Advertisement

ಮೀರಾರೋಡ್‌: ಶನಿಮಹಾಪೂಜೆ, ಯಕ್ಷಗಾನ ತಾಳಮದ್ದಳೆ

03:09 PM Oct 02, 2018 | Team Udayavani |

ಮುಂಬಯಿ: ಮೀರಾ ರೋಡ್‌ ಪೂರ್ವದ ಮೀರಾಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಉತ್ಸವದ ಅಂಗವಾಗಿ ಸೆ. 28 ರಂದು ಮುಂಬಯಿ ಪ್ರವಾಸ ದಲ್ಲಿರುವ ತವರೂರಿನ ಶ್ರೀ ಶನೀಶ್ವರ ಯಕ್ಷಗಾನ ಮಂಡಳಿ ಪಕ್ಷಿಕೆರೆ ಇದರ ಕಲಾವಿದರಿಂದ ಶ್ರೀ ಶನೀಶ್ವರ ಮಹಾತೆ¾ ಯಕ್ಷಗಾನ ತಾಳಮದ್ದಳೆ ನಡೆಯಿತು.

Advertisement

ಶ್ರೀ ಮಹಾಲಿಂಗೇಶ್ವರ ದೇವಸ್ಥಾ ನದ ಪ್ರಧಾನ ಅರ್ಚಕ ಸಾಂತಿಂಜ ಜನಾದ‌ìನ ಭಟ್‌ ಇವರ ಪೌರೋ ಹಿತ್ಯದಲ್ಲಿ ಕಲೊ³àಕ್ತ ಪೂಜೆ, ಮಹಾಮಂಗಳಾರತಿ, ಕರ್ಪೂರ ಆರತಿ, ಮಹಾಪ್ರಸಾದ ವಿತರಣೆ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಾಣೂರು ಜನಾರ್ದನ ಭಟ್‌ ಇವರು, ನಾನು, ನನ್ನದು, ಎಲ್ಲವೂ ನನ್ನಿಂದಲೇ ಎಂಬ ದರ್ಪ ಸಲ್ಲದು. ಅಧಿಕಾರ, ಅಂತಸ್ತು ಶಾಶ್ವತವಲ್ಲ. ಪ್ರೀತಿ, ಸೌಹಾದ‌ìತೆಯಿಂದ ಬಾಳುವುದೇ ಮಾನವ ಧರ್ಮ. ಅಹಂ ತ್ಯಜಿಸಿ ಸಹಬಾಳ್ವೆಯಿಂದ ಬಾಳುವುದೇ ಮಾನವ ಧರ್ಮ. ಅಹಂನ್ನು ತ್ಯಜಿಸಿ ಸಹಬಾಳ್ವೆಯಿಂದ ಬದುಕು ನಿರೂಪಿಸಿ ಶನಿದೇವರ ಸಾಮೀಪ್ಯ ಹೊಂದೋಣ ಎಂದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಶಿಮಂತೂರು ಮಜಲಗುತ್ತು ರಂಜನ್‌ ಬಾಬಾ ಶೆಟ್ಟಿ, ಉದ್ಯಮಿ ಐಕಳ ಆನಂದ ಶೆಟ್ಟಿ, ಮುಂಬಯಿ ಪ್ರವಾಸಿ ತಂಡದ ಸಂಚಾಲಕ ದಿನೇಶ್‌ ಶೆಟ್ಟಿ ಕಾಪುಕಲ್ಯಾ, ಸಾಂತಿಂಜ ಮಾಧವ ಭಟ್‌, ಕೃಷ್ಣ ಜಿ. ಶೆಟ್ಟಿ, ಸುಂದರ ಶೆಟ್ಟಿಗಾರ್‌, ಅನಿಲ್‌ ಶೆಟ್ಟಿ, ಪ್ರಸನ್ನ ಶೆಟ್ಟಿ ಕುರ್ಕಾಲ್‌, ಪ್ರಸನ್ನ ಶೆಟ್ಟಿ ಬೋಳ, ಶಿಮಂತೂರು ಮಜಲಗುತ್ತು ಚಂದ್ರ ಶೆಟ್ಟಿ, ಉದಯ ಶೆಟ್ಟಿ ಪೆಲತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಶನೀಶ್ವರ ಪೂಜೆ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಸತೀಶ್‌ ಶೆಟ್ಟಿ ಬೊಂದೆಲ್‌, ಚೆಂಡೆ  ಮತ್ತು ಮದ್ದಳೆಯಲ್ಲಿ ದಯಾನಂದ ಶೆಟ್ಟಿಗಾರ್‌ ಮಿಜಾರ್‌ ಮತ್ತು ಪದ್ಮನಾಭ ಶೆಟ್ಟಿಗಾರ್‌ ಪಕ್ಷಿಕೆರೆ, ಅರ್ಥಧಾರಿಗಳಾಗಿ ಆನಂದ ಶೆಟ್ಟಿ ಇನ್ನ, ನವನೀತ್‌ ಶೆಟ್ಟಿ ಕದ್ರಿ, ಅಶೋಕ್‌ ಶೆಟ್ಟಿ ಸರಪಾಡಿ, ಗಣೇಶ್‌ ಶೆಟ್ಟಿ ಕನ್ನಡಿಕಟ್ಟೆ, ವಿಜಯ ಕುಮಾರ್‌ ಶೆಟ್ಟಿ ಮೈಲೊಟ್ಟು, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ರವಿ ಭಟ್‌ ಪಡುಬಿದ್ರೆ, ಸಂಜಯ್‌ ಕುಮಾರ್‌ ಭಟ್‌ ಮಂಗಳೂರು, ಹರಿಶ್ಚಂದ್ರ ಪೆರಾಡಿ ಅವರು ಸಹಕರಿಸಿದರು.

Advertisement

ತುಳು-ಕನ್ನಡಿಗರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಭಕ್ತಾದಿಗಳು, ಸ್ಥಳೀಯ ಉದ್ಯಮಿ ಗಳು, ಸಮಾಜ ಸೇವಕರು, ಕಲಾ ಪೋಷಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next