Advertisement

ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಸಚಿವರ ಸಂವಾದ

04:17 PM Aug 05, 2020 | Suhan S |

ಕೊಪ್ಪ: ತಾಲೂಕಿನ ನಕ್ಸಲ್‌ ಪೀಡಿತ ಪ್ರದೇಶವಾದ ಮೇಗುಂದ ಹೋಬಳಿಯ ಬೈರೇದೇವರು, ಕಿತ್ಲೆಗುಳಿ, ಮೆಣಸಿಹಾಡ್ಯ ಭಾಗಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ, ದುರ್ಗಮ ಪ್ರದೇಶದಲ್ಲಿರುವ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

Advertisement

ಬೈರೇದೇವರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಕಿತ್ಲೆಗುಳಿಯ ಅಂಗನವಾಡಿಯಲ್ಲಿ ಸುಮಾರು ಅರವತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು ವಿದ್ಯಾರ್ಥಿಗಳಲ್ಲಿ ಆನ್‌ಲೈನ್‌ ಶಿಕ್ಷಣ ಕುರಿತಂತೆ ಮಕ್ಕಳ ಬಳಿ ಮಾತನಾಡಿದರು. ಆಗ ವಿದ್ಯಾರ್ಥಿಗಳು ಈ ಭಾಗದಲ್ಲಿ ಆನ್‌ಲೈನ್‌ ತರಗತಿಗೆ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಮೊಬೈಲ್‌ ಟವರ್‌ ಗಳನ್ನು ನಿರ್ಮಾಣ ಮಾಡಿಸುವಂತೆ ಬೇಡಿಕೆ ಇಟ್ಟರು. ಕುಗ್ರಾಮಗಳಲ್ಲಿ ಇಂದಿಗೂ ಸಹ ಬಸ್‌ ವ್ಯವಸ್ಥೆಯಿಲ್ಲ. ಶಾಲೆಗಳಿಗೆ ತೆರಳಲು ಸಮಸ್ಯೆ ಆಗುತ್ತದೆ ಎಂದು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದರು.

ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಮೆಣಸಿನಹಾಡ್ಯದ ಬಳಿ ವಿದ್ಯಾರ್ಥಿಯ ಮನೆಗೆ ಸಚಿವರು ಭೇಟಿ ನೀಡಿ ನಂತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೊಪ್ಪದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಪಂ ಸದಸ್ಯ ಎಸ್‌.ಎನ್‌. ರಾಮಸ್ವಾಮಿ, ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್‌, ಜಿಪಂ ಸಿಇಒ ಪೂವಿತ, ಉಪ ನಿರ್ದೆಶಕ ಬಿ.ವಿ. ಮಲ್ಲೇಶಪ್ಪ, ಮೇಗುಂದ ಹೋಬಳಿ ಬಿಜೆಪಿ ಅಧ್ಯಕ್ಷ ಸಂತೋಷ್‌, ಮಣಿಕಂಠಸ್ವಾಮಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next