ನವದೆಹಲಿ : ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಕುರಿತು ಬಿಸಿಬಿಸಿಯಾದ ಚರ್ಚೆಗೆ ರಾಜ್ಯ ಸಭೆ ಇಂದು (ಫೆ.10, ಬುಧವಾರ) ಸಾಕ್ಷಿಯಾಯಿತು.
ಸಮಾಜವಾದಿ ಪಕ್ಷದ ಲೋಕಸಭಾ ಸದಸ್ಯ ವಿಶ್ವಂಬರ್ ಪ್ರಸಾದ್, ತೈಲ ಬೆಲೆ ಏರಿಕೆ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಶ್ನಿಸಿದರು. “ ಪೆಟ್ರೋಲ್ ಬೆಲೆ ಸೀತೆಯ ನೇಪಾಳದಲ್ಲಿಕ್ಕಿಂತ ರಾಮನ ಭಾರತದಲ್ಲಿ ಯಾಕೆ ದುಬಾರಿ ಇದೆ?” ಎಂದು ಪ್ರಶ್ನೆ ಹಾಕಿದರು.
ಈ ವೇಳೆ ವಿಶ್ವಂಬರ್ ಪ್ರಶ್ನೆಗೆ ಖಡಕ್ ಆಗಿಯೇ ಉತ್ತರಿಸಿದ ಸಚಿವರು, ನಾವು ತೈಲ ಬೆಲೆ ವಿಚಾರದಲ್ಲಿ ಭಾರತವನ್ನು ನೇಪಾಳಕ್ಕೆ ಹೋಲಿಸಲು ಸಾಧ್ಯವಿಲ್ಲ ಎಂದರು. ಮತ್ತೆ ಮಾತು ಮುಂದುವರೆಸಿದ ಪ್ರಧಾನ್, ಭಾರತದಲ್ಲಿ ಸೀಮೆ ಎಣ್ಣೆ ಬೆಲೆ ಲೀಟರ್ ಗೆ 32 ರೂ. ಇದೆ, ಅದೇ ನೇಪಾಳದಲ್ಲಿ ಇದರ ಬೆಲೆ ಲೀಟರ್ ಗೆ 59 ಇದೆ ಎಂದು ಉತ್ತರಿಸಿದರು.
ಇದನ್ನೂ ಓದಿ :ಶುಲ್ಕ ಪಾವತಿ ಆದೇಶ: ಮಕ್ಕಳ ಹಿತಕ್ಕಾಗಿ ಎಲ್ಲರೂ ಪಾಲಿಸುವುದು ಒಳಿತು- ಸುರೇಶ್ ಕುಮಾರ್
ಇನ್ನು ಕೆಲ ದಿನಗಳಿಂದ ಇಂಧನ ಬೆಲೆ ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಬೆಲೆ ಏರಿಕೆ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇತ್ತೀಚಿಗಷ್ಟೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ, ರಾವಣನ ಶ್ರೀಲಂಕಾ, ಸೀತೆಯ ನೇಪಾಳಕ್ಕಿಂತ ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಿದೆ ಎಂದಿದ್ದರು.