Advertisement

ಮೀರಾರೋಡ್‌ ಪಲಿಮಾರು ಮಠ:ನವರಾತ್ರಿ ಉತ್ಸವಕ್ಕೆ ಚಾಲನೆ

01:46 PM Sep 23, 2017 | Team Udayavani |

ಮುಂಬಯಿ: ರಕ್ಷಣೆಗೆ ದುರ್ಗೆ, ಸಮೃದ್ಧಿಗೆ ಲಕ್ಷ್ಮೀ, ಜ್ಞಾನಕ್ಕೆ ಸರಸ್ವತಿ ಈ ಮೂರರ ಒಟ್ಟು ಸ್ವರೂಪವೇ ಆದಿಶಕ್ತಿ. ವಿಜಯ ಸಾಧಿಸಲು ನೆರವಾಗುವ ಸಲಕರಣೆಗಳಿಗೆ ಸಲ್ಲಿಸುವ ಗೌರವವೇ ಆಯುಧ ಪೂಜೆ, ಜಗನ್ಮಾತೆಯು ನವ ವಿಧವಾಗಿ ಅವತಾರವೆತ್ತಿ ದುಷ್ಟಶಕ್ತಿಯನ್ನು ದಮನಿಸುವುದೇ ನವರಾತ್ರಿ ಮಹೋತ್ಸವದ ವೈಶಿಷ್ಟé  ಆಗಿದೆ ಎಂದು ವಿದ್ವಾನ್‌ ರಮಣ ಆಚಾರ್ಯ ಅವರು ನುಡಿದರು.

Advertisement

ಸೆ. 21ರಂದು ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಪ್ರಾರಂಭಗೊಂಡ ನವರಾತ್ರಿ ಉತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಮನಸ್ಸನ್ನು ವಿಚಲಿತ ಗೊಳಿಸುವ ಸಂಧ್ಯಾ ಕಾಲದಲ್ಲಿ ದೇವರ ಸ್ಮರಣೆಯೊಂದಿಗೆ ಬೌದ್ಧಿಕ ಶಕ್ತಿಯನ್ನು ಜಾಗೃತಗೊಳಿಸಬೇಕು. ಶಂಖ ನಾದದ ಮೂಲಕ ದೈವೀಶಕ್ತಿಯನ್ನು ಹೆಚ್ಚಿಸಬೇಕು. ಅಸುರ ಶಕ್ತಿಯು ಮನ ದೊಳಗೆ ಪ್ರವೇಶಿಸಿದಂತೆ ಸದಾ ಜಾಗೃತ ರಾಗಿರಬೇಕು ಎಂದು ತಿಳಿಸಿದರು.

ಮಠದ ಟ್ರಸ್ಟಿ ಸಚ್ಚಿದಾನಂದ ರಾವ್‌ ಅವರು ಶ್ರೀ ಕ್ಷೇತ್ರದ ಬಗ್ಗೆ ತಿಳಿಸಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸೆ. 30 ರವರೆಗೆ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ವಿಜಯ ದಶಮಿಯ ದಿನದಂದು ಶ್ರೀ ಕ್ಷೇತ್ರದಲ್ಲಿ ಬ್ರಹ್ಮೋತ್ಸವ ಜರಗಲಿದೆ. ಉತ್ಸವ ಬಲಿ, ಮಹಾ ರಥೋತ್ಸವದ ಶೋಭಾಯಾತ್ರೆಯು ಬ್ರಹ್ಮ ಮಂದಿರ ದವರೆಗೆ ನಡೆಯಲಿದೆ. 

ಆನಂತರ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಂದ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ತುಳು-ಕನ್ನಡಿಗ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿದರು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ವಿದ್ವಾನ್‌ ರಾಧಾಕೃಷ್ಣ ಭಟ್‌ ಅವರ ಪೌರೋಹಿತ್ಯದಲ್ಲಿ ಚಂಡಿಕಾ ಹೋಮ ಹಾಗೂ ಪರಿವಾರ ದೇವರಿಗೆ ವಿಶೇಷ ಪೂಜೆ ನೆರವೇರಿತು. ಗೋಪಾಲ್‌ ಭಟ್‌, ವಿಷ್ಣು ಭಟ್‌, ಜಯರಾಮ ಭಟ್‌, ಗಣೇಶ್‌ ಭಟ್‌, ಕರಮಚಂದ ಗೌಡ, ಮಹಿಳಾ ವಿಭಾಗದ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ನೂರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬಂಗಾಲಿ ಬಾಲಕಲಾವಿದರಿಂದ ಶಾಸ್ತಿÅàಯ ಸಂಗೀತ ಕಾರ್ಯಕ್ರಮ ನಡೆಯಿತು.  ತುಳು-ಕನ್ನಡಿಗ ಭಕ್ತಾದಿಗಳು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಅನ್ಯಭಾಷಿಗ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. 

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next