Advertisement

ಸಚಿವ ರುದ್ರಪ್ಪ ಲಮಾಣಿ, ಶಾಸಕರ ಮಧ್ಯೆವಾಗ್ವಾದ!

06:30 AM Feb 01, 2018 | |

ಹಾವೇರಿ: ರೈತರಿಗೆ ಬೆಳೆ ವಿಮೆ ಬಾಕಿ ಹಣ ಕೊಡಿಸುವ ವಿಚಾರದಲ್ಲಿ ಆಗುತ್ತಿರುವ ವಿಳಂಬಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸ್ವಪಕ್ಷದ ಶಾಸಕರೇ ಬಹಿರಂಗವಾಗಿ ವಾಗ್ವಾದ ನಡೆಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಬುಧವಾರ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ, ಬೆಳೆವಿಮೆ ಬಾಕಿ ಹಣ ಎಷ್ಟು ಕೊಡಲಾಗಿದೆ. ಎಷ್ಟು ಬಾಕಿ ಇದೆ ಎಂಬ ಮಾಹಿತಿ ನೀಡುತ್ತಿದ್ದರು. ಸಚಿವರು ಮಾತಾಡುತ್ತಿದ್ದಂತೆ ದಿಢೀರ್‌ ಮಧ್ಯ ಪ್ರವೇಶಿಸಿದ ಶಾಸಕ ಬಸವರಾಜ ಶಿವಣ್ಣನವರ, “ವಿಮೆ ಹಣ ರೈತರಿಗೆ ಕನ್ನಡಿಯೊಳಗಿನ ಗಂಟಾಗಿದೆ.ಬಂದಿದೆ ಎನ್ನುತ್ತಾರೆ. ಆರು ತಿಂಗಳಿಂದ ಅಧಿಕಾರಿಗಳು ಇವತ್ತು-ನಾಳೆ ಎನ್ನುತ್ತ ಕಾಲ ಕಳೆಯುತ್ತಿದ್ದಾರೆ. ನಾವು ಹೋದಲ್ಲೆಲ್ಲ ರೈತರು ನಮಗೆ ಬೈಯ್ಯುತ್ತಿದ್ದಾರೆ. ಇದರ ಬಿಸಿ(ಸಚಿವರಿಗೆ) ನಿಮಗೆ ಮುಟ್ಟಿಲ್ಲ. ಇದರ ಬಗ್ಗೆ ವಿಚಾರಿಸಿದರೆ ಕಂಪನಿ ಅಧಿಕಾರಿಗಳು, ಬ್ಯಾಂಕ್‌ನವರ ಮೇಲೆ,ಬ್ಯಾಂಕ್‌ನವರು ಕಂಪನಿಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಇಷ್ಟೆಲ್ಲ ಕೆಲಸ ಮಾಡಿದರೂ, ವಿರೋಧ ಪಕ್ಷದವರಿಂದಲೂ ಬೈಯಿಸಿಕೊಳ್ಳಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿದರು. ಸಚಿವ ರುದ್ರಪ್ಪ ಲಮಾಣಿ ಅಧಿಕಾರಿಗಳ ಸಭೆ ಮಾಡಿ ಅಂಕಿ-ಅಂಶ ಸಹಿತ ಮಾಹಿತಿ ಪಡೆದಿದ್ದೇನೆ.

ಶೀಘ್ರ ರೈತರ ಖಾತೆಗೆ ಹಣ ಹಾಕಿಸುವ ವ್ಯವಸ್ಥೆ ಮಾಡಲು ಹೇಳಿದ್ದೇನೆ ಎಂದರು. “ಮೊದಲು ಅಧಿಕಾರಿಗಳ ಸಭೆ ಮಾಡಿದ ಬಳಿಕವೇ ಸುದ್ದಿಗೋಷ್ಠಿ ಮಾಡಬೇಕಿತ್ತು’ ಎಂದರು ಶಾಸಕರು. ವಾಗ್ವಾದಕ್ಕೆ ತೆರೆ ಎಳೆಯಲು ಬೇರೆ ವಿಷಯ ಪ್ರಸ್ತಾಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next