Advertisement

ಸಚಿವ ಅಶೋಕ ಪುತ್ರನ ಅಪಘಾತಕ್ಕೆ ದಿನಕ್ಕೊಂದು ತಿರುವು!

11:15 PM Feb 15, 2020 | Lakshmi GovindaRaj |

ಬಳ್ಳಾರಿ: ಕಂದಾಯ ಸಚಿವ ಆರ್‌.ಅಶೋಕ್‌ ಪುತ್ರ ಶರತ್‌ ಹೆಸರು ತಳಕು ಹಾಕಿಕೊಂಡಿರುವ ಜಿಲ್ಲೆಯ ಮರಿಯಮ್ಮನಹಳ್ಳಿ ರಸ್ತೆ ಅಪಘಾತ ಪ್ರಕರಣ ದಿನ ಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಘಟನೆಗೆ ತನಿಖಾಧಿಕಾರಿಯನ್ನು ನೇಮಿಸಿರುವ ಸಿಪಿಐ ಶೇಖರಪ್ಪ ಮೇಲೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದರೆ, ಖಾಸಗಿ ಆಸ್ಪತ್ರೆ ಸಿಸಿ ಕ್ಯಾಮೆರಾದಲ್ಲೂ ಸಚಿವರ ಪುತ್ರ ಇರುವ ಬಗ್ಗೆ ಖಚಿತತೆ ಇಲ್ಲ ಎನ್ನಲಾಗುತ್ತಿದ್ದು, ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

Advertisement

ಫೆ.10ರಂದು ಮಧ್ಯಾಹ್ನ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತವಾಗಿದೆ. ಘಟನೆಯಲ್ಲಿ ಮೃತಪಟ್ಟಿದ್ದ ಸಚಿನ್‌ ಸೇರಿ ಗಾಯಗೊಂಡಿದ್ದ ನಾಲ್ವರು ಮೊದಲು ಹೊಸಪೇಟೆಯ ಮೈತ್ರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ನೋಡಿದ್ದ ವೈದ್ಯರು, ಅಪಘಾತ ಪ್ರಕರಣವಾದ್ದರಿಂದ ಸರ್ಕಾರಿ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ. ಅವರು ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ಗಾಯಾಳು ಗಳು ಯಾರ ಕಡೆಯವರು ಎಂಬುದು ಆಗ ಗೊತ್ತಿ ರಲಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾ ದಾಗಲೇ ಪ್ರಕರಣದ ಬಗ್ಗೆ ತಿಳಿಯಿತು ಎಂದು ಆಸ್ಪತ್ರೆ ವೈದ್ಯ ಡಾ|ಪೆರುಮಾಳ್‌ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಶೇಖರಪ್ಪ ಮೇಲೆ ಅನುಮಾನ: ತನಿಖಾಧಿಕಾರಿ ಯನ್ನಾಗಿ ನೇಮಿಸಿರುವ ಸಿಪಿಐ ಶೇಖರಪ್ಪ ಮೇಲೆ ಸಾರ್ವ ಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾ ಗುತ್ತಿವೆ. ಕಾರಣ ಸಿಪಿಐ ಶೇಖರಪ್ಪ ಬಳ್ಳಾರಿಯ ಬಿಜೆಪಿ ಸಂಸದ ವೈ. ದೇವೇಂದ್ರಪ್ಪ ಅವರ ಅಳಿಯ. ಘಟನೆಯಲ್ಲಿ ಥಳುಕು ಹಾಕಿಕೊಂಡಿರುವ ಶರತ್‌ ಸಹ ಹಾಲಿ ಬಿಜೆಪಿ ಸರ್ಕಾರದ ಸಚಿವ ಆರ್‌.ಅಶೋಕ್‌ ಮಗ. ಹಾಗಾಗಿ ಘಟನೆ ತನಿಖೆಯನ್ನು ಸಿಪಿಐ ಶೇಖರಪ್ಪ ಪಾರದರ್ಶಕವಾಗಿ ಮಾಡುತ್ತಾರಾ ಅಥವಾ ಬಿಜೆಪಿ ಸಂಸದರು, ಸಚಿವರನ್ನು ಸಂರಕ್ಷಣೆ ಮಾಡು ತ್ತಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸಿಸಿ ಕ್ಯಾಮರಾದಲ್ಲಿ ಸಚಿವರ ಮಗ ಇಲ್ಲ: ಹೊಸ ಪೇಟೆಯ ಮೈತ್ರಿ ಆಸ್ಪತ್ರೆ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿರುವ ದೃಶ್ಯಗಳು ಸಚಿವ ಆರ್‌.ಅಶೋಕ್‌ ಪುತ್ರ ಶರತ್‌ ಇಲ್ಲ ಎನ್ನಲಾಗುತ್ತಿದೆ. ಪೊಲೀಸರು ಸಹ ಮೊದಲಿಂದಲೂ ಸಚಿವರ ಪುತ್ರ ಇಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಘಟನೆಯಲ್ಲಿ ಸಚಿವರ ಪುತ್ರ ಇದ್ದಾನೆಂಬ ಸುದ್ದಿ ಹರಡಿದ್ದೇಗೆ ಎಂಬುದೇ ದೊಡ್ಡ ಪ್ರಶ್ನೆ. ಘಟನೆ ಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ಬಂದಿರುವುದು ರೆಕಾರ್ಡ್‌ ಆಗಿದೆ. ಆದರೆ, ಅದರಲ್ಲಿ ಸಚಿವರ ಪುತ್ರ ಇರುವ ವಿಡಿಯೋ ತುಣುಕು ಇಲ್ಲ. ಹಾಗಾದರೆ, ಅಪಘಾತ ಪ್ರಕರಣ ಇಷ್ಟೊಂದು ಗಂಭೀರವಾಗಲು ಕಾರಣವೇನು?

ನನ್ನ ಅಳಿಯನನ್ನು ಕೊಂದವರ ಗುರುತು ಹಿಡಿಯುವೆ – ಭಾರತಿ: ಇದೇ ವೇಳೆ, ಮೈತ್ರಿ ಆಸ್ಪತ್ರೆಯಲ್ಲಿ ನರ್ಸ್‌ ಕೆಲಸ ಮಾಡುತ್ತಿರುವ ಮೃತ ರವಿ ನಾಯ್ಕ ಅವರ ಅತ್ತೆ ಭಾರತಿ ಮಾತನಾಡಿ, “ಗಾಯಾಳುಗಳನ್ನು ನಾನು ಗುರುತು ಹಿಡಿಯುವೆ. ಮೃತ ಸಚಿನ್‌ ಸೇರಿ ಗಾಯಗೊಂಡ ನಾಲ್ವರು ಆಸ್ಪತ್ರೆಗೆ ಬಂದಾಗ ನಾನೇ ಅವರಿಗೆ ಸ್ಟ್ರೆಚರ್‌ ಕೊಂಡೊಯ್ದಿದ್ದೆ. ಗಾಯಗೊಂಡವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ವೈದ್ಯ ಡಾ|ಪೆರುಮಾಳ್‌ ಸ್ವಾಮಿ ಸೂಚಿಸಿದ್ದಾರೆ. ಪ್ರತಿಯೊಬ್ಬ ಗಾಯಾಳುಗಳನ್ನು ಗುರುತು ಹಿಡಿಯುತ್ತೇನೆ. ಪೊಲೀಸರು ಯಾವಾಗ ಕರೆದರೂ ಮಾಹಿತಿ ನೀಡುತ್ತೇನೆ. ನಮ್ಮ ಅಳಿಯ ಮೃತಪಟ್ಟಿರುವ ಬಗ್ಗೆ ಅಂದು ನನಗೆ ಮಾಹಿತಿ ಇರಲಿಲ್ಲ. ನಂತರವಷ್ಟೇ ತಿಳಿಯಿತು’ ಎಂದಿದ್ದಾರೆ.

Advertisement

ಆರೋಪಿ ರಾಹುಲ್‌ ಬಂಧನ-ಬಿಡುಗಡೆ
ಬಳ್ಳಾರಿ: ಮರಿಯಮ್ಮನಹಳ್ಳಿ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ರಾಹುಲ್‌ನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದು, ಹೊಸಪೇಟೆ ನ್ಯಾಯಾಲಯ ಜಾಮೀನು ನೀಡಿದ ಹಿನ್ನೆಲೆಯಲ್ಲಿ ವಾಪಸ್‌ ಬೆಂಗಳೂರಿಗೆ ತೆರಳಿದ್ದಾರೆ. ಘಟನೆಯಲ್ಲಿನ ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ಸಿಪಿಐ ಶೇಖರಪ್ಪ ನೇತೃತ್ವದ ತಂಡ ಶುಕ್ರವಾರ ಬೆಂಗಳೂರಿಗೆ ತೆರಳಿದ್ದು, ವಾಹನ ಚಾಲಕ, ಪ್ರಮುಖ ಆರೋಪಿ ರಾಹುಲ್‌ನನ್ನು ಶನಿವಾರ ಬಂಧಿಸಿ ಕರೆ ತಂದಿತ್ತು. ಬಳಿಕ, ಹೊಸಪೇಟೆ ನ್ಯಾಯಾಲಯ ರಾಹುಲ್‌ಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಪುನ: ವಾಪಸ್‌ ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next