Advertisement

ಗುರು ಕರುಣೆಯಿಂದ ಜೀವನ ಪಾವನ  

04:09 PM Feb 14, 2021 | Team Udayavani |

ರಾಣಿಬೆನ್ನೂರ: ಶಿಷ್ಯನ ಮನದ ಮಲಿನವನ್ನು ತೊಳೆಯಲು ಗುರುವಿನ ಸಾನ್ನಿಧ್ಯ ಬೇಕು. ಗುರುವಿಲ್ಲದಿದ್ದರೆ ಏನೂ ಆಗದು. ಗುರು ಸಾಮಾನ್ಯನಲ್ಲ. ಶಿಷ್ಯನನ್ನು ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುವವನೇ ಗುರು. ಅಂತಹ ಗುರುವಿನ ಕರುಣೆಗೆ ಪ್ರತಿಯೊಬ್ಬರೂ ಪಾತ್ರರಾಗಬೇಕು. ಅಂದಾಗ ಮಾತ್ರ ಜೀವನ ಪಾವನವಾಗುವುದು ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವ ಆರ್‌. ಶಂಕರ ಹೇಳಿದರು.

Advertisement

ಶನಿವಾರ ಇಲ್ಲಿನ ಸಿದ್ದೇಶ್ವರ ನಗರದ ಸಿದ್ದೇಶ್ವರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ, ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ರಾಣಿಬೆನ್ನೂರ, ಜಿಪಂ, ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕಿನ ಶಿಕ್ಷಕರ ಅಭಿನಂದನಾ ಸಮಾರಂಭ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಮಾತೆ ಸಾವಿತ್ರಿಬಾಯಿ  ಫುಲೆ ದಿನಾಚರಣೆ, ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದೇಶದ ಅಳಿವು ಉಳಿವು ಶಿಕ್ಷಕರ ಮೇಲಿದೆ. ಯಾವುದೇ ವ್ಯಕ್ತಿ ಉತ್ತಮ ನಾಗರಿಕನಾಗಿ ಬೆಳೆಯಲು ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಷ್ಯನಾದವನಿಗೆ ಗುರುವೇ ಶ್ರೇಷ್ಠ. ಗುರುವಿನ ಸಾಮಿಪ್ಯ ದೊರೆತರೆ ಶಿಷ್ಯನ ಜೀವನ ಪಾವನವಾಗುವುದು. ಅಂತಹ ಪವಿತ್ರ ಸ್ಥಾನ ಪಡೆದ ಶಿಕ್ಷಕರು ತಮ್ಮ ವೃತ್ತಿಗೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಮೂಲಕ ವೃತ್ತಿ ಪಾವಿತ್ರÂತೆ ಕಾಪಾಡುವುದರ ಜೊತೆಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಶ್ರಮಿಸಿ ಆದರ್ಶಪ್ರಾಯರಾಗಬೇಕು ಎಂದರು.

ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಮಾತನಾಡಿ, ಶಿಷ್ಯರನ್ನು ಸಂರಕ್ಷಿಸುವ, ಮುನ್ನಡೆಸುವ ದಾರಿದೀಪಗೈಯ್ಯುವ ಗುರುಗಳು ಶಿಷ್ಯರಿಗೆ ಅವಶ್ಯವಾಗಿ ಬೇಕಾಗಿದೆ. ಶಿಕ್ಷಕರು ದೇಶದ ಭವಿಷ್ಯ ಬರೆಯುವ ಆಧುನಿಕ ಶಿಲ್ಪಿಗಳು ಹಾಗೂ ಸತøಜೆಗಳನ್ನು ನಿರ್ಮಿಸುವ ಜವಾಬ್ದಾರಿ ಅವರ ಮೇಲಿದೆ. ಆದರ್ಶ ಗುಣಗಳನ್ನು ಶಿಕ್ಷಕರು ವೃತ್ತಿಯುದ್ದಕ್ಕೂ ಮೈಗೂಡಿಸಿಕೊಂಡು, ಮೃಧು ಮನಸ್ಸುಗಳ್ಳ ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು ಎಂದು ಹೇಳಿದರು.

ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ ಮಾತನಾಡಿ. ಸ್ತ್ರೀಯರಿಗೆ ಪ್ರಥಮವಾಗಿ ಶಿಕ್ಷಣ ನೀಡಲು ಮುಂದಾಗಿದ್ದು ಸಾವಿತ್ರಿಬಾಯಿ ಫುಲೆ. ಹಾಗಾಗಿ, ಇಂದು ಮಾತೆಯರು ಬಹಳಷ್ಟು ಶಿಕ್ಷಕರಾಗಿ ಸೇವೆ ಸಲ್ಲಿಸಲು ಕಾರಣವಾಗಿದೆ. ಆ ತಾಯಿಯ ಆದರ್ಶ ಗುಣಗಳನ್ನು ಎಲ್ಲ ಮಾತೆಯರು ಅಳವಡಿಸಿಕೊಂಡು ಮುನ್ನಡೆದರೆ ಇಂದು ಆಚರಿಸುವ ಜಯಂತಿಗೆ ಅರ್ಥ ದೊರೆಯಲಿದೆ ಎಂದು ತಿಳಿಸಿದರು.

Advertisement

ಹಾವೇರಿ ಡಯಟ್‌ ಉಪನ್ಯಾಸಕ ಎಂ.ಬಿ. ಅಂಬಿಗೇರ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ಧನಾತ್ಮಕ ಚಿಂತನೆ ಕುರಿತು ಉಪನ್ಯಾಸ ನೀಡಿದರು. ಬಿಇಒ ಗುರುಪ್ರಸಾದ ಎನ್‌. ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಎಪಿಎಂಸಿ ಅಧ್ಯಕ್ಷ ಬಸವರಜಾಜ ಸವಣೂರ, ಸದಸ್ಯ ಪರಮೇಶಪ್ಪ ಗೂಳಣ್ಣನವರ, ನಗರಸಭಾ ಉಪಾಧ್ಯಕ್ಷೆ ಕಸ್ತೂರಮ್ಮ ಚಿಕ್ಕಬಿದರಿ, ಜಿಪಂ ಸದಸ್ಯೆ ಗದಿಗವ್ವ ದೇಸಾಯಿ, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್‌. ಎಚ್‌. ಮೇಟಿ, ಉಪನಿದೇರ್ಶಕ ಅಂದಾನೆಪ್ಪ ವಡಗೇರಿ, ಶಿಕ್ಷಣಾ ಧಿಕಾರಿ ಎನ್‌.ಶ್ರೀಧರ, ಎಂ.ಸಿ. ಬಲ್ಲೂರ, ಬಿ.ಪಿ.ಶಿಡೇನೂರ, ಕ್ಷೇತ್ರ ಸಮನ್ವಯ ಅಧಿ ಕಾರಿ ಎಸ್‌.ವಿ.ಸೀಮಿಕೇರಿ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಲಿಂಗರಾಜ ಸುತ್ತಕೋಟಿ, ಸಿ.ಎಫ್‌.ಕಡೇಮನಿ, ಬಿ.ಪಿ.ತಳವಾರ, ಎಸ್‌.ಎಫ್‌. ಬೀರಜ್ಜನವರ, ಎಚ್‌. ಎಂ.ಸುತಾರ, ಎನ್‌.ಎಂ. ಚೌಡಣ್ಣವರ ಇತರರಿದ್ದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ  ಅವರನ್ನು ಅಭಿನಂದಿಸಲಾಯಿತು. ಅನುಸೂಯಾ ರಾಠೊಡ ಹಾಗೂ ಸಂಗಡಿಗರು ಪ್ರಾರ್ಥಿಸಿ, ಎಸ್‌.ಎಚ್‌. ಮೇಟಿ ಸ್ವಾಗತಿಸಿ, ಎಂ.ಕೆ.ಸಾಲಿಮಠ ಮತ್ತು ಎಂ.ಸಿ. ಬಲ್ಲೂರ ನಿರೂಪಿಸಿ, ಹೇಮಂತ ಎಸ್‌.ಕೆ. ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next