Advertisement

ಸಂಪುಟ ಪುನಾರಚನೆ ಸಾದ್ಯತೆ ಬಗ್ಗೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ ಹೇಳಿದ್ದೇನು?

02:08 PM Jul 27, 2021 | Team Udayavani |

ಮುಂಡಗೋಡ: ಮುಂದಿನ ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸುತ್ತದೆ. 10 ದಿನಗಳ ಹಿಂದೆಯೇ ಯಡಿಯೂರಪ್ಪನವರು ಮಾಧ್ಯಮಗಳ ಮುಂದೆ ರಾಜೀನಾಮೆ ಬಗ್ಗೆ ಸುಳಿವು ನೀಡಿದ್ದರು ಆ ಮಾತಿನಂತೆ ಈಗ ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

Advertisement

ಅವರು ಸೋಮವಾರ ಸಂಜೆ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಏನು ಹೇಳಿದ್ದಾರೆ ಅದನ್ನೇ ಮಾಡಿದ್ದಾರೆ. ರಾಜಕೀಯ ವಿದ್ಯಮಾನವು ಹೈಕಮಾಂಡ್ ನಿರ್ಣಯದಿಂದ ಆಗಿರಬಹುದು ಎಂಬುವುದು ನನ್ನ ಅಭಿಪ್ರಾಯ. ಆದರೆ, ಯಾವ ಕಾರಣಕ್ಕೆಂದು ಗೊತ್ತಿಲ್ಲ. ಸಚಿವ ಸ್ಥಾನ ಮುಖ್ಯಮಂತ್ರಿ ನಿರ್ಣಯದ ಮೇಲೆ ಅವಲಂಬಿಸಿದೆ. ಯಡಿಯೂರಪ್ಪನವರು ಜನಸೇವೆ ಮಾಡಲು ನನಗೆ ಕಾರ್ಮಿಕ ಖಾತೆಯನ್ನು ನೀಡಿದ್ದಾರೆ ನಾನು ಸಹ ಕಾರ್ಮಿಕನಾಗಿದ್ದರಿಂದ ಸಿಕ್ಕ ಅವಕಾಶದಲ್ಲಿ ತೃಪ್ತಿಯಿಂದ ಕೆಲಸ ಮಾಡಿ ಬಡವರ ಸೇವೆ ಮಾಡಿದ್ದೇನೆ. ಒಂದೂವರೆ ವರ್ಷ ಈ ಅವಕಾಶ ಮಾಡಿಕೊಟ್ಟ ಯಡಿಯೂರಪ್ಪರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಳಿಕ ಬಿಜೆಪಿಯಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು, ನೂತನ ಸಿಎಂ ಅಧಿಕಾರಕ್ಕೆ ಬಂದ ಬೆನ್ನಲ್ಲೇ ನೂತನ ಸಚಿವ ಸಂಪುಟ ರಚನೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಸಚಿವರಿಗೆ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ್, ಯಾರಿಗೆ ಏನು ಕೊಡಬೇಕು ಎಂದು ಪಕ್ಷದ ಹೈಕಮಾಂಡ ನಿರ್ಣಯ ಮಾಡುತ್ತದೆ. ಷರತ್ತು ಹಾಕುವುದಿಲ್ಲ. ನನ್ನ ಕ್ಷೇತ್ರದ ಜನರು ನನ್ನನ್ನು 3 ಬಾರಿ ಆಯ್ಕೆ ಮಾಡಿದ್ದರಿಂದ ನನಗೆ ಸಚಿವ ಸ್ಥಾನ ಸಿಕ್ಕಿದೆ. ಈ ವೇಳೆ ಅವರಿಗೂ ಧ್ಯನ್ಯಾವಾದ ಹೇಳುತ್ತೇನೆ.  ಅಧಿಕಾರ ಕೊಟ್ಟರೆ ಕೆಲಸ ಮಾಡುತ್ತೇನೆ. ಇಲ್ಲವಾದಲ್ಲಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಎರಡು ಬಾರಿ ಕೋವಿಡ್ ಮತ್ತು ಎರಡು ಬಾರಿ ನೆರೆ ಪ್ರವಾಹ ಇವುಗಳ ನಡುವೆಯೂ ದಕ್ಷ ಆಡಳಿತ ನಡೆಸಿದ  ಯಡಿಯೂರಪ್ಪ ಅವರಿಗೆ ರಾಜ್ಯದ ಜನತೆ ಮತ್ತು ಪಕ್ಷ ಅಭಿನಂದಿಸುತ್ತದೆ. ಮತ್ತೆ ನಮ್ಮದೆ ಸರ್ಕಾರ ಬಂದೇ ಬರುತ್ತದೆ ಎಂದರು.

ಈ ವೇಳೆ ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರು ಬಸಯ್ಯ ನಡುವಿನಮನಿ, ಕೆಂಜೋಡಿ ಗಲಬಿ,  ನಾಗರಾಜ ಬೆಣ್ಣಿ, ದೇವು ಪಾಟೀಲ, ತುಕಾರಾಮ ಇಂಗಳೆ, ಭರತರಾಜ ಹದಳಗಿ, ಗಣೇಶ ಶಿರಾಲಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next