ಬೆಂಗಳೂರು: ರಾಜ್ಯದ ಸಚಿವರಲ್ಲಿ ಖಾತೆ ಬದಲಾವಣೆ ಮಾಡಿರುವ ಸಿಎಂ ಬಿ ಎಸ್ ವೈ ನಡೆಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ. ತಮ್ಮಲ್ಲಿದ್ದ ಆರೋಗ್ಯ ಇಲಾಖೆಯನ್ನು ಸಚಿವ ಸುಧಾಕರ್ ಗೆ ನೀಡಿದ ಹಿನ್ನಲೆಯಲ್ಲಿ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಅವರು ಕೆ ಸುಧಾಕರ್ ಅವರಿಗೆ ಆರೋಗ್ಯ ಖಾತೆಯ ಹೆಚ್ಚುವರಿ ಹೊಣೆ ಹೊರಿಸಲಾಗಿದೆ. ಆರೋಗ್ಯ ಸಚಿವರಾಗಿದ್ದ ರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ವಹಿಸಲಾಗಿದೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರಿಗೆ ಲೋಕೋಪಯೋಗಿ ಇಲಾಖೆ ನೀಡಲಾಗಿದೆ.
ಸಂಪುಟ ಪುನರ್ ರಚನೆ ಮುನ್ನವೇ ಈ ಖಾತೆ ಬದಲಾವಣೆ ಮಾಡಿರುವ ಸಿಎಂ ನಿರ್ಧಾರಕ್ಕೆ ಉತ್ತರ ಕರ್ನಾಟಕದ ಹಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಖಾತೆ ಬದಲಾವಣೆಗೆ ಮೊದಲು ನಿಮ್ಮನ್ನ ಕೇಳಿದ್ದಾರಾ ಎಂದು ಕೆಲವು ನಾಯಕರು ರಾಮುಲು ಕೇಳಿದ್ದಾರೆ. ಕೋವಿಡ್ ಸಮಯದಲ್ಲಿ ವಾರಿಯರ್ ಆಗಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೀರಿ. ಕೋವಿಡ್ ಸೋಂಕು ಬಂದರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಿರಿ. ಈಗ ಏಕಾಏಕಿ ಬದಲಾವಣೆ ಯಾಕೆ ಎಂದು ಶಾಸಕರು ರಾಮುಲು ಅವರನ್ನು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ:ವೈದ್ಯಕೀಯ ಶಿಕ್ಷಣ ಮತ್ತು “ಆರೋಗ್ಯ ಸಚಿವ” ಡಾ| ಸುಧಾಕರ್: ಶ್ರೀರಾಮುಲು ಖಾತೆ ಸುಧಾಕರ್ ಪಾಲಿಗೆ
ನನಗೂ ಈ ಬಗ್ಗೆ ಗೊತ್ತಿಲ್ಲ. ಸಿಎಂ ಬಿಎಸ್ ವೈ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ ಎನ್ನಲಾಗಿದೆ.