ಹುಣಸೂರು: ತಂಬಾಕು ಬೆಳೆ ರೈತರ ಜೀವನಾಡಿಯಾಗಿದೆ. ಸಂಸದರು ನಿಶ್ಚಿಂತೆಯಿಂದ ತಂಬಾಕು ಬೆಳೆಯಿರಿ ಎಂದು ಬೇಜವಾಬ್ದಾರಿ ಹೇಳಿಕೆ ಸಲ್ಲದು. ಈ ವಿಚಾರವನ್ನು ಗಂಭೀರ ವಾಗಿ ಪರಿಗಣಿಸಿ, ಬೆಳೆಗಾರರಿಗೆ ಭರವಸೆ ನೀಡಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತಂಬಾಕು ಖರೀದಿಸುವ ದೇಶಗಳು ಕೊರೊನಾದಿಂದ ತಲ್ಲಣಗೊಂಡಿದೆ. ತಂಬಾಕು ವಿಚಾರವಾಗಿ ಶೀಘ್ರವೇ ಕೇಂದ್ರದ ವಾಣಿಜ್ಯ ಮಂತ್ರಾಲಯ, ತಂಬಾಕು ಮಂಡಳಿ, ಖರೀದಿ ಕಂಪನಿಗಳೊಂದಿಗೆ ಸಭೆ ನಡೆಸಬೇಕು. ತಂಬಾಕು ಬೆಳೆಗಾರರಿಗೆ ಖಚಿತ ಭರವಸೆ ಕು ಎಂದು ಹೇಳಿದರು.
ನೇರ ಖರೀದಿ ಮಾಡಲಿ: ಬಾಕಿ ಉಳಿದುಕೊಂಡಿರುವ 3 ಮಿಲಿಯನ್ ತಂಬಾಕನ್ನು ಲಾಕ್‌ಡೌನ್ ನಂತರ ಮಾರುಕಟ್ಟೆಯಲ್ಲಿ ಖರೀದಿಸುವ ಬಗ್ಗೆ ಸಂಸದರು ತಿಳಿಸಿದ್ದಾರೆ. ಬದಲಿಗೆ ಮಂಡಳಿ ಅಧಿಕಾರಿಗಳು ಹಾಗೂ ಖರೀದಿ ಕಂಪನಿ, ತಂಬಾಕು ಬೆಳೆಯುವ ಪ್ರದೇಶದ ಎಲ್ಲಾ ಸಂಸದರು ಸಭೆ ನಡೆಸಿ, ನೇರ
ಖರೀದಿಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪ್ರಧಾನಿ, ಸಿಎಂ, ವಾಣಿಜ್ಯ ಸಚಿವರು ಹಾಗೂ ತಂಬಾಕು ಮಂಡಳಿ ಅಧ್ಯಕ್ಷರಿಗೂ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.