು ನೀರು ಹೊರ ಬಿಟ್ಟಿರುವುದರಿಂದ ಅಘಾತಕ್ಕೆ ಕಾರಣವಾಗಿದೆ.
ದುಷ್ಟಕರ್ಮಿಗಳು ಕೆರೆಯ ಕೋಡಿಯ ಸುಮಾರು ನಾಲ್ಕು ಅಡಿಗೂ ಅಧಿಕ ಕಲ್ಲು ತೆಗೆದು ಸುಮಾರು ಎರಡು ಅಡಿ ಅಳ ತೆಗೆದು ನೀರನ್ನು ಹೊರಗೆ ಬಿಟ್ಟಿದ್ದಾರೆ, ಇದನ್ನು ನೋಡಿದ ಗ್ರಾಮಸ್ಥರು ಹೇಮಾವತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ, ತಕ್ಷಣ ಕಾರ್ಯಪ್ರವೃತರಾದ ಹೇಮಾವತಿ ಎಇಇ ರವಿ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ದೌಡಾಯಿಸಿದರು, ದುಷ್ಟಕರ್ಮಿಗಳು ಹೊಡೆದು ಹಾಕಿರುವ ಕೆರೆಯ ಕೋಡಿಯನ್ನು ಪರಿಶೀಲಿಸಿದರು, ಬಳಿಕ ಸ್ಥಳೀಯ ಜನರ ಸಹಕಾರದೊಂದಿಗೆ ಹಾಳಾಗಿರುವ ಕೆರೆಯ ಕೋಡಿ ಜಾಗಕ್ಕೆ ಕಲ್ಲುಗಳನ್ನು ಹಾಕಿ ಮಣ್ಣಿನ ಚೀಲಗಳನ್ನು ಬಿಟ್ಟಿ ದುರಸ್ಥಿ ಮಾಡಿದರು. ಕೆರೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕಿಡಿಗೇಡಿಗಳು ತಮ್ಮ ಜಮೀನು ಮುಳುಗಡೆ ಆಗುತ್ತದೆ ಎಂದು ಕೆರೆ ಒತ್ತುವರಿದಾರರು ಕೆರೆಯ ಕೋಡಿಯ ಕಲ್ಲನ್ನು ತೆಗೆದು ನೀರನ್ನು ಹೊರಗಡೆ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Related Articles
ಕೆರೆ ಕೋಡಿ ಹಾಳು ಮಾಡಿರುವ ಸಂಬಂಧ ಪತ್ರಕರ್ತರೊಂದಿಗೆ ಮಾತನಾಡಿದ ಕುಣಿಗಲ್ ಹೇಮಾವತಿ ಎಇಇ ರವಿ, ಯಾರೋ ದುಷ್ಕರ್ಮಿಗಳು ಕೆರೆಯ ಕೋಡಿಯ ಕಲ್ಲನ್ನು ತೆಗೆದು ನೀರನ್ನು ಹೊರಬಿಟ್ಟಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿ ಹಾನಿಯಾಗಿರುವ ಕೋಡಿ ಜಾಗಕ್ಕೆ ಕಲ್ಲುಗಳು ಹಾಕಿಸಿ ಮಣ್ಣಿನ ಮೂಟೆಯನ್ನು ಬಿಟ್ಟು ತಾತ್ಕಾಲಿಕವಾಗಿ ದುರಸ್ಥಿ ಮಾಡಲಾಗಿದೆ ಆದರೆ ಅಲ್ಪ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದೆ, ಕತ್ತಲೆಯಾದ ಕಾರಣ ಸದ್ಯಕ್ಕೆ ಕಾಮಗಾರಿ ನಿಲ್ಲಿಸಲಾಗಿದೆ ನಾಳೆ ಬೆಳಗ್ಗೆ ಇದರ ದುರಸ್ಥಿ ಮಾಡಲಾಗುವುದು ಎಂದು ಹೇಳಿದ ಅವರು ಕೆರೆ ಕೋಡಿ ಹೊಡೆದಿರುವುದು ಅಪರಾಧವಾಗಿದೆ ಕೆರೆ ಕೋಡಿ ಹೊಡೆದಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕ್ರಮಕೈಗೊಳ್ಳಲು ಪೊಲೀಸರಿಗೆ ದೂರು ನೀಡಲಾಗುವುದೆಂದು ತಿಳಿಸಿದರು.
Advertisement