Advertisement

ಸಪ್ತಪದಿ ಯೋಜನೆ: ಪ್ರತಿ ತಿಂಗಳು ಸಾಮೂಹಿಕ ವಿವಾಹ

05:56 PM Feb 26, 2021 | Team Udayavani |

ದೊಡ್ಡಬಳ್ಳಾಪುರ: ಮುಜರಾಯಿ ದೇವಾಲಯಗಳಲ್ಲಿ ಕೋವಿಡ್‌ ಕಾರಣದಿಂದ ವಿಳಂಬವಾಗಿದ್ದ ಸಪ್ತಪದಿ ಕಾರ್ಯಕ್ರಮ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯು ತ್ತಿದ್ದು, ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುವ ನಿಟ್ಟಿ ನಲ್ಲಿ ಸಪ್ತಪದಿ ಕಾರ್ಯಕ್ರಮದಡಿ ಪ್ರತಿ ತಿಂಗಳು ಸೂಕ್ತ ವಾದ ಮುಹೂರ್ತ ನಿಗದಿಪಡಿಸಿ, ಸರಳ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಜ ರಾಯಿ ಇಲಾಖೆ ಹಾಗೂ ದೇವಾಲಯದಿಂದ ಸಪ್ತಪದಿ ಯೋಜನೆಯಡಿಯಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಾಟಿ ಕ್ಷೇತ್ರದಲ್ಲಿ ಗುರುವಾರ 47 ಜೋಡಿಗಳ ವಿವಾಹವಾಗಿವೆ. ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ವಿವಾಹ ನಡೆಯುತ್ತಿರುವುದರಿಂದ ನವ ಜೋಡಿಗಳಿಗೆ ದೇವರ ಅನುಗ್ರಹ ಸಿಗಲಿ. ವಿವಾಹವಾಗುವ ವರನಿಗೆ ವಸ್ತ್ರ ಹಾಗೂ ಹೂವಿನ ಹಾರಕ್ಕಾಗಿ 5 ಸಾವಿರ, ವಧುವಿಗೆ ದಾರೆ ಸೀರೆ, ವಸ್ತ್ರ, ಹೂವಿನ ಹಾರಕ್ಕಾಗಿ 10 ಸಾವಿರ, ಹಾಗೂ ವಧುವಿಗೆ 40 ಸಾವಿರ ಮೌಲ್ಯದ ಚಿನ್ನದ ತಾಳಿ ಹಾಗೂ ಎರಡು ಚಿನ್ನದ ಗುಂಡು ಸೇರಿ ವಧು ವರರಿಗೆ 55 ಸಾವಿರ ನೆರವನ್ನು ದೇವಾಲಯದಿಂದ ಭರಿಸಲಾಗುತ್ತಿದೆ ಎಂದರು.

ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ್‌ ಗುರೂಜಿ ಮಾತನಾಡಿ, ವಿವಾಹಬಂಧ ಪವಿತ್ರವಾದ ಬಾಂಧವ್ಯವಾಗಿದೆ. ಮಾಂಗಲ್ಯ ಹಾಗೂ ಸಪ್ತಪದಿಗಳ ಅರ್ಥವನ್ನು ಅರಿಯಬೇಕಿದೆ. ನಮ್ಮ ಬದುಕಿನ ಕಷ್ಟ ಸುಖಗಳನ್ನು ಸಮಪಾಲಾಗಿ ಹಂಚಿಕೊಂಡು ಮುನ್ನೆಡೆ ಯುವ ಸಂಕಲ್ಪ ಮಾಡಬೇಕಿದೆ. ಸರ್ಕಾರದಿಂದ  ಸಪ್ತಪದಿ ಯೋಜನೆಯಡಿ ಸರಳ ವಿವಾಹಗಳು ನಡೆಯುತ್ತಿರು ವುದು ಸ್ವಾಗತಾರ್ಹ ಎಂದರು.

ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಹಾಗೂ ದೇವನಹಳ್ಳಿ ಶಾಸಕ ನಿಸರ್ಗ  ರಾಯಣಸ್ವಾಮಿ ಸಪ್ತಪದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದ್ದು, ವಿಧಾನಸಭಾ ವ್ಯಾಪ್ತಿಯ ದೇವಾಲಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಪಟ್ಟಿಯಲ್ಲಿ ಪ್ರಕಟವಾಗದೇ ಇದ್ದ ವಧು-ವರರಿಗೆ ಕಂಕಣ ಭಾಗ್ಯ: ಸಾಮೂಹಿಕ ವಿವಾಹಕ್ಕೆ ಅರ್ಜಿ ಸಲ್ಲಿಸಿ ದ್ದರೂ ಸಹ ನಮ್ಮನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮದುವೆಯಾಗಲು ಅವಕಾಶ ಮಾಡಿಕೊಡಿ ಎಂದು ಮುನಿರಾಜು ಮತ್ತು ಸುಕನ್ಯಾ ವಧು-ವರರ ಪರವಾಗಿ ವಧುವಿನ ಸೋದರ ಮಾವ ಮುನಿರಾಜು ಅವರು ಒತ್ತಾಯಿಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ದಾಖಲಾತಿಗಳನ್ನು ನೀಡಿ ದ್ದರೂ ನಮ್ಮನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ.

Advertisement

ಸಾಮೂಹಿಕ ವಿವಾಹದಲ್ಲಿ ನಮಗೆ ಮದುವೆ ಮಾಡಿಸಬೇಕೆಂದು ಪಟ್ಟು ಹಿಡಿದರು. ವಿವಾಹಕ್ಕೆ ಒತ್ತಾಯ: ಸಾಮೂಹಿಕ ವಿವಾಹಕ್ಕೆ ನೀಡ ಬೇಕಿದ್ದ ಸೂಕ್ತ ದಾಖಲಾತಿ ನೀಡದಿದ್ದರಿಂದ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರೂ ತೃಪ್ತರಾಗದ ಅವರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ವಿವಾಹಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಸೂಕ್ತ ದಾಖಲಾತಿ ಪರಿಶೀಲಿಸಿ ವಿವಾಹ ನಡೆಸುವಂತೆ ಸಚಿವರು ಸೂಚಿಸಿದ ನಂತರ ಅರ್ಚಕರು ವಧುವರರಿಗೆ ತಾಳಿಯನ್ನು ನೀಡಿ, ಮದುವೆ ಕಾರ್ಯ ನಡೆಸಲಾಯಿತು.

ಈಗಾಗಲೇ ಅರ್ಜಿ ಸಲ್ಲಿಸಿದ್ದರಿಂದ ವಧುವರರಿಂದ ಸೂಕ್ತ ದಾಖಲೆ ಪಡೆದು ವಿವಾಹಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಸೂಕ್ತ ದಾಖಲೆಗಳನ್ನು ನೀಡದಿದ್ದರೆ ವಿವಾಹಕ್ಕೆ ಅವಕಾಶ ನೀಡ ಲಾಗುವುದಿಲ್ಲ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ತಿಳಿಸಿದರು. ಜ್ಯೋತಿಷಿ ಆನಂದ ಗುರೂಜಿ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶ್ರೀನಿವಾಸ ಮೂರ್ತಿ, ಜಿಪಂ ಸದಸ್ಯ ಎಚ್‌.ಅಪ್ಪ ಯ್ಯಣ್ಣ, ಮುಜರಾಯಿ ಇಲಾಖೆ ಆಯುಕ್ತ ಕೆ.ಎ.ದಯಾನಂದ, ಜಿÇÉಾಧಿಕಾರಿ ಕೆ.ಶ್ರೀನಿವಾಸ್‌, ಜಿಪಂ ಉಪ ಕಾರ್ಯದರ್ಶಿ ಕರಿಯಪ್ಪ, ಉಪವಿಭಾಗಾಧಿಕಾರಿ ಅರುಳ್‌ ಕುಮಾರ್‌, ತಹಶೀಲ್ದಾರ್‌ ಶಿವರಾಜ…, ಮುಜ ರಾಯಿ ತಹಶೀಲ್ದಾರ್‌ ಜಿ.ಜೆ.ಹೇಮಾವತಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಅಧೀಕ್ಷಕ ರಘು ಉಚ್ಚಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next