Advertisement

Arun Shahapur: ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳ ನಿಯಮ ಸಡಿಲಿಕೆ ಸರಿಯಲ್ಲ

12:30 AM Dec 10, 2024 | Team Udayavani |

ಉಡುಪಿ: ರಾಜ್ಯದಲ್ಲಿ ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳಿಗೆ ನಿಯಮ ಸಡಿಲಿ ಸುವ ಮೂಲಕ ರಾಜ್ಯ ಸರಕಾರ ಬಹುಸಂಖ್ಯಾಕ ಹಾಗೂ ಅಲ್ಪಸಂಖ್ಯಾಕ ಪದದ ಮರು ವಾಖ್ಯಾನಕ್ಕೆ ಮುಂದಾಗಿದೆ. ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಪುರ ಹೇಳಿದರು.

Advertisement

ಸೋಮವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದಅವರು, ಬಿಜೆಪಿ ಸರಕಾರ ಇದ್ದಾಗ ಕಾಯ್ದೆಗೆ ತಿದ್ದುಪಡಿ ತಂದು, ಶೇ.75ರಷ್ಟು ವಿದ್ಯಾರ್ಥಿಗಳು ಅಲ್ಪಸಂ ಖ್ಯಾಕ ಸಮುದಾಯದವರು ಇದ್ದಾಗ ಮಾತ್ರ ಅಲ್ಪಸಂಖ್ಯಾಕ ಸಂಸ್ಥೆಯ ಅರ್ಹತೆ ಪಡೆಯ ಬಹುದಿತ್ತು. ಕಾಂಗ್ರೆಸ್‌ ಅಧಿಕಾರದಲ್ಲಿ ತನ್ವೀರ್ ಸೇಠ್ ಶಿಕ್ಷಣ ಮಂತ್ರಿಯಾಗಿದ್ದಾಗ ಅದನ್ನು ಶೇ.50ಕ್ಕೆ ಇಳಿಸಿದ್ದರು. ಈಗ ಆ ಸಮುದಾಯದ ಯಾವೊಬ್ಬ ವಿದ್ಯಾರ್ಥಿ ದಾಖಲಾಗದಿದ್ದರೂ ಅಲ್ಪಸಂಖ್ಯಾಕ ಮಾನ್ಯತೆ ಪಡೆಯಬಹುದು ಎಂದು ಸರಕಾರ ನಿರ್ಧರಿಸಿರುವುದು ದಲಿತ ಹಾಗೂ ಹಿಂದುಳಿದ ವರ್ಗದ ಮೇಲೆ ನೇರ ಪರಿಣಾಮ ಬೀರಲಿದೆ. ಈ ಸಡಿಲಿಕೆ ಸರಿಯಲ್ಲ ಎಂದರು.

ವಿವಿಗಳಲ್ಲಿ ಗುಣಮಟ್ಟ ಕುಸಿಯು ತ್ತಿದ್ದು, ಶೇ.90ರಷ್ಟು ಅತಿಥಿ ಉಪನ್ಯಾಸಕ ರಿಂದಲೇ ವಿ.ವಿ. ನಡೆಸಬೇಕಿದೆ. ಗುಣಮಟ್ಟ ಸುಧಾರಣೆ ಹಾಗೂ ಮೂಲಸೌಕರ್ಯ ಒದಗಿಸಲು ಸರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಈ ರೀತಿ ತುಷ್ಟೀಕರಣ ಸರಿಯಲ್ಲ ಎಂದರು.

ಅಧಿಕಾರ ಮೊಟಕು ಸರಿಯಲ್ಲ
ಮುಖ್ಯಮಂತ್ರಿಯವರನ್ನು ಗದಗ ಗ್ರಾಮೀಣ ವಿ.ವಿ.ಯ ಕುಲಾಧಿಪತಿ ಯಾಗಿ ಮಾಡಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿದ್ದು ಸರಿಯಲ್ಲ ಎಂದ ಅವರು, ಈ ಪ್ರವೃತ್ತಿ ಮಂದೆ ಎಲ್ಲ ವಿವಿ ಗಳಿಗೂ ವಿಸ್ತರಣೆಯಾಗುವ ಅಪಾಯವಿದೆ ಎಂದರು.

ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್‌ ಕುಂದಾಪುರ, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಜಿಲ್ಲಾ ಮಾಧ್ಯಮ ಪ್ರಮುಖ್‌ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next