Advertisement
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಮ್ಮ ಸರ್ಕಾರ ತಂದಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿವೆ. ಅವರಿಗಾಗಿಯೇ ಕಾಯ್ದೆ ತರಲಾಗಿದೆ. ಆದರೆ 2008, 2013 ಹಾಗೂ 2019 ರಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ, ನಮ್ಮ ಸರ್ಕಾರ ಬಂದರೆ ಕಾಯ್ದೆ ತೆಗೆದು ಹಾಕುತ್ತೇವೆ ಎನ್ನುವವರು ರೈತರಿಗೆ ಪ್ರಚೋದನೆ ಮಾಡಿದ್ದರಿಂದ ಇಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೆಸರೇಳದೇ ಪರೋಕ್ಷವಾಗಿ ಕುಟುಕಿದರು.
Related Articles
Advertisement
ರಾಜ್ಯದಲ್ಲಿ ಪದೇ ಪದೆ ಖಾತೆ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಎಂಗೆ ಪರಮಾಧಿಕಾರವಿದೆ. ಅವರು ಹಿರಿಯರು, ಮುತ್ಸದ್ದಿಗಳಿದ್ದಾರೆ. ಅವರು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ. ಖಾತೆ ಬದಲಾವಣೆ ಬಳಿಕ ಎಲ್ಲವೂ ಸರಿಹೋಗಲಿದೆ. ಸಚಿವ ಆನಂದ್ ಸಿಂಗ್ ಅವರು ಖಾತೆ ಬದಲಾವಣೆಯಿಂದ ಅಸಮಾಧಾನವಾಗಿದ್ದಾರೆ. ಅವರು ಅರಣ್ಯ ಖಾತೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು. ನಾನು ಅವರನ್ನ ಭೇಟಿ ಮಾಡಿದ್ದೇನೆ. ಆನಂದ್ ಸಿಂಗ್ ಅವರು ಸಿಎಂ ಭೇಟಿ ಮಾಡುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಲಬುರಗಿ ಉಸ್ತುವಾರಿ ಕೊಟ್ಟರೆ ನಿಭಾಯಿಸುವೆ: ಉಮೇಶ್ ಕತ್ತಿ
ಹೆಚ್. ವಿಶ್ವನಾಥ್ ಅವರಿಗೆ ಮಂತ್ರಿಯಾಗಲು ಬರಲ್ಲ ಎಂದು ಕೋರ್ಟ್ ಹೇಳಿದೆ. ಅಲ್ಲದೆ ಸರ್ಕಾರವು ಅವರನ್ನು ಪರಿಷತ್ ಸದಸ್ಯರಾಗಿ ನಾಮಿನೆಟ್ ಮಾಡಿದೆ. ಉಳಿದವರು ಜನರಿಂದ ಆಯ್ಕೆಯಾಗಿದ್ದಾರೆ. ಕೋರ್ಟ್ ಸಹಿತ ರಾಜ್ಯ ಸರ್ಕಾರದಿಂದ ನಾಮಿನೆಟ್ ಆದವರನ್ನು ಮಂತ್ರಿ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದರಿಂದ ವಿಶ್ವನಾಥ್ ಅವರನ್ನ ಮಂತ್ರಿ ಮಾಡಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರ ಸಿಎಂಗೆ ಅಧಿಕಾರವಿದೆ. ಅವಶ್ಯವಿದ್ದರೆ ಮಾಡುತ್ತಾರೆ ಎಂದರಲ್ಲದೆ ಮಾಧ್ಯಮದವರೇ ಎಲ್ಲ ಖಾತೆ ಹಂಚಿಕೆ, ಬದಲಾವಣೆ ಮಾಡುತ್ತಿದ್ದಾರೆ ಎಂದು ಹಾಸ್ಯಚಟಾಕಿ ಹಾರಿಸಿದರು.