Advertisement

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

01:40 AM Dec 22, 2024 | Team Udayavani |

ಹೊಸದಿಲ್ಲಿ: ಕಳೆದ ವರ್ಷದ ಭಾರತ ಅರಣ್ಯ ವರದಿಯ ಪ್ರಕಾರ ಕರ್ನಾಟದ ಅರಣ್ಯ ಪ್ರದೇಶದಲ್ಲಿ 459.36 ಚ.ಕಿ.ಮೀ.ನಷ್ಟು ಕುಸಿತವಾಗಿದೆ. ಅರಣ್ಯ ಪ್ರದೇಶದ ವ್ಯಾಪ್ತಿ ಕುಸಿತದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಆದರೆ ದೇಶದಲ್ಲಿ ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ ಹೆಚ್ಚಳವಾಗಿದ್ದು, ಕಾರ್ಬನ್‌ ಹೆಚ್ಚಳ ತಡೆಯುವಲ್ಲಿ ಭಾರತ ಪ್ರಮುಖ ಹೆಜ್ಜೆ ಇಟ್ಟಿದೆ ಎಂದು ವರದಿ ತಿಳಿಸಿದೆ. ದೇಶದ ಅರಣ್ಯ ವ್ಯಾಪ್ತಿಯಲ್ಲಿ 1,445 ಚದರ ಕಿ.ಮೀ.ನಷ್ಟು ಹೆಚ್ಚಳವಾಗಿದ್ದು, ಇದು ಒಟ್ಟು ಭೌಗೋಳಿಕ ಪ್ರದೇಶದ ಶೇ. 25.17ಕ್ಕೆ ತಲುಪಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

ಅರಣ್ಯದ ವ್ಯಾಪ್ತಿ ಇಳಿಕೆ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಅರಣ್ಯ ಹಾಗೂ ಮರಗಳ ವ್ಯಾಪ್ತಿಯಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಮಧ್ಯಪ್ರದೇ­ಶದಲ್ಲಿ ಗರಿಷ್ಠ 612.41 ಚ.ಕಿ.ಮೀ.ನಷ್ಟು ಅರಣ್ಯ ಕಡಿಮೆಯಾಗಿದೆ. ಉಳಿದಂತೆ ಕರ್ನಾಟದಲ್ಲಿ 459.36 ಚ.ಕಿ.ಮೀ., ಲಡಾಖ್‌ನಲ್ಲಿ 159.26 ಚ.ಕಿ.ಮೀ., ನಾಗಾಲ್ಯಾಂಡ್‌ನ‌ಲ್ಲಿ 125.22 ಚ.ಕಿ.ಮೀ.ನಷ್ಟು ಅರಣ್ಯ ಕುಂಠಿತವಾಗಿದೆ. ಕರ್ನಾಟಕದಲ್ಲಿ ಬಿದಿರು ಅರಣ್ಯ ಪ್ರದೇಶವೂ ಇಳಿದಿದ್ದು, 1,290 ಚ.ಕಿ.­­ಮೀ. ­­ನಷ್ಟು ವ್ಯಾಪ್ತಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ದೇಶದ ಒಟ್ಟು ಅರಣ್ಯ ವ್ಯಾಪ್ತಿಯು 2021ರಲ್ಲಿದ್ದ 7,13,789 ಚ.ಕಿ.ಮೀ.ನಿಂದ 2023ರ ಹೊತ್ತಿಗೆ 7,15,343 ಚ.ಕಿ.ಮೀ.ಗೆ ಹೆಚ್ಚಳವಾಗಿದೆ. ಅಂದರೆ, ಅದರ ಭೌಗೋಳಿಕ ಪ್ರದೇಶದಲ್ಲಿ ಶೇ.21.76ರಷ್ಟು ಹೆಚ್ಚಳವಾಗಿದೆ. ಹಾಗೆಯೇ ಮರಗಳ ವ್ಯಾಪ್ತಿಯ 1,289 ಚ.ಕಿ.ಮೀ.ಗೆ ಹೆಚ್ಚಳವಾಗಿದ್ದು, ಇದು ದೇಶದ ಭೌಗೋಳಿಕ ಪ್ರದೇಶದ ಶೇ.3.41ರಷ್ಟಾಗಿದೆ. ಇದರಲ್ಲಿ ನೈಸರ್ಗಿಕವಾಗಿ ಬೆಳೆದ ಹಾಗೂ ಮಾನವ ನಿರ್ಮಿತ ನೆಡುತೋಪುಗಳಿವೆ ಎಂದು ವರದಿಯಲ್ಲಿತಿಳಿಸಲಾಗಿದೆ. ಇದೇ ವೇಳೆ, ಭಾರತವು 2005ಕ್ಕೆ ಹೋಲಿಸಿದರೆ 2.29 ಶತಕೋಟಿ ಟನ್‌ಗಳಷ್ಟು ಕಾರ್ಬನ್‌ ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಳದಲ್ಲಿ ಅಗ್ರಸ್ಥಾನದಲ್ಲಿ ಛತ್ತೀಸ್‌ಗಢ ಇದ್ದು, ಅನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಒಡಿಶಾ ಮತ್ತು ರಾಜಸ್ಥಾನಗಳಿವೆ.

ರಕ್ಷಿತಾರಣ್ಯದಲ್ಲಿ ಹಸುರು ಹೆಚ್ಚಳ: ರಾಜ್ಯಕ್ಕೆ 3ನೇ ಸ್ಥಾನ
ರಾಜ್ಯದ ರಕ್ಷಿತಾರಣ್ಯದೊಳಗೆ ಅರಣ್ಯದ ಪ್ರಮಾಣ ಹೆಚ್ಚಾಗಿದ್ದು, ಇದರಲ್ಲಿ ಕರ್ನಾಟಕದಲ್ಲಿ 93.14 ಚ.ಕಿ.ಮೀ.ನಷ್ಟು ಏರಿಕೆಯೊಂದಿಗೆ ರಾಜ್ಯ 3ನೇ ಸ್ಥಾನದಲ್ಲಿದೆ. 192.92 ಚ.ಕಿ.ಮೀ. ಹೆಚ್ಚಳದೊಂದಿಗೆ ಮಿಜೋರಾಂ ಮೊದಲ ಹಾಗೂ 118.17 ಚ.ಕಿ.ಮೀ. ಹೆಚ್ಚಳದೊಂದಿಗೆ ಒಡಿಶಾ 2ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next