Advertisement
ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಸಿರೆಲೆಗಳಿಂದ ಕಂಗೊಳಿಸುವ ಪ್ರಕೃತಿಯ ರಮ್ಯ ಸಸ್ಯರಾಶಿಗಳು ದೈಹಿಕ, ಮಾನಸಿಕ, ಬೌದ್ಧಿಕ ಕ್ಷಮತೆಗಳನ್ನು ಕಾಪಾಡುವ ಆಹಾರವಾಗಿದೆ. ನಾವು ತಿನ್ನುವ ಆಹಾರಗಳು ಔಷಧಿ ಗಳಾಗಬೇಕೇ ವಿನಃ ಔಷಧಗಳು ಆಹಾರವಾಗಬಾರದು. ಇಂತಹ ಪರಿವರ್ತನೆಗೆ ಆಟಿ ತಿಂಗಳಲ್ಲಿ ಮಾತ್ರ ಸಾಧ್ಯ. ಕಠಿಣ ದುಡಿಮೆಗೆ ಒಂದು ತಿಂಗಳ ವಿರಾಮ ನೀಡುವ ಆಟಿ ತಿಂಗಳು ಭವಿಷ್ಯದ ಬದುಕನ್ನು ಅವಲೋಕಿಸುವ ಆಲೋಚನ ಗೃಹವಾಗಿದೆ. ನಾಡಿನ ಸಂಸ್ಕೃತಿ-ಸಂಸ್ಕಾರಗಳು ಯುವ ಪೀಳಿಗೆಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಪ್ರೇರಣೆಯಾಗಿದೆ ಎಂದು ನುಡಿದರು.
Related Articles
Advertisement
ಕಾರ್ಯಕಾರಿ ಸಮಿತಿಯ ಸದಸ್ಯರಾದ ಶುಭಾ ಸತೀಶ್ ಶೆಟ್ಟಿ, ಸಂಪತ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಲತಾ ಎ. ಶೆಟ್ಟಿ, ದಯಾನಂದ ಪಿ. ಶೆಟ್ಟಿ, ಶ್ರೀನಿವಾಸ ಆಳ್ವ, ಪಳ್ಳಿ ಪ್ರಸನ್ನ ಜೆ. ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ನವೀನ್ ಎಂ. ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಸುಜಾತಾ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ತಾರಾನಾಥ ಶೆಟ್ಟಿ, ಶಶಿ ಜೆ. ಶೆಟ್ಟಿ, ಸುಗುಣಾ ಶೆಟ್ಟಿ, ಚಂದ್ರಕಲಾ ಶೆಟ್ಟಿ, ದಿವ್ಯಾ ರೈ, ಪ್ರಮೀಳಾ ಶೆಟ್ಟಿ, ಸರಿತಾ ಶೆಟ್ಟಿ, ಯಶೋದಾ ಶೆಟ್ಟಿ ಮತ್ತಿತರ ಗಣ್ಯರನ್ನು ಸಮಿತಿಯ ವತಿಯಿಂದ ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ಸದಸ್ಯೆಯರಿಂದ ಆಟಿದ ದಿನಾಚರಣೆ ನ್ಯತ್ಯ ರೂಪಕ, ಗಣೇಶ್ ಎರ್ಮಾಳ್ ಅವರಿಂದ ರಸಮಂಜರಿ, ರಜತ್ ಕುಮಾರ್ ಸಸಿಹಿತ್ಲು ಅವರ ನಿರ್ದೇಶನದಲ್ಲಿ ಕಾರಣಿಕದ ಗತ ವೈಭವ ನೃತ್ಯ ವೈವಿಧ್ಯ ನಡೆಯಿತು. ತುಳು-ಕನ್ನಡಿಗರು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ದೈವಾರಾಧನೆ, ನಾಗಾರಾಧನೆ, ಭೂತಾರಾಧನೆಗಳನ್ನು ಕಾರಣಿಕದ ಗತ ವೈಭವದ ಮೂಲಕ ಆಳವಾದ ತುಳುವರ ಆರಾಧನೆಯನ್ನು ತಿಳಿಯಲು ಸಾಧ್ಯವಾಯಿತು. ಮಹಿಳಾ ಸದಸ್ಯೆಯರು ನೃತ್ಯ ರೂಪಕದ ಮೂಲಕ ಪ್ರಸ್ತುತಪಡಿಸಿದ ಆಟಿದ ತಿಂಗಳ ಮಹತ್ವ ಯುವ ಜನಾಂಗ ಅನುಸರಿಸಿದರೆ ಪರಿಶ್ರಮ ಸಾರ್ಥಕವಾಗುತ್ತದೆ.-ಪ್ರಕಾಶ್ ಎಂ. ಹೆಗ್ಡೆ, ಅಧ್ಯಕ್ಷರು, ವಸಾಯಿ ತಾಲೂಕು ಹೊಟೇಲ್ ಅಸೋಸಿಯೇಶನ್ ಚಿತ್ರ-ವರದಿ:ರಮೇಶ್ ಅಮೀನ್