Advertisement

ಸರ್ಕಾರದ ಯೋಜನೆ ಪ್ರತಿ ಮನೆಗೆ ತಲುಪಿದೆ: ಸಚಿವ ಮುನಿರತ್ನ

04:20 PM Aug 29, 2022 | Team Udayavani |

ಶ್ರೀನಿವಾಸಪುರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಯೋಜನೆಗಳು ಪ್ರತಿ ಮನೆಗೆ ತಲುಪಿವೆ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

Advertisement

ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಜನೋತ್ಸವ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ 3 ವರ್ಷದ ಜನಪ್ರಿಯ ಯೋಜನೆಗಳ ಬಗ್ಗೆ ಸಾಧನಾ ಸಮಾವೇಶ ನಡೆಸಲು ದೊಡ್ಡ ಬಳ್ಳಾಪುರ ದಲ್ಲಿ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಇಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.

ಜನರ ಕರೆತನ್ನಿ: ಪ್ರತಿ ಕುಟುಂಬ ಅಭಿವೃದ್ಧಿ ಆಗಬೇಕೆಂಬ ಪ್ರಧಾನಿ ಮೋದಿ ಹತ್ತು ಹಲವು ಯೋಜನೆ ತಂದು ವಿಶ್ವ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ. ಜನರಿಗೆ ಸರ್ಕಾರದ ಸಾಧನೆ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕ್ಷೇತ್ರದಿಂದ 15 ಸಾವಿರ ಮಂದಿ ಬರಬೇಕೆಂದು ತಿಳಿಸಿದೆ. ಹಾಗಾಗಿ ಕಾರ್ಯಕರ್ತರು ಜನರನ್ನು ಕರೆ ತರಬೇಕೆಂದು ತಿಳಿಸಿದರು.

ಸರ್ಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆದರೂ ಇಲ್ಲಿನ ಶಾಸಕರು ನಾನೇ ಮಾಡಿಸಿದ್ದು ಎನ್ನುತ್ತಾರೆ. ಕೆ.ಸಿ.ವ್ಯಾಲಿ 2ನೇ ಹಂತದ ಯೋಜನೆಗೆ ಸಿ.ಎಂ.ಬಸವರಾಜು ಬೊಮ್ಮಾಯಿ ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಲ್ಲಿ ಬಂದು ಡಿಸಿಸಿ ಬ್ಯಾಂಕ್‌ ಸಾಲ ವಿತರಣೆ ಮಾಡುತ್ತಾರಂತೆ, ರಾಹುಲ್‌ ಗಾಂಧಿಗೂ ಕೋಲಾರ ಡಿಸಿಸಿ ಬ್ಯಾಂಕ್‌ಗೆ ಸಂಬಂಧವೇನು ಎಂದು ಟೀಕಿಸಿದರು.

Advertisement

ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರೈಲ್ವೆ ಕಂಬಿಗಳಂತೆ, ಒಂದಾಗುವುದು ಸುಳ್ಳಿನ ಮಾತು. ಕಾಂಗ್ರೆಸ್‌ ಸರ್ಕಾರ ಬರುವುದು ಕನಸು. ಆದರೂ, ಸರ್ಕಾರದ ಜನಪ್ರಿಯ ಯೋಜನೆಗಳನ್ನು ಸಹಿಸಿದೆ, ಅಪಪ್ರಚಾರ ಮಾಡುತ್ತಿ ದ್ದಾರೆ. ಇದಕ್ಕೆ 2023ನೇ ಸಾಲಿಗೆ ಬಿಜೆಪಿ ಸರ್ಕಾರ ಬರಲು ತಾವು ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ನಳಿನ್‌ಕುಮಾರ್‌ ಕಟೀಲ್‌ ಅವರು ಬಿಜೆಪಿ ಅಧ್ಯಕ್ಷರಾಗಿ 3 ವರ್ಷ ಪೂರೈಸಿದ್ದಾರೆ. ಸರ್ಕಾರದ ಸಾಧನೆ ಬಗ್ಗೆ ಜನೋತ್ಸವ ನಡೆಸಲಾಗುತ್ತಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ ಪ್ರಾಸ್ತಾವಿಕವಾಗಿ, ಮಾಜಿ ಶಾಸಕ ವರ್ತೂರ್‌ ಪ್ರಕಾಶ್‌ ಇತರರು ಮಾತನಾಡಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್‌, ಬಂಗಾರಪೇಟೆ ಮಾಜಿ ಶಾಸಕ ಬಿ.ಪಿ.ವೆಂಕಟ ಮುನಿಯಪ್ಪ, ಎಸ್‌.ಬಿ.ಮುನಿವೆಂಕಟಪ್ಪ, ಲಕ್ಷ್ಮಣಗೌಡ, ಚಂದ್ರಾರೆಡ್ಡಿ ಸೇರಿ ಜಿಲ್ಲಾ, ತಾಲೂಕು ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next