Advertisement

US; ಮಿನ್ನೆಸೋಟ ಗವರ್ನರ್‌ ಟಿಮ್‌ ಡೆಮಾಕ್ರಾಟ್‌ ಉಪಾಧ್ಯಕ್ಷ ಅಭ್ಯರ್ಥಿ

11:40 PM Aug 06, 2024 | Team Udayavani |

ವಾಷಿಂಗ್ಟನ್‌: ಅಮೆರಿಕದ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು ಮಿನ್ನೆಸೋಟಾದ ಗವರ್ನರ್‌ ಟಿಮ್‌ ವಾಲ್ಸ್‌ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಾರೆ.

Advertisement

ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಗೆಲುವು ಸಾಧಿಸಿದರೆ, ಟಿಮ್‌ ಉಪಾಧ್ಯಕ್ಷರ ಸ್ಥಾನಕ್ಕೇರುವುದು ಖಚಿತವಾಗಿದೆ. ಶಾಲೆಗಳಲ್ಲಿ ಉಚಿತ ಊಟದ ವ್ಯವಸ್ಥೆ, ಮಧ್ಯಮ ವರ್ಗದವರ ಮೇಲಿನ ತೆರಿಗೆ ಹೊರೆ ಇಳಿಸುವಂಥ ನೀತಿ ಪರಿಚಯಿಸಿ ಪ್ರಗತಿ ಪರ ನೀತಿಗಳ ಮೂಲಕವೇ ಪ್ರಸಿದ್ಧರಾಗಿರುವ ಟಿಮ್‌ ಅವರನ್ನು ಅಮೆರಿಕನ್ನರ (ಬಿಳಿಯರ) ಮತ ಸೆಳೆವುದಕ್ಕಾಗಿ ಕಮಲಾ ನಾಮನಿರ್ದೇಶನ ಮಾಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಅಧ್ಯಕ್ಷೀ ಯ ಅಭ್ಯರ್ಥಿಯಾಗಿ ಕಮಲಾ ಆಯ್ಕೆಗೆ ಶೇ.99 ರಷ್ಟು  ಡೆಮಾಕ್ರಟ್‌ ಸದಸ್ಯರ ಬೆಂಬಲ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next