ಚಿಕ್ಕಬಳ್ಳಾಪುರ: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ವೈದ್ಯಕೀಯ ಪರಿಕರಗಳ ಖರೀದಿ ಪಾರದರ್ಶಕತೆಯಿಂದ ನಡೆದಿದೆ. ಆದರೆ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆಯೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು
ಕಾಂಗ್ರೆಸ್ ನಾಯಕರುಗಳಿಗೆ ತಮ್ಮ ಆಡಳಿತದಲ್ಲಿ ಹಗರಣಗಳನ್ನು ಮಾಡಿ ಮಾಡಿ ತುಂಬ ಅಭ್ಯಾಸವಾಗಿದೆ. ಹಾಗಾಗಿ ಕಾಮಾಲೆ ಕಣ್ಣು ಇರುವರಿಗೆ ಕಾಣುವುದು ಎಲ್ಲಾ ನೀಲಿ ಆಗಿರುತ್ತದೆ. ಆದ್ದರಿಂದ ಮೊದಲು ಕಾಂಗ್ರೆಸ್ ಆ ರೋಗದಿಂದ ಹೊರ ಬರಲಿ ಎಂದು ಸುಧಾಕರ್ ವ್ಯಂಗ್ಯವಾಡಿದರು.
ಈ ಹಿಂದೆ ಒಬ್ಬೊಬ್ಬರು ಯಾರು ಯಾರು ಎಲ್ಲಿ ಹೋಗಿ ಬಂದಿದ್ದಾರೆ. ಏನೆಲ್ಲಾ ಹಗರಣಗಳುನ್ನು ಮಾಡಿದ್ದಾರೆ ಎಂಬುದನ್ನು ನಾವು ಹೇಳಬೇಕಾಗುತ್ತದೆಂದು ಸಚಿವ ಡಾ. ಕೆ.ಸುಧಾಕರ್ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಪಿಪಿಇ ಕಿಟ್ ಹಾಗೂ ಸ್ಯಾನಿಟೈಸರ್ ನ್ನು ಮಾರುಕಟ್ಟೆ ದರಕ್ಕಿಂತ ಹೆಚ್ವಿನ ಬೆಲೆಗೆ ಖರೀದಿ ಮಾಡಲಾಗಿದೆಯೆಂದು ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಖರೀದಿ ಯಾವ ಸಂದರ್ಭದಲ್ಲಿ ನಡೆದಿದೆ. ಕೋವಿಡ್ ಆರಂಭದ ವೇಳೆ ಜಾಗತಿಕವಾಗಿ ತುಂಬ ಬೇಡಿಕೆ ಇತ್ತು, ಟೆಂಡರ್ ಕರೆದರೆ ಪಕ್ರಿಯೆ ವಿಳಂಬ ಆಗುತ್ತದೆ ಎಂಬ ಕಾರಣಕ್ಕೆ ಹೆಚ್ವಿನ ಬೆಲೆಗೆ ಖರೀದಿ ಮಾಡಿರಬಹುದು. ಆದರೆ ಯಾವುದೇ ಅಕ್ರಮ ಅಗಿಲ್ಲ. ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ನಾನೊಬ್ಬನೇ ಇಲ್ಲ. ಡಿಸಿಎಂ ಇದ್ದಾರೆ, ಗೃಹ ಸಚಿವರು, ಆರೋಗ್ಯ ಸಚಿವರು ಸೇರಿ ಐದು ಜನ ಮಂತ್ರಿಗಳು ಇದ್ದಾರೆ. ಡಾ.ಮಂಜುನಾಥ ಸೇರಿದಂತೆ ಅನೇಕ ತಜ್ಣರು ಸಹ ಇದ್ದಾರೆ. ತಜ್ಞರ ಸಮಿತಿ ಶಿಪಾರಸ್ಸಿನಂತೆ ಎಲ್ಲವೂ ನಡೆದಿದೆ ಎಂದರು.