ಮೈಸೂರು : ಮೈಸೂರಿನಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿರುವ ಎಲ್ಲಾ ವಿದ್ಯುತ್ ಕಂಪೆನಿ ಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕರರು ಆತಂಕ ಪಡುವ ಪ್ರಮೇಯವಿಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳೊಡನೆ ಉನ್ನತ ಮಟ್ಟದ ಸಭೆ ನಡೆಸಿ ಇಲಾಖೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಶ್ರೀ ಸಾಮಾನ್ಯ ಹಾಗೂ ರೈತರಿಗೆ ತಲುಪಿಸುವ ಕಾರ್ಯ ಮಾಡಲಾಗುವುದು ರೈತರ ಉಪಯೋಗಿಸುವ ವಿದ್ಯುತ್ ಗೆ ಮೀಟರ್ ಅಳವಡಿಸುವ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಕೋವಿಡ್ ನಿಂದ ಸಂಕಷ್ಟದಲ್ಲಿರುವವರ ಸಹಾಯಕ್ಕಾಗಿ ‘ಪಿಕಲ್ಡ್ ವಿತ್ ಲವ್’ : 87ರ ಅಜ್ಜಿಯ ಉದ್ಯಮ
ರಾಜ್ಯದ ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ರಾಜ್ಯದಲ್ಲಿ ಇನ್ಮುಂದೆ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಕೊರೊನಾ ಲಾಕ್ ಡೌನ್ ನಂತರ ಕೈಗಾರಿಕೆಗಳು ಬಳಕೆ ಮಾಡುವ ವಿದ್ಯುತ್ ದರ ಕಡಿಮೆ ಮಾಡುವಂತೆ ಕೋರಿಕೊಂಡಿದ್ದಾರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ರಾಜ್ಯದ ಎಲ್ಲಾ ಜಿಲ್ಲೆಗಳನ ಹಳ್ಳಿಗಳಿಗೆ ವಿದ್ಯುತ್ ನೀಡುವುದೇ ನಮ್ಮ ಮೂಲ ಉದ್ದೇಶವಾಗಿದೆ ವಿದ್ಯುತ್ ಮೀಟರ್ ಗಳನ್ನು ಸ್ಮಾರ್ಟ ಮೀಟರ್ಗಳ ಮಾಡುವ ಯೋಜನೆ ಸದ್ಯಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು, ಕೋವಿಡ್ ಹಿನ್ನಲೆಯಲ್ಲಿ ಕಲಾವಿದರಿಗೆ 3ತಿಂಗಳಿಂದ ಮಾಶಾಸನ ಸಿಕ್ಕಿಲ್ಲ ಈ ಮುಂದೆ ಸರಿಯಾಗಿ ಮಾಸಾಶನ ನೀಡಲಾಗುವುದು ರಾಜ್ಯದಲ್ಲಿರುವ ಎಲ್ಲ ರಂಗ ಕರ್ಮಿಗಳೊಡನೆ ಸಭೆ ನಡೆಸಿ ಅವರ ಸಲಹೆ ಸೂಚನೆಗಳನ್ನು ಪಡೆಯಲಾಗುವುದು ಎಂದಿದ್ದಾರೆ.
ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸುನೀಲ್, ಕಾಂಗ್ರೆಸ್ ನವರು ಆರ್ ಎಸ್ ಎಸ್ ಬಗ್ಗೆ ಮಾತನಾಡಿರುವುದರಿಂದ ಅವರ ಬೌದ್ಧಿಕ ದಿವಾಳಿತನವಾಗಿದೆ. ಆರ್ ಎಸ್ ಎಸ್ ಸಂಸ್ಕೃತಿ ದೇಶ ಹಾಗೂ ಸೇವಾ ಮನೋಭಾವವುಳ್ಳ ಸಂಘವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಎಚ್ಚರಿಕೆ…ದೇಶ ಬಿಟ್ಟು ತೆರಳಬೇಡಿ: ತಾಲಿಬಾನ್ ಬೆದರಿಕೆಗೆ ಅಫ್ಘಾನ್ ನಾಗರಿಕರು ಕಂಗಾಲು