ತೇರದಾಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಕೋವಿಡ್ ಬಾಧಿ ತರಾಗಿ ಗುಣಮುಖರಾಗಲು ಲಸಿಕೆ ಹಾಕಿಸಿಕೊಂಡಿದ್ದೆ ಕಾರಣವಾಗಿದೆ. ಹಾಗಾಗಿ ಲಸಿಕೆ ವಿಷಯದಲ್ಲಿ ಕಾಂಗ್ರೆಸ್ ಇನ್ನಾದರು ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ಪಟ್ಟಣದ ಬ್ರಹ್ಮಾನಂದಾಶ್ರಮದಲ್ಲಿ ಕ್ಷೇತ್ರದ ಶಾಸಕ ಸಿದ್ದು ಸವದಿ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರು, ಪುರಸಭೆ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಕ್ಷೇತ್ರದ ಮಾಜಿ ಶಾಸಕಿ ಇಂತಹ ಸಂದರ್ಭದಲ್ಲಿ ಜನರ ಗುಂಪು ಸೇರಿಸಿ ಕಾರ್ಯಕ್ರಮ ಮಾಡುವುದನ್ನು ನಿಲ್ಲಿಸದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು, ಜಿಲ್ಲೆಯಾದ್ಯಂತ 7 ಬಾರಿ ಪ್ರವಾಸ ಕೈಗೊಂಡು, ಪ್ರತಿ ತಾಲೂಕಿನಲ್ಲಿ ಸಭೆ ನಡೆಸಿ, ಜಾಗೃತಿ ಮೂಡಿಸಿದ್ದರಿಂದ ಜಿಲ್ಲೆಯ ಕೋವಿಡ್ 3.9% ಪ್ರಮಾಣಕ್ಕಿಳಿದಿದೆ ಎಂದರು.
ಶಾಸಕ ಸಿದ್ದು ಸವದಿ ನೆನಪಿಸಿದ ತೇರದಾಳ ತಾಲೂಕು ಘೋಷಣೆ ವಿಷಯಕ್ಕೆ ಉತ್ತರ ನೀಡಿದ ಅವರು, ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ತೇರದಾಳ ತಾಲೂಕು ಘೋಷಣೆ ಮಾತ್ರ ಮಾಡಿದ್ದಾರೆ, ಗೆಜೆಟ್ ಆಗಿಲ್ಲ, ತಾಲೂಕು ಕುರಿತಂತೆ ನೀಲನಕ್ಷೆ ನೀಡಿದರೆ ಗೆಜೆಟ್ ಮಾಡಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಶ್ರೀಶೈಲ್ ಯಾತ್ರೆ, ಅಂತರ ಕಾಯ್ದುಕೊಳ್ಳದೆ ಇರುವುದು, ನಮ್ಮ ಅಶಿಸ್ತು ಕೋವಿಡ್ ಹೆಚ್ಚಾಗಲು ಕಾರಣವಾಗಿದೆ. ಭವಿಷ್ಯದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಪಡಿತರ ಧಾನ್ಯ, ಬಸ್ ಪ್ರಯಾಣ ಸೇರಿದಂತೆ ಸರ್ಕಾರಿ ಸೌಲಭ್ಯವೆಂದು ಘೋಷಣೆ ಮಾಡಿದರು ಅಚ್ಚರಿಯಿಲ್ಲ. ಆದ್ದರಿಂದ ವದಂತಿಗಳಿಗೆ ಕಿವಿಗೊಡದೆ ಲಸಿಕೆ ಪಡೆದುಕೊಳ್ಳಿ. ಶಾಸಕರ ಪ್ರದೇಶಾಭಿವೃದ್ಧಿಯ ಅನುದಾನವನ್ನು ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಬಳಸಲು ಸರ್ಕಾರ ಸೂಚಿಸಿದ್ದರಿಂದ ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿನ ಹಳೆಯ ಕಟ್ಟಡಗಳನ್ನು ನೆಲಸಮ ಮಾಡಿ, ಹೊಸ ಕಟ್ಟಡಗಳನ್ನು ಕಟ್ಟಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಪುರಸಭೆ ನೀರು ಸರಬರಾಜು ಕಾರ್ಮಿಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಆಹಾರ ಕಿಟ್ ಪಡೆದುಕೊಂಡರು. ತಾಪಂ ಅಧ್ಯಕ್ಷ ಶಿವಾನಂದ ಮಂಟೂರ, ನಗರ ಬಿಜೆಪಿ ಘಟಕದ ಅಧ್ಯಕ್ಷ ಮಹಾವೀರ ಕೊಕಟನೂರ, ರಾಮಣ್ಣ ಹಿಡಕಲ್, ಉಪವಿಭಾಗಾ ಧಿಕಾರಿ ಡಾ.ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ್ ಸಂಜಯ ಇಂಗಳೆ, ಟಿಎಚ್‌ಒ ಜಿ.ಎಸ್. ಗಲಗಲಿ, ಪುರಸಭೆ ಮುಖ್ಯಾ ಧಿಕಾರಿ ಅಶೋಕ ಗುಡಿಮನಿ, ಸುರೇಶ ಅಕಿವಾಟ, ಸಿಪಿಐ ಕರುಣೇಶಗೌಡ, ವೈದ್ಯಾಧಿಕಾರಿ ಡಾ.ಸುದರ್ಶನ ನಡೋಣಿ, ಧರೆಪ್ಪ ಉಳ್ಳಾಗಡ್ಡಿ, ಸಂತೋಷ ಜಮಖಂಡಿ, ಸದಾಶಿವ ಹೊಸಮನಿ, ಶಂಕರ ಕುಂಬಾರ, ಪ್ರಕಾಶ ಮಾನಶೆಟ್ಟಿ, ಶಿವಲಿಂಗ ನಿರ್ವಾಣಿ, ಸುರೇಶ ರೇಣಕೆ, ಪ್ರಭಾಕರ ಬಾಗಿ, ಸಚಿನ ಕೊಡತೆ, ಸಿದ್ದು ಅಮ್ಮಣಗಿ ಸೇರಿದಂತೆ ಮುಖಂಡರು, ಅಧಿ ಕಾರಿಗಳು ಇದ್ದರು.