Advertisement

ಗೋವಾ ಸಂಪುಟ ವಿಸ್ತರಣೆ : ವಿರೋಧದ ನಡುವೆಯೂ ಧವಳೀಕರ್ ಗೆ ಸ್ಥಾನ

03:55 PM Apr 09, 2022 | Team Udayavani |

ಪಣಜಿ: ಬಿಜೆಪಿ ಸರ್ಕಾರದ ಮಂತ್ರಿಮಂಡಲ ವಿಸ್ತರಣೆ ಶನಿವಾರ ನಡೆದಿದ್ದು, ಎಂಜಿಪಿ ಪಕ್ಷದ ಸುದೀನ ಧವಳೀಕರ್, ಬಿಜೆಪಿಯ ನೀಲಕಂಠ ಹಳರ್ಣಕರ್ ಮತ್ತು ಸುಭಾಷ ಫಳದೇಸಾಯಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಶನಿವಾರ ಮಧ್ಯಾಹ್ನ ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೇರಿದಂತೆ ಸಚಿವರು, ಶಾಸಕರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಇತರ ಎಂಟು ಜನ ಶಾಸಕರು ಮಾರ್ಚ್ 28 ರಂದು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕಳೆದ ರವಿವಾರ ಈ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಇದೀಗ ಮತ್ತೆ ಒಂದು ವಾರದಲ್ಲಿ ಮಂತ್ರಿಮಂಡಲ ವಿಸ್ತರಣೆ ನಡೆದಿದೆ.

ಬಿಜೆಪಿಗೆ ಬೇಷರತ್ ಬೆಂಬಲ ನೀಡಿದ್ದ ಎಂಜಿಪಿ ಶಾಸಕ ಸುದೀನ ಧವಳೀಕರ್ ರವರಿಗೆ ಸಚಿವ ಸ್ಥಾನ ನೀಡಲು ಬಿಜೆಪಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ವಿರೋಧದ ನಡುವೆಯೂ ಪಕ್ಷದ ವರಿಷ್ಠರು ಧವಳೀಕರ್ ರವರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next