ರಾಜ್ಯದಲ್ಲಿರುವ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ ಸಮುದಾಯವನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿರುವ ಸರ್ಕಾರ, ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗಳನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಮುಂದುವರಿದರೆ ಎಲ್ಲವೂ ಸರಿಹೋಗುತ್ತದೆ ಎಂಬುದು ನಿರ್ದೇಶನಾಲಯದ ಅಭಿಪ್ರಾಯ.
ವಿದ್ಯಾರ್ಥಿವೇತನದಲ್ಲಿ ಪ್ರಮುಖವಾಗಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ವಿದ್ಯಾರ್ಥಿವೇತನ. ಇದನ್ನು ಮೆರಿಟ್-ಕಂ-ಮೀನ್ಸ್ ಎನ್ನಲಾಗುತ್ತದೆ. 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 5000 ರೂ.ವರೆಗೆ ವಿದ್ಯಾರ್ಥಿವೇತನ ನಿಗದಿಪಡಿಸಲಾಗಿದೆ. ಪಿಯುಸಿಯಿಂದ ಪಿಹೆಚ್‌ಡಿವರೆಗಿನ ವಿದ್ಯಾರ್ಥಿಗಳು ಸಹ ಈ ವಿದ್ಯಾರ್ಥಿವೇತನ ಪಡೆಯಲು ಅವಕಾಶವಿದೆ. ತಾಂತ್ರಿಕ, ವೃತ್ತಿಪರ (ಎಂಜಿನಿಯರಿಂಗ್, ಮೆಡಿಕಲ್, ಯುನಾನಿ, ಆಯುರ್ವೇದ ಮತ್ತು ವೆಟರಿನರಿ ಮುಂತಾದ) ಕೋರ್ಸ್‌ಗಳ ವಿದ್ಯಾರ್ಥಿಗಳು ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ.
Advertisement
ಪದವಿ ಪೂರ್ವದಿಂದ ಪಿ.ಹೆಚ್‌ಡಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹಧನವನ್ನು ಅವರ ಕಾಲೇಜು, ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ಶುಲ್ಕದ ಮಿತಿ ಹಾಗೂ ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕದ ಆಧಾರದ ಮೇಲೆ ಶೇ.100 ರಷ್ಟು ಶುಲ್ಕವನ್ನು ಮರುಪಾವತಿ ಮಾಡುವ ಪದ್ಧತಿಯನ್ನೂ ಜಾರಿಗೆ ತಂದಿದೆ. ಹೊರದೇಶದ ವಿವಿಗಳಲ್ಲಿ ಸ್ನಾತಕೋತ್ತರ, ಪಿಹೆಚ್‌ಡಿ, ಡೆಂಟಲ್ ಕೋರ್ಸ್ ಮುಂತಾದವುಗಳನ್ನು ಮಾಡಬಯಸುವ ವಿದ್ಯಾರ್ಥಿಗಳು ಸಹ ಎರಡು ವರ್ಷಗಳಿಗೆ 20 ಲಕ್ಷ ರೂ.ವರೆಗೆ ವಿದ್ಯಾರ್ಥಿವೇತನ ಪಡೆಯಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ 400 ವಿದ್ಯಾರ್ಥಿಗಳ ವಿದೇಶಿ ವಿದ್ಯಾಭ್ಯಾಸದ ಕನಸು ನನಸು ಮಾಡುತ್ತಿರುವ ಏಕೈಕ ರಾಜ್ಯ ಕರ್ನಾಟಕ.
ಜಿಎನ್‌ಎಂ, ಬಿಎಸ್ಸಿ ನರ್ಸಿಂಗ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 35,000 ರೂ. ಪ್ರೋತ್ಸಾಹಧನ ಹಾಗೂ ಪ್ರತಿ ತಿಂಗಳು 1 ಸಾವಿರ ಸ್ಟೈಫಂಡ್ ಮತ್ತು 5 ಸಾವಿರ ರೂ. ತರಬೇತಿ ಖರ್ಚು ಜತೆಯಲ್ಲಿ ಸಮವಸ್ತ್ರ, ಪುಸ್ತಕಗಳಿಗೆ ಆಗಿರುವ ವೆಚ್ಚವನ್ನು ನಿರ್ದೇಶನಾಲಯ ಭರಿಸುತ್ತಿದೆ. ಈ ಎಲ್ಲ ಯೋಜನೆಗಳ ಪಾವತಿಗಳಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯ ಆನ್‌ಲೈನ್ ವ್ಯವಸ್ಥೆ ರೂಪಿಸಿದ್ದು, ವಿದ್ಯಾರ್ಥಿಗಳು ತಮ್ಮ ದಾಖಲೆ, ವಿವರಗಳನ್ನು ವೆಬ್‌ಸೈಟ್ ಜಠಿಠಿಟs://ಜಟkಛಟಞ.kಚr.nಜಿc.ಜಿnನಲ್ಲಿ ಅಪ್‌ಲೋಡ್ ಮಾಡಿದಲ್ಲಿ ಪರಿಶೀಲನೆ ನಡೆಸಿ, ಬ್ಯಾಂಕಿನ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ.
ಶೈಕ್ಷಣಿಕ ಉನ್ನತೀಕರಣ ನಮ್ಮ ಇಚ್ಛೆ: ಅಕ್ರಂ ಪಾಷ
ಐದು ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗ ಅಲ್ಪಸಂಖ್ಯಾತರ ಇಲಾಖೆಯ ಬಜೆಟ್ ಕೇವಲ 400 ಕೋಟಿ ರೂ. ಇತ್ತು. ಇಂದು ಸುಮಾರು 2500 ಕೋಟಿ ರೂ.ಗೆ ಹೆಚ್ಚಳವಾಗಿದೆ. ನಿರ್ದೇಶನಾಲಯದಲ್ಲಿ ಆರು ಸಾವಿರ ಹುದ್ದೆಗಳನ್ನು ಸೃಷ್ಟಿಸಿ, ಕೆಪಿಎಸ್‌ಸಿಯಿಂದ ಮೂರು ಸಾವಿರ ಮಂದಿಯನ್ನು ನೇಮಕ ಮಾಡಿದ್ದೇವೆ. ಇನ್ನೂ ಒಂದು ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಅದೇ ರೀತಿ ಅಂದು ನಿರ್ದೇಶನಾಲಯದಡಿ ಕೇವಲ 12 ಯೋಜನೆಗಳಿದ್ದವು. ಪ್ರಸ್ತುತ 31 ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಹೆಚ್ಚಿನವು ಶೈಕ್ಷಣಿಕ ಯೋಜನೆಗಳು. ಇತರೆ ಕಾರ್ಯಕ್ರಮಗಳಿಗೂ ಒತ್ತು ನೀಡಿದ್ದೇವೆ. ಒಟ್ಟಾರೆ, ಅಲ್ಪಸಂಖ್ಯಾತರ ಸಮುದಾಯದಲ್ಲಿ ಶಿಕ್ಷಣ ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಸಮುದಾಯ ಮಂದಿ ಶೈಕ್ಷಣಿಕವಾಗಿ ಉನ್ನತೀಕರಣಗೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕೆಂಬ ಇಚ್ಛೆ ನಮ್ಮದು.
Related Articles
Advertisement
ಮೌಲಾನ ಆಜಾದ್ ಶಾಲೆ: ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 200 ಮೌಲಾನ ಆಜಾದ್ ಮಾದರಿ ಶಾಲೆಯನ್ನು ತೆರೆಯಲಾಗಿದ್ದು, ಇಲ್ಲಿ 6ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ನಿರ್ದೇಶನಾಲಯದಡಿ ಒಟ್ಟು 35 ಸಾವಿರ ವಸತಿಶಾಲೆ ವಿದ್ಯಾರ್ಥಿಗಳು, ಹಾಸ್ಟೆಲ್‌ಗಳಲ್ಲಿ 25 ಸಾವಿರ ಮಕ್ಕಳು ಹಾಗೂ ಮೌಲಾನ ಶಾಲೆಯಲ್ಲಿ 12 ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಪರೀಕ್ಷಾ ಪೂರ್ವ ತರಬೇತಿ: ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ನಡೆಸುವ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಪೊಲೀಸ್ ಇಲಾಖೆಯ ಹಾಗೂ ಬ್ಯಾಂಕ್ ಅಧಿಕಾರಿಗಳ ಹುದ್ದೆಗಳಿಗೆ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಮೂಲಕ ಪರೀಕ್ಷಾ ಪೂರ್ವ ತರಬೇತಿ ಒದಗಿಸಲಾಗುತ್ತಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ, ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತರಬೇತಿ, ಕಾನೂನು ಪದವೀಧರರಿಗೆ 4 ವರ್ಷಗಳ ಕಾನೂನಾತ್ಮಕ ವೃತ್ತಿಪರ ತರಬೇತಿ ಹಾಗೂ ನಿರುದ್ಯೋಗಿ ಯುವಕ, ಯುವತಿಯರಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳ ತರಬೇತಿಗಳನ್ನು ನಿರ್ದೇಶನಾಲಯ ಒದಗಿಸುತ್ತಿದೆ. ಬಿದಾಯಿ ಯೋಜನೆ
ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಕುಟುಂಬದ ಹೆಣ್ಣು ಮಕ್ಕಳಿಗೆ, ವಿಚ್ಛೇದಿತ ಮಹಿಳೆ ಮತ್ತು ವಿಧವೆಯರಿಗೆ ಪುನಃ ಮದುವೆಯ ನಿಮಿತ್ತ ವಿವಾಹದ ಖರ್ಚು-ವೆಚ್ಚಗಳು, ಜೀವನಾವಶ್ಯಕ ಸಾಮಗ್ರಿಗಳು ಅಥವಾ ನಗದು ನೀಡಲು ಸರ್ಕಾರ 50 ಸಾವಿರ ರೂ. ಸಹಾಯಧನ ನೀಡುವ ‘ಬಿದಾಯಿ’ ಯೋಜನೆಯನ್ನು ಜಾರಿಗೆ ತಂದಿದೆ. ಈ ಸಾಲಿನಲ್ಲಿ 23 ಸಾವಿರ ಅರ್ಜಿಗಳು ಬಂದಿರುವುದರಿಂದ 150 ಕೋಟಿ ರೂ. ಬೇಡಿಕೆ ಇಡಲಾಗಿದೆ. ಇದರ ಜೊತೆಯಲ್ಲಿ ಮುಖ್ಯಮಂತ್ರಿಯವರ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆ, ಅಲ್ಪಸಂಖ್ಯಾತರ ಕಾಲೋನಿಗಳಿಗೆ ಮೂಲಭೂತ ಸೌಕರ್ಯ, ಸರ್ಕಾರಿ ಉರ್ದು ಪ್ರಾಥಮಿಕ, ಪ್ರೌಢಶಾಲೆಗಳಿಗೆ 9 ಅಂಶಗಳ ಕಾರ್ಯಕ್ರಮ ಸೌಲಭ್ಯ ವಿಸ್ತರಣೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಮದರಸಾಗಳ ಆಧುನೀಕರಣ, ಸರ್ ಸಯ್ಯದ್ ಅಹ್ಮದ್ ಖಾನ್ ಅಧ್ಯಯನ ಮತ್ತು ಸಂಶೋಧನಾ ಪ್ರಯೋಗ ಕೇಂದ್ರ, ಕಲಬುರಗಿ ವಿವಿ ಧಾರ್ಮಿಕ ಅಲ್ಪಸಂಖ್ಯಾತರ ಪೀಠ, ಬೀದರ್‌ನಲ್ಲಿ ಮೊಹಮ್ಮದ್ ಗವಾನ್ ಗ್ರಂಥಾಲಯ ಸಂಶೋಧನಾ ಕೇಂದ್ರ, ಅಲ್ಪಸಂಖ್ಯಾತರ ಸಮುದಾಯಗಳ ಕೇಂದ್ರ ಮತ್ತು ರಾಜ್ಯದ ಪ್ರತಿ ಕೇಂದ್ರ ಸ್ಥಾನದಲ್ಲಿ ಹಾಗೂ ನಿರ್ದೇಶನಾಲಯದಲ್ಲಿ ‘ಮೌಲಾನಾ ಆಜಾದ್ ಭವನ್’ ಎಂಬ ಪ್ರತ್ಯೇಕ ಮಾಹಿತಿ ಕೇಂದ್ರ ಸ್ಥಾಪನೆಗೆ ಸರ್ಕಾರ ಉತ್ಸುಕವಾಗಿದೆ. – ಗೋಪಾಲ್ ತಿಮ್ಮಯ್ಯ