ಮೈಸೂರು: ನಾವು ಪರಿಶುದ್ಧರು ಎಂಬುದನ್ನುಸಾಬೀತುಪಡಿಸಲು ಇದು ಅವಕಾಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಕುರಿತು ಸಚಿವ ಡಾ. ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂಬ ಆರೋಪ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಗಿಂತ ದೊಡ್ಡ ನಾಯಕ ಡಿಕೆಶಿ ಅಲ್ಲ. ಇದು ರಾಜಕಿಯ ಪ್ರೇರಿತವಾಗಿದ್ದರೆ, ಸಿದ್ದರಾಮಯ್ಯ ಅವರನ್ನು ಗುರಿಯಾಗಬೇಕಿತ್ತು ಅಲ್ಲವೇ? ಆದರೆ, ಡಿಕೆಶಿ ಮೇಲೆಯೇ ಏಕೆ ದಾಳಿಯಾಗುತ್ತದೆ? ಇದು ಅವರು ಪರಿಶುದ್ಧರು ಎಂಬುದನ್ನು ಸಾಬೀತುಪಡಿಸಲು ಇದು ಅವಕಾಶವಾಗಿದೆ ಎಂದು ಸಚಿವ ಸುಧಾಕರ್ ಪ್ರತಿಕ್ರಿಯಿಸಿದರು.
ತನಿಖೆಯಾಗಲಿ, ತನಿಖೆ ಮೂಲಕ ಸತ್ಯಾಂಶ ಹೊರಬೀಳಲಿ, ಚುನಾವಣೆಗೂ ಸಿಬಿಐ ದಾಳಿಗೂ ಸಂಬಂಧವೇ ಇಲ್ಲ. ಎರಡು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದೆ. ಒಂದು ವೇಳೆ ಆ ಎರಡೂ ಕ್ಷೇತ್ರಗಳಲ್ಲಿಬಿಜೆಪಿಗೆ ಸೋಲಾಯಿತು ಅಂತಲೇ ಅಂದುಕೊಳ್ಳೋಣ. ಸರ್ಕಾರಕ್ಕೆ ಆಗುವ ನಷ್ಟ ಏನು ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಡಿಕೆ ಶಿವಕುಮಾರ್ ದೊಡ್ಡಾಲಹಳ್ಳಿಯ ಮನೆ ಲಾಕರ್ ಒಡೆದಾಗ ಸಿಕ್ಕಿದ್ದು ಚಿಲ್ಲರೆ ಮಾತ್ರ!
ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ. ಆದ್ದರಿಂದ ಸುಮ್ಮನೆ ರಾಜಕೀಯ ಪ್ರೇರಿತ ಅಂತ ಆರೋಪ ಮಾಡುವುದರಲ್ಲಿ ಅರ್ಥ ಇಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಮಿತ್ ಶಾ ಮನೆ ಮೇಲೆ ದಾಳಿ ಮಾಡಿತ್ತು. ಆಂಧ್ರಪ್ರದೇಶ ಜಗನ್ ಮೋಹನ್ ರೆಡ್ಡಿ ಅವರನ್ನು ಜೈಲಿಗೆ ಹಾಕಲಾಗಿತ್ತು. ಹಾಗಾದರೆ ಅದೆಲ್ಲವನ್ನೂ ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ಮಾಡಿತು ಅಂದು ಕೊಳ್ಳಬಹುದು ಎಂದು ಮರು ಪ್ರಶ್ನೆ ಹಾಕಿದರು.
ಇದನ್ನೂ ಓದಿ: ಡಿಕೆ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ: ಬಿಜೆಪಿ ಸರ್ಕಾರದ ವಿರುದ್ಧ ಗರಂ ಆದ ಕೈ ನಾಯಕರು
ಐಟಿ, ಇಡಿ, ಸಿಬಿಐ ಇದೆಲ್ಲವೂ ಸ್ವಾಯತ್ತ ಸಂಸ್ಥೆಗಳು. ಅವುಗಳನ್ನು ಸ್ವತಂತ್ರ್ಯ ವಾಗಿ ಕೆಲಸ ಮಾಡಲು ಬಿಡಿ. ಡಿಕೆಶಿ ಪ್ರಾಮಾಣಿಕರಾಗಿದ್ದರೆ ತನಿಖೆಯಿಂದ ಸಾಬೀತಾಗಲಿದೆ. ಅದನ್ನು ಬಿಟ್ಟು ಎಲ್ಲದಕ್ಕೂ ರಾಜಕೀಯ ಬೆರಸುವುದು ಬೇಡ ಎಂದು ತಿಳಿಸಿದರು