ಬೆಂಗಳೂರು: ಉದ್ಯಮಿಗಳಿಗೆ ಬೆಂಗಳೂರು ಬಿಟ್ಟು ತೆಲಂಗಾಣಕ್ಕೆ ಬರುವಂತೆ ಮುಕ್ತ ಆಹ್ವಾನ ನೀಡಿದ್ದ ತೆಲಂಗಾಣ ಸಚಿವ ಕೆ.ಟಿ.ರಾಮಚಂದ್ರ ರಾವ್ (ಕೆಟಿಆರ್) ಗೆ ಕಂದಾಯ ಸಚಿವ ಆರ್.ಅಶೋಕ ವಿಧಾನಸಭೆಯಲ್ಲಿ ತಿರುಗೇಟು ನೀಡಿದ್ದಾರೆ.
ಕೆರೆ ಒತ್ತುವರಿ ವಿಚಾರದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ನಡೆದ ವಾಗ್ವಾದ ಸಂದರ್ಭದಲ್ಲಿ, ಕಾಂಗ್ರೆಸ್ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ಪ್ರಸ್ತಾಪಿಸಿದಾಗ ಅಶೋಕ ತಿರುಗೇಟು ನೀಡುವ ಜತೆಗೆ ಕೆರೆ ಒತ್ತುವರಿ ಪಟ್ಟಿಯನ್ನು ಅವರು ಬಿಡುಗಡೆ ಮಾಡಿದರು.
ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆಯಾಗುತ್ತದೆ ಎಂದು ಕಾಂಗ್ರೆಸಿನವರು ಮಾತನಾಡುತ್ತಿದ್ದಾರೆ. ತೆಲಂಗಾಣದ ಮಂತ್ರಿಯೊಬ್ಬರು ಉದ್ಯಮಿಗಳು ಬೆಂಗಳೂರು ಬಿಟ್ಟು ಬರಲಿ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ. ಆದರೆ ಬೆಂಗಳೂರು ಬಿಟ್ಟು ಎಷ್ಟು ಉದ್ಯಮಿಗಳು ಹೋಗಿದ್ದಾರೆ! ಬೆಂಗಳೂರು ಬಿಟ್ಟು ಹೋದ ಉದ್ಯಮಿಗಳು ಯಾರು ಎಂದು ನಾನೂ ಹುಡುಕುತ್ತಿದ್ದೇನೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಶಿಕ್ಷಕರ ನೇಮಕಾತಿ ಹಗರಣ: ಪಾರ್ಥ, ಅರ್ಪಿತಾಗೆ ಸೇರಿದ 46 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದರೆ ನೀವು ಕೆಟಿಆರ್ ಬಗ್ಗೆ ಮಾತನಾಡುತ್ತಿದ್ದೀರಿ. ನಿಮ್ಮ ಕೆಲಸದ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಇದಕ್ಕೆ ತಿರುಗೇಟು ನೀಡಿದರು.
ಇದಕ್ಕೆ ತಿರುಗೇಟು ನೀಡಿದ ಅಶೋಕ, ಪ್ರತಿದಿನ ಹತ್ತು ಉದ್ಯಮಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಕಾಂಗ್ರೆಸ್ ನವರು ಬೆಂಗಳೂರಿನ ಬ್ರ್ಯಾಂಡ್ ಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.