Advertisement

ಮಹಿಳೆಯರು ಹೆಣ್ಣು ಮಗುವಿನ ಮೇಲಿನ ಅಸಡ್ಡೆಯನ್ನು ಮೊದಲು ಕಡಿಮೆ ಮಾಡಿಕೊಳ್ಳಬೇಕು:ಸಚಿವೆ ಜೊಲ್ಲೆ

01:05 PM Mar 09, 2022 | Team Udayavani |

ಬೆಂಗಳೂರು: ಮೊದಲು ಮಹಿಳೆಯರು ಹೆಣ್ಣು ಮಗುವಿನ ಮೇಲಿನ ಅಸಡ್ಡೆಯನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.

Advertisement

ಇಂದು ಜಯನಗರದ ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊರತಂದಿರುವ ಕೇವಲ 390 ರೂಪಾಯಿಗಳಲ್ಲಿ ಮಹಿಳಾ ಸಮಗ್ರ ಆರೋಗ್ಯ ಪರೀಕ್ಷೆಯನ್ನು ಮಾಡುವಂತಹ ವಿಶೇಷ ಪ್ಯಾಕೇಜ್‌ಗೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ:ಒಂದು ಟಿಕೆಟ್‌ಗೆ ಮತ್ತೂಂದು ಟಿಕೆಟ್‌ ಫ್ರೀ: ವಂಡರ್‌ಲಾದಲ್ಲಿ ಮಹಿಳೆಯರ ನೂಕುನುಗ್ಗಲು

ಸೊಸೆ ಅಥವಾ ಮಗಳು ಹೆರಿಗೆ ಆದಾಗ ಮೊದಲು ಕೇಳುವ ಪ್ರಶ್ನೆ ಗಂಡೋ, ಹೆಣ್ಣೋ ಎಂದು. ತಾನೇ ಮಹಿಳೆಯಾಗಿದ್ದು ಹೆಣ್ಣು ಮಗು ಜನಿಸಿದಾಗ ಅಸಡ್ಡೆಯನ್ನು ತೋರಿಸುವ ಮೂಲಕ ಗಂಡ ಮಗುವೇ ಶ್ರೇಷ್ಠ ಎಂದು ಎತ್ತಾಡುತ್ತಾರೆ. ಈ ರೀತಿಯಾಗಿ ಮಹಿಳೆಯರೇ ಹೆಣ್ಣು ಮಗುವಿನ ಮೇಲಿನ ಅಸಡ್ಡೆಯನ್ನು ತೋರಿಸುವುದು ಸರಿಯಲ್ಲ. ಬದಲಾಗಿ ಹೆಣ್ಣು ಎನ್ನುವ ಖುಷಿಯನ್ನು ತಾವು ಮೊದಲು ಅನುಭವಿಸುವಂತಹ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next