Advertisement

ತುಮಕೂರು ಇನ್‌ವೆಸ್ಟರ್‌ಮೀಟ್‌ ನಡೆಸಲು ಸಚಿವ ಶೆಟ್ಟರ್‌ ಚಿಂತನೆ

05:44 AM May 23, 2020 | Lakshmi GovindaRaj |

ತುಮಕೂರು: ತುಮಕೂರು ಕೈಗಾರಿಕಾ ಕ್ಷೇತ್ರದಲ್ಲಿ ಭಾರೀ ಪ್ರಗತಿ ಕಾಣುತ್ತಿದೆ, ಕೈಗಾರಿಕೆಗಳಿಗೆ ಇನ್ನೂ ಉತ್ತೇಜನ  ನೀಡಲು ನಗರದಲ್ಲಿ ಸ್ಥಳೀಯ ಹೂಡಿಕೆದಾರರು ಮತ್ತು ಚೀನಾ ದೇಶದಿಂದ ಹೊರಬರುವ ವಿಶ್ವದ ಇತರೆ ದೇಶಗಳ ಹೂಡಿಕೆದಾರರನ್ನು ಆಕರ್ಷಿಸಲು ತುಮಕೂರು ಇನ್ವೆಸ್ಟರ್‌ ಮೀಟ್‌ ಮಾಡಲು ಸಂಸದ ಜಿ.ಎಸ್‌.ಬಸವರಾಜ್‌ ಅವರು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರ ಗಮನ ಸೆಳೆದಾಗ, ಸಚಿವರಿಂ ದ ಸಕಾರಾತ್ಮಕ ಸ್ಪಂದನೆ  ದೊರೆತಿದೆ.

Advertisement

ಈ ಬಗ್ಗೆ ಸಚಿವರು ಮಾತನಾಡಿ, ರಾಜಧಾನಿ ಬೆಂಗಳೂರಿಗೆ ಉಪ ನಗರದಂತಿ  ರುವತುಮಕೂರಿನವಸಂತನರಸಾಪುರದ ನಿಮ್j, ಇಂಡಸ್ಟ್ರಿಯಲ್‌ ನೋಡ್‌, ಚನ್ನೆ- ಬೆಂಗಳೂರು- ಚಿತ್ರದುರ್ಗ ಇಂಡಸ್ಟ್ರಿಯಲ್‌ ಕಾರಿಡಾರ್‌  ಹೀಗೆ ಯಾವುದೇ ಹೆಸರಿನಲ್ಲಿ ಕರೆದರೂ ಗ್ರೇಟರ್‌ ನೊಯ್ಡಾ ಬಿಟ್ಟರೆ ದೇಶದಲ್ಲಿಯೇ ಎರಡನೇ ಅತಿ  ದೊಡ್ಡ ಕೈಗಾರಿಕಾ ಪ್ರದೇಶ ವಸಾಹತು ಹೊಂದಿದೆ ಎಂದರು.

ವಸಂತನರಸಾಪುರ ಕೈಗಾರಿಕಾ ಪ್ರದೇಶ, ತುಮಕೂರು ಸ್ಮಾರ್ಟ್‌ ಸಿಟಿ  ಮತ್ತು ಈ ಎರಡರ ಮಧ್ಯೆ ಬರುವ ಪ್ರದೇಶದಲ್ಲಿ ಇನ್ನೊಂದು ನಗರವೂ ಸೇರಿ  ದಂತೆ ತುಮಕೂರು ತ್ರಿವಳಿ ನಗರವಾಗಲಿ ದೆ, ಇಲ್ಲಿಗೆ ನಿಗದಿಯಾಗಿರುವ ಎತ್ತಿನಹೊಳೆ ಅಲೋಕೇಷನ್‌ ಹಿಂಪಡೆದಿರು ವುದು ಅಕ್ಷಮ್ಯ ಅಪರಾಧ ಎಂದು  ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಆತಂಕ ವ್ಯಕ್ತಪಡಿಸಿದರು. ಈ ವೇಳೆ ಸಂಸದ ಜಿ.ಎಸ್‌.ಬಸವರಾಜ್‌ ನೀರಿನ ಅಲೋಕೇಷನ್‌ ನಿಗದಿ ಮಾಡಲು ಮನವಿ ಸಲ್ಲಿಸಿದರು.

ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ರವರ ಸಲಹೆಯಂತೆ  ತುಮಕೂರಿನ ಶಕ್ತಿಪೀಠ ಫೌಂಡೇಷನ್‌,ಹಲ ವು ದೇಶ, ರಾಜ್ಯದ ಇತರ ಸಂಸ್ಥೆಗಳ ಸಹಯೋಗ ದಲ್ಲಿ ತುಮಕೂರು ಇನ್‌ವೆಸ್ಟರ್‌ ಮೀಟ್‌ ಮಾಡುವ ಬಗ್ಗೆ ಸಚಿವ ರಿಗೆ ಕುಂದ ರನಹಳ್ಳಿ ರಮೇಶ್‌ ಮನವಿ ಮಾಡಿದರು. ಅಧಿಕಾರಿಗಳೊಂದಿಗೆ  ಸಮಾಲೋಚನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವು ದು ಎಂದು ಬಸವರಾಜ್‌ ತಿಳಿಸಿದರು.

ಸಚಿವರು ನೀವು ಯಾವಾಗ ಬೇಕಾದರೂ ಮಾಡಬಹುದು ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.  ಪಾವಗಡದ ಎಸ್‌.ಶಿವ ಪ್ರಸಾದ್‌ ಸ್ಥಳೀಯರಿಗೆ ಉದ್ಯೋಗ ನೀಡಲು ಅಗತ್ಯ ಕ್ರಮಕೈಗೊಳ್ಳಲು ಸಚಿವ ರಲ್ಲಿ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next