Advertisement

ದೇಸೀಯ ಉತ್ಪನ್ನಗಳ ಬಳಕೆಗೆ ಮೇಳ

01:35 PM Feb 07, 2021 | Team Udayavani |

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 25ನೇ ಹುನಾರ್‌ ಹಾಟ್‌ ಕರಕುಶಲ ಮೇಳಕ್ಕೆ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಚಾಲನೆ ನೀಡಿದರು.

Advertisement

ಆತ್ಮ ನಿರ್ಭರ ಭಾರತ್‌ ಯೋಜನೆಯನ್ನು ಪ್ರೋತ್ಸಾಹಿಸುವ ಜತೆಗೆ ದೇಶದ ವಿವಿಧ ಭಾಗಗಳ ಕಲೆ, ಸಂಸ್ಕೃತಿ ಹಾಗೂ ಆಹಾರ ಪದ್ಧತಿ ಪರಿಚಯಿಸುವ ಸಲುವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಎನ್‌ಎಂಡಿಎಫ್ಸಿ ವತಿಯಿಂದ ನಗರ ಮಹಾರಾಜ ಕಾಲೇಜು ಮೈದಾನದಲ್ಲಿ ಈ ಮೇಳ ಆಯೋಜಿಸಲಾಗಿದ್ದು, ಫೆ.6ರಿಂದ 14ರ ವರೆಗೆ ನಡೆಯಲಿದೆ.

ಬಳಿಕ ಮಾತನಾಡಿದ ಸಚಿವ ಡಿ.ವಿ. ಸದಾನಂದ ಗೌಡ, ಆತ್ಮನಿರ್ಭರ ಯೋಜನೆಗೆ ಪೂರಕವಾಗಿ, ವೋಕಲ್‌ ಫಾರ್‌ ಲೋಕಲ್‌ ಘೋಷಣೆಗೆ ಪುಷ್ಟಿ ನೀಡು ವಂತೆ ದೇಸೀಯ ಉತ್ಪನ್ನಗಳ ಹುನಾರ್‌ ಹಾಟ್‌ ಮೇಳ ವನ್ನು ಆಯೋಜಿಸಲಾಗಿದೆ. ಈ ಮೇಳ ಈಗಾಗಲೇ 24 ಬಾರಿ ದೇಶದ ವಿವಿಧ ಭಾಗಗಳಲ್ಲಿ ನಡೆದಿದ್ದು, ಕರ್ನಾ ಟಕದಲ್ಲಿ ಮೊದಲನೆಯ ಬಾರಿಗೆ ನಡೆಸಲಾಗುತ್ತಿದೆ ಎಂದರು.

ದೇಶದಲ್ಲಿ ಹಲವಾರು ಧರ್ಮ, ಜಾತಿ, ಆಚಾರ- ವಿಚಾರ, ಸಂಸ್ಕೃತಿ ಇದೆ. ಈ ಮೇಳ ವಿವಿಧ ರೀತಿಯ  ಕರಕುಶಲ, ಕಲಾತ್ಮಕ ವಸ್ತುಗಳ ಮೂಲಕ ಆಯಾ ಸಂಸ್ಕೃತಿ, ಧರ್ಮವನ್ನು ಪ್ರತಿನಿಧಿಸುತ್ತದೆ. ದೇಶದಲ್ಲಿ  ಬೃಹತ್‌ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುವಂತೆ ಸಣ್ಣಪುಟ್ಟ ಕರಕುಶಲ ಕೆಲಸಗಳನ್ನು ಮಾಡುವವರ  ಸಂಖ್ಯೆಯೂ ಹೆಚ್ಚಳವಾಗಬೇಕು. ಮೈಸೂರು ಸಿಲ್ಕ್ ಸೀರೆ, ಚನ್ನಪಟ್ಟಣ ಗೊಂಬೆಗಳು ಮತ್ತಿತರ ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಬೇಕು. ಈ ನಿಟ್ಟಿನಲ್ಲಿ ಇಂತಹ ಮೇಳಗಳು  ಸಹಕಾರಿಯಾಗುತ್ತವೆ ಎಂದು ಹೇಳಿದರು.

ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ದೇಸೀಯ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು. ಆಗ ಮಾತ್ರ ಪ್ರಧಾನಿ ಮೋದಿಯವರ ಹೇಳಿಕೆಯಂತೆ ಲೋಕಲ್‌ ಟು ಗ್ಲೋಬಲ್‌ ಆಗಲು ಸಾಧ್ಯ. ಚೀನಾ ವಸ್ತುಗಳ ಬಳಕೆ ಬಿಟ್ಟು, ಪ್ರತಿ ಮನೆಯಲ್ಲೂ ಸ್ಥಳೀಯ ಉತ್ಪನ್ನಗಳ ಬಳಕೆ ಆರಂಭವಾಗಬೇಕು. ದೇಸೀಯ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆಯ ಸಮಸ್ಯೆ ಇದೆ.  ಅದಕ್ಕಾಗಿ ಉತ್ತಮ ಮಾರುಕಟ್ಟೆ ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೆಲಸ ಮಾಡಲಿದೆ ಎಂದರು.

Advertisement

ಇದನ್ನೂ ಓದಿ :ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪಕ್ಷಾಂತರ

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ ಸಿಂಹ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಪಿ.ಕೆ.ದಾಸ್‌, ಎನ್‌ಎಂಡಿ ಎಫ್ಸಿ ಮುಖ್ಯಸ್ಥ ಮೊಹಮದ್‌ ಶಹಬಾಜ್‌ ಆಲಿ, ಸಿಪಿಎಸ್‌ ಭಕ್ಷಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‌ ಕುಮಾರ್‌ ಗೌಡ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next