Advertisement

Minister V. Somanna: ಭಾರತೀಯ ರೈಲ್ವೇ ಜತೆ ಕೊಂಕಣ ರೈಲ್ವೇ ಶೀಘ್ರ ವಿಲೀನ

01:32 AM Oct 04, 2024 | Team Udayavani |

ಹುಬ್ಬಳ್ಳಿ: ಕೊಂಕಣ ರೈಲ್ವೇ ಕಾರ್ಪೊರೇಷನ್‌ ಅನ್ನು ಭಾರತೀಯ ರೈಲ್ವೇ ಇಲಾಖೆಗೆ ಸೇರಿಸುವ ಕುರಿತು ಚಿಂತನೆ ನಡೆದಿದ್ದು, ಮೂರು ರಾಜ್ಯಗಳು ಒಪ್ಪಿಗೆ ನೀಡಿವೆ. ಮಹಾರಾಷ್ಟ್ರ ಚುನಾವಣೆ ಮುಗಿದ ಅನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈಲ್ವೇ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊಂಕಣ ರೈಲ್ವೇ ವ್ಯಾಪ್ತಿಯು ಕರ್ನಾಟಕ, ಮಹಾ ರಾಷ್ಟ್ರ, ಗೋವಾ ಹಾಗೂ ಕೇರಳಕ್ಕೆ ಸಂಬಂಧಿಸಿದೆ. ಇದೀಗ ಕರ್ನಾಟಕ, ಕೇರಳ, ಗೋವಾ ರಾಜ್ಯದವರು ಭಾರತೀಯ ರೈಲ್ವೇಯಲ್ಲಿ ವಿಲೀನ ಗೊಳಿ ಸಲು ಒಪ್ಪಿಗೆ ಕೊಟ್ಟಿದ್ದಾರೆ.

ಆದರೆ ಮಹಾರಾಷ್ಟ್ರ ರಾಜ್ಯದಿಂದ ಒಪ್ಪಿಗೆ ದೊರೆಯ ಬೇಕಾಗಿದೆ. ಮಹಾರಾಷ್ಟ್ರದ ವಿಧಾನಸಭಾ ಚುನಾ ವಣೆ ಮುಗಿದ ಅನಂತರ ಈ ಪ್ರಕ್ರಿಯೆಗೆ ವೇಗ ನೀಡಲಾಗುವುದು.

ಭಾರತೀಯ ರೈಲ್ವೇಗೆ ವಿಲೀನಗೊಂಡ ಅನಂತರ ಪ್ಲಾಟ್‌ಫಾರ್ಮ್ ನಿಂದ ಹಿಡಿದು ಸಂಪೂರ್ಣ ಅಭಿವೃದ್ಧಿಪಡಿಸ ಲಾಗುವುದು ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next