Advertisement

ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃವಿಯೋಗ

03:02 PM Apr 13, 2021 | Team Udayavani |

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಸೇವಂತಾ ಹರದಾರೆ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

Advertisement

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರಿಗೆ 91 ವರ್ಷ ವಯಸ್ಸಾಗಿತ್ತು.

ನನ್ನ ತಾಯಿಯವರು ನನ್ನ ಜೀವನದ ಪ್ರೇರಣಾ ಶಕ್ತಿ, ಪ್ರತಿ ಯಶಸ್ಸಿನ ಏಳು-ಬೀಳಿನಲ್ಲೂ ಸದಾ ನನ್ನೊಂದಿಗಿರುತ್ತಿದ್ದ ದಾರಿದೀಪ, ನನ್ನ ಜೀವ-ಜೀವನ ರೂಪಿಸಿ, ನನ್ನಮ್ಮ ತಿಳಿಸಿಕೊಟ್ಟ ಜೀವನದ ಮೌಲ್ಯಗಳು, ಅವರ ಮಾರ್ಗದರ್ಶನ, ನೆನಪು ಎಂದೆಂದಿಗೂ ನನ್ನ ಮನದಲ್ಲಿ ಚಿರಸ್ಥಾಯಿ. ನನ್ನ ಜೀವನದ ಸ್ಫೂರ್ತಿಯಾಗಿದ್ದ ನನ್ನಮ್ಮ ಇನ್ನು ನೆನಪು ಮಾತ್ರ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next