Advertisement

ವಿಳಂಬ ನೀತಿ ಖಂಡಿಸಿ ಸಚಿವಾಲಯದ ನೌಕರರ ಸಂಘದಿಂದ ಮತ್ತೆ ಧರಣಿ

03:18 PM Sep 28, 2022 | Team Udayavani |

ಬೆಂಗಳೂರು: ಸಚಿವಾಲಯದ ನೌಕರರ ಸಂಘದ ನೌಕರರರು ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

Advertisement

ರಾಜ್ಯ ಸರಿಕಾರಿ ನೌಕರರ ವೇತನ ಸೌಲಭ್ಯಗಳ ಪರಿಷ್ಕರಣೆ ಮಾಡಿ ಕೇಂದ್ರ ಸರಿಕಾರ/ಹೈಕೋರ್ಟ್ ಮಾದರಿಯಲ್ಲಿ 7ನೇ ವೇತನ‌ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ಕಾರಿ ನೌಕರರಿಗೆ ಭರವಸೆ ನೀಡಿದ್ದು, ಕಳೆದ ಜೂನ್ ತಿಂಗಳಿಗೆ 6ನೇ ವೇತನ ಆಯೋಗದ ಅವಧಿ ಮುಕ್ತಾಯಗೊಂಡಿದೆಯಾದರೂ ಇದುಯವರೆಗೆ ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ.ಹೀಗಾಗಿ ಸಚಿವಾಲಯದ ನೌಕರರ ಸಂಘ ಹಾಗೂ ಇತರೆ ಸರ್ಕಾರಿ ನೌಕರರ ಸಂಘಟನೆಗಳ ವತಿಯಿಂದ “ಜಂಟಿ ಕ್ರಿಯಾ ಸಮಿತಿ” ರಚಿಸಿದ್ದು, ಜಂಟಿ ಕ್ರಿಯಾ ಸಮಿತಿಯಿಂದ ಮತ್ತೆ ಪ್ರತಿಭಟನೆಗೆ ಮುಂದಾಗಿರುವುದಾಗಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಪಿ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next