ಮುಂಬಯಿ: ಮೀರಾ- ಭಾಯಂದರ್ ನಿತ್ಯಾನಂದ ಸೇವಾ ಸಂಸ್ಥೆಯ ವತಿಯಿಂದ ಗುರುಪೂರ್ಣಿಮೆ ಆಚರಣೆಯು ಜು. 27ರಂದು ಮೀರಾರೋಡ್ ಪೂರ್ವದ ಗುರುನಾರಾಯಣ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ನಡೆಯಿತು.
ಮೀರಾರೋಡ್ ಕಾಶೀಮೀರಾ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾದìನ ಭಟ್ ಅವರು ದೀಪಪ್ರಜ್ವಲಿಸಿ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೆರೆದ ಭಕ್ತಾದಿಗಳನ್ನು ಆಶೀರ್ವದಿಸಿದರು.
ಅಪರಾಹ್ನ 2 ರಿಂದ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಅಪರಾಹ್ನ 2 ರಿಂದ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನೆರವೇರಿತು. ಸಂಜೆ 5 ರಿಂದ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾರಾಯಣ ಶೆಟ್ಟಿ ಮತ್ತು ಲಕ್ಷ್ಮಣ್ ಶೆಟ್ಟಿ ಅವರ ನೇತೃತ್ವದಲ್ಲಿ ಗುರುಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಮಹಾಬಲ ಸಮಾನಿ, ಗೌರವಾಧ್ಯಕ್ಷ ಆನಂದ ಶೆಟ್ಟಿ ಕುಕ್ಕುಂದೂರು, ಗೌರವ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಅಮವಾಸ್ಯೆಬೈಲು, ಉಪಾಧ್ಯಕ್ಷ ಚಿರಂಜೀವಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ಪ್ರಸಾದ್ ಹೆಗ್ಡೆ, ಜತೆ ಕಾರ್ಯದರ್ಶಿ ಜಯಶ್ರೀ ಶೆಟ್ಟಿ, ಸಲಹೆಗಾರ ಗುಣಪಾಲ ಉಡುಪಿ, ಟ್ರಸ್ಟಿಗಳಾದ ಲೀಲಾ ಡಿ. ಪೂಜಾರಿ, ಚಂದ್ರಶೇಖರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶೈಲೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ ಹಾಗೂ ಸದಸ್ಯರುಗಳಾದ ಗೋಪಾಲ ಕೃಷ್ಣ ಗಾಣಿಗ, ಮಂಜಯ್ಯ ಶೆಟ್ಟಿ, ರಾಜೇಶ್ ಶೆಟ್ಟಿ ಕಾಪು, ಗುಣಪಾಲ ಶೆಟ್ಟಿ ಕರ್ಜೆ, ಸುಮತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪರಿಸರದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಗುರುಭಕ್ತರು, ಬಂಟ್ಸ್ ಫೋರ ಮೀರಾ-ಭಾಯಂದರ್ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ, ಸಂಜೀವ ಶೆಟ್ಟಿ, ಅರುಣ್ ಎರ್ಮಾಳ್ ಮೊದಲಾದವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.