Advertisement

ಸಚಿವ ನಾರಾಯಣ ಗೌಡ ಮೇಲೆ JDS ಕಾರ್ಯಕರ್ತರಿಂದ ದಾಳಿ

07:41 PM May 05, 2023 | Team Udayavani |

ಮಂಡ್ಯ: ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಬಿಜೆಪಿ ಅಭ್ಯರ್ಥಿ, ಸಚಿವ ನಾರಾಯಣ ಗೌಡರ ಮೇಲೆ ಜೆಡಿಎಸ್‌ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಕೆ.ಆರ್‌.ಪೇಟೆ ಶೀಳನೆರೆ ಹೋಬಳಿ ರಾಜಘಟ್ಟದ ಬಳಿ ನಡೆದಿದೆ. ನಾರಾಯಣ ಗೌಡರ ಕಾರನ್ನು ಅಡ್ಡಗಟ್ಟಿದ್ದ 70ಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತತ್‌ಕ್ಷಣ ಅಂಗರಕ್ಷಕರು ಹಾಗೂ ಜತೆಗಿದ್ದವರು ನಾರಾಯಣ ಗೌಡರನ್ನು ರಕ್ಷಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಬೆಂಬಲಿಗರು ಪ್ರಚಾರಕ್ಕೆ ಅಡ್ಡಿಪಡಿಸಿ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ನಾರಾಯಣ ಗೌಡ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next