Advertisement
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಹೈ ಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಡಾ| ಅಜಯಸಿಂಗ್ ಎರಡನೇ ಬಾರಿಗೆ ಶಾಸಕರಾಗಿದ್ದಾರಲ್ಲದೇ ಅವರ ತಂದೆ ದಿ. ಧರ್ಮಸಿಂಗ್ ಕ್ರಾಂಗ್ರೆಸ್‌ಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಧರ್ಮಸಿಂಗ್ ಅವರಿಂದು ಇದ್ದಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಸಚಿವ ಸ್ಥಾನ ನೀಡದೇ ದ್ರೋಹ ಬಗೆಯಲಾಗಿದೆ. ಈಗಲಾದರೂ ಪರಿಸ್ಥಿತಿ ಅರಿತು ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜಶೇಖರ ಸಿರಿ, ಸಿದ್ದಲಿಂಗರೆಡ್ಡಿ ಇಟಗಾ, ಚಂದ್ರಕಾಂತ ಯಂಕಂಚಿ, ರಹಿಮಾನ್ ಪಟೇಲ, ಬಹದ್ಧೂರ ರಾಠೊಡ, ಪ್ರಕಾಶ ಪುಲಾರೆ, ನೀಲಕಂಠ ಅವುಂಟಿ, ರವಿ ಕೋಳಕೂರ, ಬೆಣ್ಣೆಪ್ಪ ಕೊಂಬಿನ, ಸಕ್ರೆಪ್ಪಗೌಡ ಹರನೂರ, ತುಕಾರಾಮ ಚವ್ಹಾಣ ಗುಡೂರ, ತಿಪ್ಪಣ್ಣ ಕನಕ, ಶರಣು ಗುತ್ತೇದಾರ, ಬಸಣ್ಣ ಸರಕಾರ, ಬೀದಿ ವ್ಯಾಪಾರಿ ಸಂಘದ ಅಧ್ಯಕ್ಷರಾದ ಇಮಾಮಸಾಬ್ ಭಾಗವಾನ ಮಿರ್ಚಿ, ಫಯಾಜ ಜಮಾದಾರ, ದೌಲಪ್ಪ ಮದನ, ಮಲ್ಲಿಕಾರ್ಜುನ ಕೆಲ್ಲೂರ, ಶ್ರೀಮಂತ ಧನಕರ್, ಮಲ್ಲಣ್ಣ ಕೊಡಚಿ, ಸುನಿಲ ಹಳ್ಳಿ, ಮಲ್ಲಮ್ಮ ಕೊಂಬಿನ, ಸಿದ್ಧು ಶರ್ಮಾ ಜನಿವಾರ, ದೇವಿಂದ್ರ ಮುದಬಾಳ, ಮರೆಪ್ಪ ಸರಡಗಿ, ಸಿದ್ರಾಮ ಕಟ್ಟಿ, ಭೀಮಾಶಂಕರ ಜನಿವಾರ, ಪ್ರಶಾಂತಗೌಡ ಮಾಲಿ ಪಾಟೀಲ ಜೈನಾಪೂರ, ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದುದ್ದಕ್ಕೆ ಬೇಸರಗೊಂಡ ಅವರ ಅಭಿಮಾನಿಯೊಬ್ಬ ವಿಷ ಸೇವಿಸಿದ್ದಾನೆ. ಡಾ| ಅಜಯ್‌ಸಿಂಗ್ ಕಟ್ಟಾ ಅಭಿಮಾನಿಯಾಗಿರುವ 35 ವರ್ಷದ ಚಿಕ್ಕ ಜೇವರ್ಗಿ ಗ್ರಾಮದ ಮಹ್ಮದ್ ಜಿಲಾನಿ ಮುನ್ಸಿ ವಿಷ ಸೇವಿಸಿದ ಯುವಕ. ಶಾಸಕರಿಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿಷ ಸೇವಿಸಿದ್ದಾನೆ. ಈತನೀಗ ಜೇವರ್ಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹ್ಮದ ಜಿಲಾನಿ ಚಿಕಿತ್ಸೆಗೆ ಸ್ವಲ್ಪ ಮಟ್ಟಿಗೆ ಸ್ಪಂಧಿಸುತ್ತಿದ್ದು, ಎರಡೂಮೂರು ದಿನಗಳ ಕಾಲ ಸ್ಪಷ್ಟವಾಗಿ ಏನೂ ಹೇಳಲಿಕ್ಕೆ ಸಾಧ್ಯವಿಲ್ಲ ಎಂದು ಚಿಕಿತ್ಸೆ ನೀಡಿದ ಡಾ| ರಾಘವೇಂದ್ರ ಕುಲಕರ್ಣಿ ತಿಳಿಸಿದ್ದಾರೆ.