ಹುಬ್ಬಳ್ಳಿ: ಸಚಿವ ಭೈರತಿ ಬಸವರಾಜ್ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದ ಘಟನೆ ಇಂದು ಇಲ್ಲಿನ ಸರ್ಕೀಟ್ ಹೌಸ್ ನಲ್ಲಿ ನಡೆದಿದೆ.
ಹಳೇ ಹುಬ್ಬಳ್ಳಿ, ದುರ್ಗದ ಬೈಲ್ ಮಾರುಕಟ್ಟೆ ನವೀಕರಣದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಸಚಿವರ ಮುಂದೆ ಮನವಿ ಮಾಡಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಡಿಪಿಆರ್ ತಯಾರು ಮಾಡುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ಪ್ರಸ್ತಾಪಿಸುವ ವೇಳೆ ಸ್ಥಳೀಯ ನಾಯಕರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ಷೇಪಾರ್ಹ ಶಬ್ದ ಬಳಕೆಯಾಗಿದ್ದು, ಸ್ಥಳದಲ್ಲಿದ್ದ ಬಿಜೆಪಿ ಮುಖಂಡರ ಜೊತೆ ಮಾತಿನ ಚಕಮಕಿ ನಡೆದಿದೆ.
ಈ ಯೋಜನೆಯಡಿ ನವೀಕರಣಕ್ಕಾಗಿ ಸ್ಥಳೀಯರ ಜೊತೆಗೆ ಸಭೆ ಮಾಡದೇ ಏಕಪಕ್ಷೀಯವಾಗಿ ಉಸ್ತುವಾರಿ ಸಚಿವರು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಾಗ ಮಾತಿನ ವಾಗ್ವಾದ ನಡೆದಿದೆ.
ಇದನ್ನೂ ಓದಿ: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರೆಂದು ನಾಲ್ವರು ಗ್ರಾಮಸ್ಥರ ಕೊಂದ ನಕ್ಸಲರು
ಸರ್ಕೀಟ್ ಹೌಸ್ ನಲ್ಲಿ ಮಾತಿನ ಚಕಿಮಕಿ ನಡೆಯುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಆಕ್ಷೇಪಾರ್ಹ ಶಬ್ದ ಬಳಸಿದ ವ್ಯಕ್ತಿಯು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ನಾಯಕರು ಎಂದು ಹೇಳುತ್ತಿದ್ದಂತೆ ಪರಿಸ್ಥಿತಿ ತಿಳಿಗೊಂಡಿತು. ಸ್ಥಳೀಯರ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರಸಂಗ ಸುಖಾಂತ್ಯವಾಯಿತು.