Advertisement

ಧರ್ಮಗಳ ನಡುವೆ ವಿಷ ಬೀಜ ಬಿತ್ತನೆ ಮಾಡಿದ್ದೇ ಕಾಂಗ್ರೆಸ್ ನವರು: ಗೋವಿಂದ ಕಾರಜೋಳ

01:14 PM Nov 26, 2021 | Team Udayavani |

ಬೆಂಗಳೂರು: ಧರ್ಮಗಳ ನಡುವೆ ವಿಷ ಬೀಜ ಬಿತ್ತನೆ ಮಾಡಿದ್ದು ಕಾಂಗ್ರೆಸ್ ನವರು. ಬರೀ ವೋಟ್ ಬ್ಯಾಂಕ್ ಗಷ್ಟೇ ಸಮಾಜವನ್ನು ಬಳಸಿಕೊಂಡರು. ಕಾಂಗ್ರೆಸ್ ಗೆ ಇವತ್ತು ಹತಾಶೆ ಮನೋಭಾವನೆ ಬಂದಿದೆ. ಅದಕ್ಕಾಗಿಯೇ ನಮ್ಮನ್ನು ಬಿಜೆಪಿಗೆ ಹೊಟ್ಟೆಪಾಡಿಗಾಗಿ ಹೋಗಿದ್ದಾರೆ ಅಂತಿದ್ದಾರೆ, ಇದು ನಿಜವಾಗಿಯೂ ದೀನದಲಿತರಿಗೆ ಅವಮಾನ ಮಾಡಿದಂತೆ ಎಂದು ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

Advertisement

ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಧರ್ಮಗ್ರಂಥ ಅಂದರೆ ಸಂವಿಧಾನ ಎಂದು ಪ್ರಧಾನಿಗಳು ಹೇಳಿದರು. ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದಲೇ ತನ್ನಂತಹ ಸಾಮಾನ್ಯ ವ್ಯಕ್ತಿ ಪ್ರಧಾನಿಗಳಾಗಿದ್ದು ಎಂದೂ ಹೇಳಿದರು. ಆದರೆ ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದವರು ಅಂಬೇಡ್ಕರ್ ಆಶಯವನ್ನು ನೆರವೇರಿಸಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ:ಗೋಲ್ಡನ್ ಗೋವಾ ಸ್ಥಾಪಿಸಲು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತನ್ನಿ: ನಡ್ಡಾ

10 ವರ್ಷಗಳಲ್ಲಿ ಅಸ್ಪೃಶ್ಯತೆ ಹೋಗಬೇಕು ಎಂಬ ಆಶಯವನ್ನು ಅಂಬೇಡ್ಕರ್ ಹೊಂದಿದ್ದರು. ಕೋಳಿ ಕುರಿ ಕೊಡಿ, ಕಿಲೋ ಅಕ್ಕಿ ಕೊಡಿ ಎಂದು ಅಂಬೇಡ್ಕರ್ ಕೇಳಿರಲಿಲ್ಲ, ಸಮಾನತೆ ಕೊಡಬೇಕೆಂಬುದು ಅವರ ಆಶಯ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಕಾಂಗ್ರೆಸ್ ಇನ್ನೂ ಮೂರು ವರ್ಷ ಕೂಡ ಇರುವುದಿಲ್ಲ. ಪ್ರಧಾನಿಗಳ ಮಾತಿನಂತೆ ಕಾಂಗ್ರೆಸ್ ಮುಕ್ತ ದೇಶವಾಗಲಿದೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಆದರೆ ಅಲ್ಲಿ ಇಲ್ಲಿ ಸ್ವಲ್ಪ ಪಳೆಯುಳಿಕೆಯಂತೆ ಇರುವವರು ಕೂಡ ಇನ್ನೂ ಸ್ವಲ್ಪ ದಿನಗಳಲ್ಲೇ ಹೋಗುತ್ತಾರೆ. ನಿಜವಾಗಿಯೂ ಕಾಂಗ್ರೆಸ್ ರಾಜಕೀಯ ಪಕ್ಷ ಅಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next