ದೊಡ್ಡಬಳ್ಳಾಪುರ: ಬೆಂ.ಗ್ರಾ ಜಿಲ್ಲಾ ಕೇಂದ್ರದ ಕುರಿತಾಗಿ ಎದ್ದಿರುವ ಗೊಂದಲ ಸರಿಪಡಿಸಲು ನಾಲ್ಕು ತಾಲೂಕು ಜನಾಭಿಪ್ರಾಯ ಸಂಗ್ರಹಿಸಿ ಒಂದು ತಿಂಗಳೊಳಗಾಗಿ ಜಿಲ್ಲಾ ಕೇಂದ್ರ ಕುರಿತು ಸ್ಪಷ್ಟ ನಿಲುವು ಪ್ರಕಟಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೊಡ್ಡಬಳ್ಳಾಪುರಕ್ಕೆ ಮಂಜೂರಾಗಿರುವ ಜಿಲ್ಲಾ ಸ್ಪತ್ರೆಗೆ ವಿಧಾನಸಭೆಯಲ್ಲಿ ಅನುಮೋದನೆ ದೊರಕದಿರುವ ಕುರಿತು ಮಾಧ್ಯಮವರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂ.ಗ್ರಾ.ಜಿಲ್ಲಾ ಘೋಷಣೆ ಆಗದ ಕಾರಣ ಅನು ಮೋದನೆಯಾಗಿಲ್ಲ, ಹೊಸಕೋಟೆ, ದೇವನಹಳ್ಳಿ, ದೊಡ್ಡ ಬಳ್ಳಾಪುರ, ನೆಲಮಂಗಲ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಿಸಿ ತಿಂಗಳೊಳಗಾಗಿ ಘೋಷಣೆ ಮಾಡಲಾಗುವುದೆಂದರು.
ದೊಡ್ಡಬಳ್ಳಾಪುರದ ಅನುದಾನ ತಡೆದಿರುವ ಶಾಸಕ ಟಿ.ವೆಂಕಟರಮಣಯ್ಯರ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗಾರಾಜ್ ಹಾಗೂ ಅಶೋಕ್ ಅವರು, ನಗರೋತ್ಥಾನ ಯೋಜನೆಯಡಿ ಮೊದಲ ಹಂತದ ಕಾಮಗಾರಿ ನಡೆದಿದ್ದು, ಮುಂದಿನ ಹಂತ ಬಿಡುಗಡೆಯಾಗಲಿದೆ. ಈಗ ಬಿಡುಗಡೆಯಾಗಿರುವ ಶಾಸಕರ ಅನುದಾನ ಬಳಸದೆ, ಎರಡನೇ ಹಂತದ ಹಣ ಕೇಳುವುದು ಎಷ್ಟು ಸರಿ. ಮೊದಲು ಬಿಡುಗಡೆಯಾದ ಹಣವನ್ನು ಬಳಕೆ ಮಾಡಿ ನಂತರ ಸರ್ಕಾರ ವಿರುದ್ಧ ಮಾತನಾಡಲಿ ಎಂದರು.
ಮಾರುಕಟ್ಟೆ ವೈಪರೀತ್ಯದಿಂದ ತೈಲ ಬೆಲೆ ಏರಿಕೆ: ಅಂತಾರಾಷ್ಟ್ರೀಯ ಮಾರುಕಟ ದೆr ರದ ಏರಿತದ ಕಾರಣ ಪೆಟ್ರೋಲ್, ಡಿಸೇಲ್ ಬೆಲೆ ಉಂಟಾಗುತ್ತದೆ. ಕೊರೊನಾದಿಂದ ಉಂಟಾದ ಆರ್ಥಿಕ ಅವ್ಯವಸ್ಥೆ ಸರಿದೂಗಿಸಲು ತೆರಿಗೆ ವಿಧಿಸುವುದು ಅನಿವಾರ್ಯ. ಆರೋಗ್ಯದ ಹಿತ ದೃಷ್ಟಿಯಿಂದ ಬೆಲೆ ಏರಿಕೆ ಅಗತ್ಯ ವಾಗಿದ್ದು, ಜನತೆಗೂ ಇದರ ಅರಿವಿದೆ ಎಂದರು.
54 ದೇಶಕ್ಕೆ ಕೊರೊನಾ ಲಸಿಕೆ: ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡಿದೆ. ಉದ್ಯೋಗ ಸೃಷ್ಟಿಯ ಬಜೆಟ್ ಇದಾಗಿದ್ದು, ಕೊರೊನಾದಿಂದ ಉಂಟಾದ ಆರ್ಥಿಕ ಅಸಮತೋಲನ ದಿಂದ ಪಾಕಿಸ್ತಾನ ಸೇರಿದಂತೆ ಇತರ ದೇಶಗಳ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಕೇಂದ್ರದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 2ಲಕ್ಷ 23 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. 54 ದೇಶಕ್ಕೆ ಕೊರೊನಾ ಲಸಿಕೆ ನೀಡಿದ್ದು, ಮತ್ತೆರಡು ಲಸಿಕೆ ಬರುತ್ತಿವೆ. ಆ ಮೂಲಕ ಭಾರತ ಇಡೀ ಪ್ರಪಂಚಕ್ಕೆ ಆರೋಗ್ಯ ಕೇಂದ್ರವಾಗಿದೆ. ಕರ್ನಾಟಕ 33 ರಾಷ್ಟ್ರೀಯ ಹೆದ್ದಾರಿಗಳಿಗೆ 10,904 ಕೋಟಿ ರೂ. ಬಿಡುಗಡೆ, 2ನೇ ಹಂತದ ಬೆಂಗಳೂರು ಮೆಟ್ರೊ ನಿರ್ಮಾಣಕ್ಕೆ 14,788 ಕೋಟಿ ರೂ.ಬಿಡುಗಡೆ ಹಾಗೂ ಹಲವಾರು ಜನಪರ ಕಾರ್ಯಗಳಿಸಗೆ ಹಣ ಮೀಸಲಿರಿಸಿದ್ದು, ರಾಜ್ಯ ಬಜೆಟ್‌ಗೆ ಪೂರಕ ಬಜೆಟ್ ಆಗಿದೆ. ಸಿಎಂ ಬಿಎಸ್‌ವೈ ಮುಂದಿನ ತಿಂಗಳ ಅಧಿವೇಶನದಲ್ಲಿ ಇದೇ ಮಾದರಿಯಲ್ಲಿ ಬಜೆಟ್ ನೀಡಲಿದ್ದಾರೆ ಎಂದರು.
ಕೃಷಿ ಕಾಯ್ದೆ ವಿರೋಧ ಕಾಂಗ್ರೆಸ್ ಕೈವಾಡ: ಕಾಂಗ್ರೆಸ್ ಕೈವಾಡದಿಂದ ಕೃಷಿ ಕಾಯ್ದೆ ತಿದ್ದುಪಡಿ ವಿರುದ್ಧ ಅಪಪ್ರಚಾರ ಮಾಡಿ ರೈತರನ್ನು ದಿಕ್ಕು ತಪ್ಪಿಸಿ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿಸುತ್ತಿದೆ. ಈ ಕಾಯ್ದೆಯಿಂದ ರೈತನಿಗೆ ಸ್ವಾತಂತ್ರ್ಯ ಸಿಗಲಿದೆ. ಕಾಯ್ದೆಯಿಂದ ಎಪಿಎಂಸಿಗೆ ಹಾನಿಯಾಗುವುದಲ್ಲ ಎಂದರು.
ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಗೋವಿಂದರಾಜು, ವಕ್ತಾರರಾದ ಪುಷ್ಪಾಶಿವಶಂಕರ್, ತಾಲೂಕು ಅಧ್ಯಕ್ಷ ನಾಗರಾಜ್ ಇದ್ದರು.