Advertisement

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವಿವಿಧ ಕಾಮಗಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಶಂಕುಸ್ಥಾಪನೆ

02:34 PM Oct 08, 2024 | Team Udayavani |

ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ಆ.8ರ ಮಂಗಳವಾರ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವಿವಿಧ ಕಾಮಗಾರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಶಂಕುಸ್ಥಾಪನೆ ನೆರವೇರಿಸಿದರು.

Advertisement

30 ಕೋಟಿ ವೆಚ್ಚದಲ್ಲಿ ವಿದ್ಯುನ್ಮಾನ ಮಾದರಿ ಉದ್ಯಾನವನ ನಿರ್ಮಾಣ ಮಾಡಲಾಗುವುದಾಗಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಭವಿಷ್ಯದಲ್ಲಿ ಕಿತ್ತೂರು ನಾಡಿನ ಇತಿಹಾಸ ಉಳಿಸಲು ಕಿತ್ತೂರು ಕೋಟೆಯ ಐತಿಹಾಸಿಕ ಅವಶೇಷಗಳ ಸಂರಕ್ಷಿಸಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಿತ್ತೂರು ಕೋಟೆಯನ್ನು ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

30 ಕೋಟಿ ಅನುದಾನದಲ್ಲಿ ಹೊಸ ತಂತ್ರಜ್ಞಾನ ಬಳಕೆಯ ಮೂಲಕ ವಿದ್ಯುನ್ಮಾನ ಮಾದರಿಯ ಉದ್ಯಾನವನ (ಥೀಮ್ ಪಾರ್ಕ್) ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕೋಟೆಯ ಮಹಾದ್ವಾರ, ಗೋಡೆಗಳು ಸೇರಿದಂತೆ ವಿವಿಧ ಅವಶೇಷಗಳನ್ನು ಸಂರಕ್ಷಿಸಲು 12.11 ಕೋಟಿ ರೂ ಹಾಗೂ ವಿವಿಧ ಕಾಮಗಾರಿಗಳಿಗೆ 2.4 ಕೋಟಿ ಅನುದಾನ ಬಳಕೆಯಾಗಲಿದೆ. ಕಳೆದ 1 ವರ್ಷದಿಂದ ಈ ಭಾಗದ ಶಾಸಕರ ಬೇಡಿಕೆಯಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಟೆ ಅಭಿವೃದ್ಧಿಗೆ ಕೂಡಲೇ ಅನುದಾನ ಮಂಜೂರು ಮಾಡಿದ್ದಾರೆ ಎಂದರು.

Advertisement

ಕೋಟೆಯ ಕೆಲವು ಭಾಗ ಶೀಥಿಲಗೊಂಡಿದ್ದು, ಇನ್ನಷ್ಟು ದುರಸ್ಥಿ ಕಾಮಗಾರಿಯ ಅವಶ್ಯಕತೆಯಿದೆ. ಕೋಟೆಯ ಕುಸಿದ ಗೋಡೆಗಳನ್ನು ನವೀಕರಿಸಿ ಕೋಟೆ ಅವಶೇಷಗಳ ಸಂರಕ್ಷಣೆಯ ಮೂಲಕ ಇತಿಹಾಸ ಉಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಕಿತ್ತೂರಿನ 200 ವರ್ಷದ ವಿಜಯೋತ್ಸವದಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಉದ್ದೇಶವಾಗಿತ್ತು. ಆದರೆ ಇನ್ನಷ್ಟು ಭದ್ರ ಕೆಲಸವಾಗಬೇಕು ಎಂಬುದು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಮಯ ತೆಗೆದುಕೊಂಡು ಕಾಮಗಾರಿಗಳನ್ನು ಪ್ರಾರಂಭಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಕೋಟೆ ಮರು ನಿರ್ಮಾಣದ ಚಿಂತನೆ ಇದೆ. ಆದರೆ ಅರಮನೆಯ ಮೂಲ ವಿನ್ಯಾಸದ ಮಾಹಿತಿಯಿಲ್ಲದ ಕಾರಣ ಮರು ನಿರ್ಮಾಣ ವಿಳಂಬವಾಗುತ್ತಿದೆ. ಸದ್ಯ ಉಳಿದ ಅವಶೇಷಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ತ್ವರಿತವಾಗಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಕಿತ್ತೂರು ಭಾಗವನ್ನು ದೊಡ್ಡ ಪ್ರವಾಸಿ ತಾಣವಾಗಿ ಮಾರ್ಪಡು ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.

30 ಕೋಟಿ ಅನುದಾನದಲ್ಲಿ ಕಿತ್ತೂರು ಇತಿಹಾಸವನ್ನು ಇಂದಿನ ಪೀಳಿಗೆ ಪರಿಚಯಿಸಲು ಆಧುನಿಕ ಮಾದರಿಯ ಉದ್ಯಾನವನ ನಿರ್ಮಾಣ ಮಾಡಲು ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

ಈ ಬಾರಿ ಕಿತ್ತೂರು ಉತ್ಸವಕ್ಕೆ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.

ಇದಕ್ಕೂ ಮುಂಚೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಿತ್ತೂರು ಕೋಟೆ ಆವರಣದಲ್ಲಿ ರೂ. 12.11 ಕೋಟಿ ಹಾಗೂ 2.4 ಕೋಟಿ ಅನುದಾನದ ಚನ್ನಮ್ಮನ ಕಿತ್ತೂರಿನ ಕೋಟೆ, ಅರಮನೆ ಅವಶೇಷಗಳ ಸಂರಕ್ಷಣೆಯ ವಿವಿಧ ಕಾಮಗಾರಿಯ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next