ನವದೆಹಲಿ: ಒಮ್ಮೊಮ್ಮೆ ರಾಜಕೀಯ ತ್ಯಜಿಸಬೇಕೆಂಬ ಭಾವನೆ ಬರುತ್ತದೆ. ಯಾಕೆಂದರೆ ಜೀವನದಲ್ಲಿ ಇನ್ನೂ ಹೆಚ್ಚಿನದಿದೆ ಎಂದು ನಂಬಿದ್ದೇನೆ…ಇದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ತವರಾದ ಮಹಾರಾಷ್ಟ್ರದ ನಾಗ್ಪುರ್ ನಲ್ಲಿ ನಡೆದ ಸಮಾರಂಭದಲ್ಲಿ ನೀಡಿದ ಹೇಳಿಕೆಯಾಗಿದೆ.
ಇದನ್ನೂ ಓದಿ:ವಿದ್ಯಾರ್ಥಿನಿಗೆ ಬುದ್ದಿವಾದ ಹೇಳಿದ್ದಕ್ಕೆ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿದ ಪೋಷಕರು
“ಹಲವಾರು ಬಾರಿ ನಾನು ರಾಜಕೀಯ ತ್ಯಜಿಸಬೇಕೆಂದು ಯೋಚಿಸಿದ್ದೆ. ಜೀವನದಲ್ಲಿ ರಾಜಕೀಯಕ್ಕಿಂತ ಇನ್ನೂ ಹೆಚ್ಚಿನದಿದೆ. ಸಾಮಾಜಿಕ ಬದಲಾವಣೆಗೆ ರಾಜಕೀಯ ಹೆಚ್ಚು ಪರಿಣಾಮಕಾರಿ ಎಂದು ನಂಬಿದ್ದೇನೆ. ಆದರೆ ಅದಕ್ಕೆ ಹೆಚ್ಚಿನ ಅಧಿಕಾರ ಬೇಕಾಗುತ್ತದೆ ಎಂದು ಗಡ್ಕರಿ ಹೇಳಿದರು.
ಅವರು ನಾಗ್ಪುರ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಗಾಂಧಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯವ್ಯಕ್ತಪಡಿಸಿದ್ದರು. ಗಿರೀಶ್ ಬಾವು ಅವರು ಯಾವಾಗಲೂ ರಾಜಕೀಯದಿಂದ ದೂರವಿರಲು ಪ್ರಯತ್ನಿಸುತ್ತಿದ್ದರು ಎಂದರು. ಗಿರೀಶ್ ಗಾಂಧಿ ಅವರು 2014ರಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದರು.
ಸಾಮಾಜಿಕ -ಆರ್ಥಿಕ ಸುಧಾರಣೆಯ ನಿಜವಾದ ಸಾಧನವಾಗಿದೆ. ಹೀಗಾಗಿ ಇಂದಿನ ರಾಜಕಾರಣಿಗಳು ಶಿಕ್ಷಣ, ಕಲೆ ಸೇರಿದಂತೆ ಸಮಾಜದ ವಿವಿಧ ಸ್ತರಗಳ ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ.