Advertisement
ಬಿಜೆಪಿಯ ಜನಸ್ಪಂದನಾ ಸಮಾವೇಶ ಯಶಸ್ವಿ ಯಾದ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನ ಕೆಂದಟ್ಟಿ ಸಮೀಪ ನಡೆದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕೋಲಾರ ಕ್ಷೇತ್ರದ 14 ಗ್ರಾಪಂನಲ್ಲಿ ಬಿಜೆಪಿ ಧ್ವಜ ಹಾರಾಡಿದೆ ಎಂದು ಹೇಳಿದರು.
Related Articles
Advertisement
ಸಚಿವರೇ ಜಿಲ್ಲೆಗೆ ಸುಪ್ರಿಂ ನಾಯಕ: ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಯಲ್ಲಿ ಸ್ಪರ್ಧಿಸಲ್ಲ. ಆದರೂ, ಪಕ್ಷ ಬಲಪಡಿಸಲು ಪಣತೊಟ್ಟು ಇಲ್ಲಿಗೆ ಬಂದಿದ್ದಾರೆ. ಇವರೇ ನಮ್ಮ ಜಿಲ್ಲೆಗೆ ಸುಪ್ರೀಂ. ಯಾರು, ಯಾರಿಗೂ ಅಂಜಬೇಕಾಗಿಲ್ಲ ಎಂದು ತಿಳಿಸಿದರು.
ಸಚಿವರ ನೇತೃತ್ವದಲ್ಲೇ ಚುನಾವಣೆ ನಡೆಯಬೇಕು. ನಾಟಕಗಳು ಬೇಡ, ಸಂಸದರಾಗಲಿ, ನಾನಾಗಲಿ, ಇನ್ನೊಬ್ಬರಾಗಲಿ ಉಸ್ತುವಾರಿ ಸಚಿವರಿಗೆ ಗೌರವ ಕೊಡಲೇ ಬೇಕು. ಚುನಾವಣೆಗೆ ಹೋದಾಗ ಜನರ ಆಶೀರ್ವಾದ ಇದ್ದರೆ ಗೆಲ್ಲುತ್ತೇವೆ ಎಂದು ಹೇಳಿದರು.
1 ಲಕ್ಷ ಜನಕ್ಕೆ ನಾನೇ ಊಟ ಹಾಕಿಸುತ್ತೇನೆ: ಮಾಜಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡ ಮಾತನಾಡಿ, ಎಂಎಲ್ಸಿ ಚುನಾವಣೆ, ದೊಡ್ಡಬಳ್ಳಾಪುರದ ಸಮಾವೇಶ ನಮ್ಮಲ್ಲಿ ಹುಮ್ಮಸ್ಸು ತಂದಿದೆ. ಮೊದಲು ಬಿಜೆಪಿ ಹೀಗೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 4 ಸ್ಥಾನ ಗೆಲ್ಲಿಸಿಕೊಳ್ಳಬೇಕಿದೆ. ಮುಂದೆ 1 ಲಕ್ಷ ಜನಕ್ಕೆ ನಾನೇ ಊಟ ಹಾಕಿಸುತ್ತೇನೆ. ನೀವೂ ಹಾಗೂ ಸಚಿವ ಡಾ. ಸುಧಾಕರ್ ಜವಾಬ್ದಾರಿ ತೆಗೆದುಕೊಂಡರೆ ಎರಡೂ ಜಿಲ್ಲೆಗಳಲ್ಲಿ ಇನ್ನಷ್ಟು ಸ್ಥಾನ ಗೆಲ್ಲಬಹುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಡಬಲ್ ಎಂಜಿನ್ ಸರಕಾರ ತ್ರಿಬಲ್ ಎಂಜಿನ್ ಸರಕಾರ ಆಗಬೇಕಾದರೆ ಮುಂದಿನ ಚುನಾವಣೆಗಳಲ್ಲಿ ಇನ್ನಷ್ಟು ನಾವು ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು. ಸಭೆಗೂ ಮುನ್ನ ಸಚಿವರಿಗೆ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕಿ ತೆರೆದ ವಾಹನದಲ್ಲಿ ವೇದಿಕೆ ಬಳಿಗೆ ಕರೆತರಲಾಯಿತು. ಸಭೆಯಲ್ಲಿ ಮಾಜಿ ಶಾಸಕರಾದ ಬಿ.ಪಿ.ವೆಂಕಟ ಮುನಿಯಪ್ಪ, ಎಂ.ನಾರಾಯಣಸ್ವಾಮಿ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಾಸುದೇವ್, ಕೆಯುಡಿಎ ಅಧ್ಯಕ್ಷ ವಿಜಯ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯರಾದ ಅರುಣ್ ಪ್ರಸಾದ್, ರೂಪಶ್ರೀ ಮಂಜುನಾಥ್, ಅಶ್ವಿನಿ ಸಂಪಂಗಿ, ವೆಂಕಟೇಶ್‌ಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ. ರಾಮಚಂದ್ರೇಗೌಡ, ಕೆಜಿಎಫ್ ಟಿಎಪಿಸಿಎಂಎಸ್ ಅಧ್ಯಕ್ಷ ಪ್ರವೀಣ್, ಮುಖಂಡರಾದ ನಾರಾಯಣ ಸ್ವಾಮಿ, ಬೆಗ್ಲಿ ಸೂರ್ಯಪ್ರಕಾಶ್, ಬಂಕ್ ಮಂಜು, ಮಮತಮ್ಮ, ಸರಸ್ವತಿ ಉಪಸ್ಥಿತರಿದ್ದರು.