Advertisement

ಗಣಿಗಾರಿಕೆ: ಸುರಕ್ಷಿತ ಕ್ರಮ ತೃಪ್ತಿ ತಂದಿಲ್ಲ

04:19 PM Sep 04, 2021 | Team Udayavani |

ದೇವನಹಳ್ಳಿ: ಗಣಿಗಾರಿಕೆ ಮಾಡುವಾಗ ಸುರಕ್ಷತಾ ಕ್ರಮ, ಕಾನೂನು ಪಾಲನೆ ಮಾಡಬೇಕು. ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಹಾಲಪ್ಪ ಬಸಪ್ಪ ಆಚಾರ್‌ ತಿಳಿಸಿದರು.

Advertisement

ತಾಲೂಕಿನ ತೈಲಗೆರೆ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಸ್ಫೋಟಕ ಸಾಗಾಣಿಕೆ: ದ್ವಿಚಕ್ರಗಳಲ್ಲಿ ಸ್ಫೋಟಕ ಸಾಗಣಿಕೆ ಮಾಡುತ್ತಿರುವುದು ಅಪಾಯಕಾರಿ ನಡೆ. ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟಕಗಳ ಬಳಕೆ ಹಾಗೂ ಸಾಗಾಣಿಕೆಗೆ ಸೂಕ್ತ ನಿರ್ದೇಶನಗಳಿದ್ದು ಪಾಲನೆ ಮಾಡಬೇಕು. ಸ್ಫೋಟಕಗಳ ಬಗ್ಗೆ ತಜ್ಞರು ತರಬೇತಿ ನೀಡಬೇಕು. ಗಣಿ ಮಾಲಿಕರು ಹಾಗೂ ಕಾರ್ಮಿಕರಿಗೆ ಗಣಿಗಾರಿಕೆ ಬಗ್ಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಕಾನೂನು ಕ್ರಮದ ಎಚ್ಚರಿಕೆ: 14 ಮಂದಿಗೆ 55 ಎಕರೆ ಪ್ರದೇಶದಲ್ಲಿ ಅಧಿಕೃತವಾಗಿ ಅನುಮತಿ ನೀಡಲಾಗಿದೆ. ಇದನ್ನು ಮೀರಿ ಗಣಿಗಾರಿಕೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸರ್ವೆ ನಡೆಸಿ ಅಕ್ರಮ ಗಣಿಗಾರಿಕೆ ನಡೆಸಿದ್ದರೇ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ತೃಪ್ತಿ ನೀಡಿಲ್ಲ: ಗಣಿಗಾರಿಕೆ ವೇಳೆ ಪಾಲಿಸುತ್ತಿರುವ ಸುರಕ್ಷತಾ ಕ್ರಮ ನನಗೆ ತೃಪ್ತಿ ನೀಡಿಲ್ಲ. ಎತ್ತರವಾದ ತಗಡಿನ ಶೀಟ್‌ ಹಾಕಬೇಕು, ಧೂಳು ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ಸ್ಪಿಂಕ್ಲರ್‌ಗಳನ್ನು ಅಳವಡಿಸಬೇಕು ಎಂದರು.

Advertisement

ಈ ವೇಳೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಪಿ.ಎನ್‌. ರವೀಂದ್ರ, ಡಿವೈಎಸ್‌ಪಿ ರಂಗಪ್ಪ, ಜಿಲ್ಲಾ  ಉಪನಿರ್ದೇಶಕಿ ರೇಣುಕಾ, ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ, ಜಿಲ್ಲಾ ತೋಟ ಗಾರಿಕಾ ಉಪನಿರ್ದೇಶಕ ಮಹಂತೇಶ್‌ ಮುರುಗೋಡ್‌, ರೇಷ್ಮೆ ಇಲಾಖೆಯ ಉಪನಿರ್ದೇಶಕ ಪ್ರಭಾಕರ್‌, ತಹಶೀಲ್ದಾರ್‌ ಅನಿಲ್‌ ಕುಮಾರ್‌ ಅರೋಲಿಕರ್‌, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ತಹಶೀಲ್ದಾರ್‌ ರಾಜೀವ್‌ ಲೋಚನಾ, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಇದನ್ನೂ ಓದಿ:ವಿದ್ಯುತ್ ಬಿಲ್ ನಲ್ಲಿ ಅಕ್ರಮವೆಸಗಿದ ಮೂವರ ಅಮಾನತು: ಸಚಿವ ಸುನಿಲ್ ಕುಮಾರ್

3 ದಿನದಲ್ಲಿ ಸರ್ಕಾರಕ್ಕೆ ವರದಿ
ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಟಾಸ್ಕ್ ಪೋರ್ಸ್‌ ಸಮಿತಿಯಿದ್ದು ಪ್ರತಿ ತಿಂಗಳೂ ಸಹ ‌ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಸಭೆ ಮಾಡಲಾಗುತ್ತಿದೆ. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ.. ತೈಲಗೆರೆ ಗಣಿ ಪ್ರದೇಶಕ್ಕೆ ಸಂಬಂಧಿಸಿದಂತೆ ರೈತರ ದೂರು ಆಧರಿಸಿ, ಸಚಿವರು ಕೇಳಿರುವ ವರದಿ ತಯಾರಿಕೆಗೆ ತಾಂತ್ರಿಕ ‌ ಸಲಹಾ ಸಮಿತಿ ರಚಿಸಿದ್ದೇವೆ. ಇನ್ನು ಮೂರು ದಿನಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ರೈತರಿಂದ ದೂರುಗಳು ಬರಲಿಕ್ಕೆ ಮುಂದಿನ ದಿನಗಳಲ್ಲಿ ಅವಕಾಶವಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆಎಂದು ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್‌ ಸಚಿವರ ಗಮನಕ್ಕೆ ತಂದರು.

2 ದಿನದಲ್ಲಿ ವರದಿ ಸಲ್ಲಿಸಿ
ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪ್ರದೇಶದಲ್ಲಿ ಧೂಳು ನಿಯಂತ್ರಣಕ್ಕಾಗಿ ಗಣಿಮಾಲಿಕರು ಯಾವುದೇಕ್ರಮ ಕೈಗೊಂಡಿಲ್ಲ, ರಸ್ತೆಗಳು ಸರಿ ಯಾಗಿಲ್ಲ.  ಪೆನ್ಸಿಂಗ್‌ ವ್ಯವಸ್ಥೆ ಸರಿಯಾಗಿಲ್ಲ. ಸುರಕ್ಷತಾ ಬೇಲಿ ನಿರ್ಮಾಣ ಮಾಡಿಲ್ಲ. ಸ್ಪಿಂಕ್ಲರ್‌ಗಳನ್ನು ಅಳವಡಿ ಸಿಲ್ಲ, ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಿಲ್ಲ,ಕಾರ್ಮಿ ಕರ ಸುರಕ್ಷತೆಗೆ ಆದ್ಯತೆ ನೀಡಿಲ್ಲ.ಈಕುರಿತು ಎರಡು ದಿನಗಳಲ್ಲಿ ವರದಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಈ ಎಲ್ಲಾ ಮಾರ್ಗಸೂಚಿ ಗಳನ್ನುಕ್ವಾರೆ ಗಳಲ್ಲಿ ಜಾರಿಯಾಗುವಂತೆ ನೋಡಬೇಕು ಎಂದು ಅಧಿಕಾರಿಗಳಿಗೆ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಹಾಲಪ್ಪ ಬಸಪ್ಪ ಆಚಾರ್‌ ತಾಕೀತು ಮಾಡಿದರು.

ವರದಿ ವಾಸ್ತವಕ್ಕೆ ಭಿನ್ನ
ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ತೋಟಗಳನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.ಕಲ್ಲು ಸಾಗಾಣಿಕೆ ವೇಳೆ ಸಾಮರ್ಥ್ಯಕ್ಕಿಂತ ಹೆಚ್ಚು ಲೋಡ್‌ ಬಳಸಲಾಗುತ್ತಿದೆ. ತೈಲಗೆರೆ ಗಣಿಗಾರಿಕೆಯ ಪ್ರದೇಶದಲ್ಲಿಕೈಗೊಂಡಿರುವ ಸುರಕ್ಷತಾ ಕ್ರಮ ನನಗೆ ತೃಪ್ತಿ ತಂದಿಲ್ಲ. ಅಧಿಕಾರಿಗಳು ನೀಡಿರುವ ವರದಿ ವಾಸ್ತವಕ್ಕೆ ಭಿನ್ನವಾಗಿದೆ. ಇಲಾಖೆಯ ಮಾನದಂಡದಂತೆ ಸೂಕ್ತ ಕ್ರಮ ಕೈಗೊಳ್ಳಿ
ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಮತ್ತೊಮ್ಮೆ ಪರಿಶೀಲನೆಗೆ ಬರುವಷ್ಟರಲ್ಲಿ ಸರಿಪಡಿಸಿಕೊಳ್ಳದಿದ್ದರೆ ಕ್ರಮಕೈಗೊಳ್ಳಲಾಗುತ್ತದೆ
ಎಂದು ಸಚಿವ ಹಾಲಪ್ಪ ಬಸಪ್ಪ ಆಚಾರ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next