Advertisement
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದು ಏಪ್ರಿಲ್ 2017 ರಿಂದ ನವೆಂಬರ್ ಅವಧಿಯಲ್ಲಿ ತನ್ನ ಗ್ರಾಹಕರ ಖಾತೆಗಳಲ್ಲಿ ನಿಗದಿತ ಕನಿಷ್ಠ ಬ್ಯಾಲೆನ್ಸ್ ಇರಿಸದಿದ್ದಕ್ಕೆ ದಂಡ ಹಾಕಿ 1,770 ಕೋಟಿ ಸಂಗ್ರಹಿಸಿದೆಯಂತೆ . ಇದು ಆ ಬ್ಯಾಂಕಿನ ಜುಲೈ- ಸೆಪ್ಟೆಂಬರ್ ತ್ತೈಮಾಸಿಕ ಅವಧಿಯಲ್ಲಿ ಗಳಿಸಿದ ಲಾಭಕ್ಕಿಂತ ತುಸು ಹೆಚ್ಚು. ಇದೇ ಅವಧಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 97 ಕೋಟಿ, ಸೆಂಟ್ರಲ್ ಬ್ಯಾಂಕ್ 68, ಕೆನರಾ ಬ್ಯಾಂಕ್ 62 ಐಡಿಬಿಐ ಬ್ಯಾಂಕ್ 52 ಮತ್ತು ಉಳಿದ ಕೆಲವು ಬ್ಯಾಂಕುಗಳು ಒಟ್ಟು 268 ಕೋಟಿ ಸಂಗ್ರಹಿವೆಯಂತೆ.
Related Articles
2) ಬಡ್ಡಿಯೇತರ ಆದಾಯ.
ಬಡ್ಡಿಯೇತರ ಆದಾಯ ಎಂದರೆ ಪ್ರೊಸೆಸಿಂಗ್ ಚಾರ್ಜ್, ದಂಡ ಇವೆಲ್ಲವೂ ಬರುತ್ತದೆ. ಖಾಸಗಿ ಬ್ಯಾಂಕ್‌ಗಳಲ್ಲಿ ಮಿನಿಮಮ್ ಮೊತ್ತ ಏಕೆ ಜಾಸ್ತಿ ಅಂದರೆ ಅವುಗಳನ್ನು ಕ್ಲಾಸ್ ಬ್ಯಾಂಕಿಂಗ್ ವಲಯಕ್ಕೆ ಸೇರಿಸುತ್ತಾರೆ. ಹಾಗೇ ನಮ್ಮ ಬ್ಯಾಂಕ್‌ಗಳನ್ನು ರಾಷ್ಟ್ರೀಕೃತ ಬ್ಯಾಂಕ್, ಮಾಸ್ ಬ್ಯಾಂಕಿಂಗ್ ಅಂತ ಆಂತರಿಕವಾಗಿ ವಿಂಗಡಣೆ ಮಾಡಲಾಗಿದೆಯಂತೆ.
Advertisement
ಹೀಗಾಗಿ ಇವುಗಳ ಖರ್ಚು ನಿರ್ವಹಣೆಯ ಆಧಾರದ ಮೇಲೂ ಮಿನಿಮಮ್ ಬ್ಯಾಲೆನ್ಸ್ ನಿಗದಿಯಾಗುವುದುಂಟು. ಹಾಗಂತ ಇಷ್ಟೇ ಮಿನಿಮಮ್ ಬ್ಯಾಲೆನ್ಸ್ ನಿಗದಿ ಮಾಡಬೇಕು ಅನ್ನೋ ಖಚಿತವಾದ ಗೈಡ್‌ಲೈನ್ಸ್ ಇಲ್ಲ ಯಾವ ಬ್ಯಾಂಕಿಗೂ ಇಲ್ಲ. ಗ್ರಾಹಕರಿಗೆ ಹೊರೆ ಆಗದಂತೆ ನೋಡಿಕೊಳ್ಳಿ ಎಂದಷ್ಟೇ ಆರ್‌ಬಿಐ ಹೇಳಿರುವುದರಿಂದ ಕೆಲವು ಬ್ಯಾಂಕ್‌ಗಳು ಮನಬಂದಂತೆ ಕೂಡ ಬ್ಯಾಲೆನ್ಸ್ ಏರಿಸಿವೆ.
ಬಡ್ಡಿ ಕೊಡಬೇಕು…: ಒಂದು ಬ್ಯಾಂಕ್‌ನಲ್ಲಿ 10ಸಾವಿರ ಖಾತೆಗಳಿದ್ದು, ಪ್ರತಿ ಖಾತೆಗೆ ಮಿನಿಮಮ್ ಐದು ಸಾವಿರ ಇಟ್ಟರೆ ಆ ಬ್ಯಾಂಕಿಗೆ ಎಷ್ಟು ಹಣ ಕ್ರೂಡೀಕರಣವಾಗಬಹುದು? ಇದೂ ಒಂಥರಾ ಬ್ಯಾಂಕಿಗೆ ಗ್ಯಾರಂಟಿ ಠೇವಣಿಯಂತೆಯೇ ಆಗುತ್ತದೆ. ಇಷ್ಟಾದರೂ, ನಮ್ಮಲ್ಲಿ ಖಾತೆದಾರರ ಆರ್ಥಿಕ ಸಾಮರ್ಥಯ ನೋಡಿಕೊಂಡು ಬ್ಯಾಲೆನ್ಸುಗಳನ್ನು ನಿಗದಿ ಮಾಡಿದೆ, ಕೆಲವು ಬ್ಯಾಂಕ್‌ಗಳು ಮಿನಿಮಂ ಬ್ಯಾಲೆನ್ಸ್ ಮೊತ್ತವನ್ನು ಗಾಳಿಪಟದಂತೆ ಏರಿಸಿ, ಗ್ರಾಹಕರನ್ನು ಕಳೆದುಕೊಂಡದ್ದೂ ಇದೆ.
ಈಗಂತೂ ಮಿನಿಮಮ್ ಬ್ಯಾಲೆನ್ಸ್‌ಗೂ ಬಡ್ಡಿ ಕೊಡಬೇಕು ಅನ್ನೋ ಕಾನೂನು ಜಾರಿಯಾಗಿದೆ. ಪ್ರಸ್ತುತ ಕನಿಷ್ಠ ಶೇ.3.5ರಷ್ಟು ನಿಗದಿಯಾಗಿದೆ. ಕೆಲವು ಬ್ಯಾಂಕ್‌ಗಳು ಶೇ. 6ರಷ್ಟು ಕೊಡುತ್ತಿವೆಯಾದರೂ, ಒಂದು ಲಕ್ಷ ಇಟ್ಟರೆ ಮಾತ್ರ ಅನ್ನೋ ನಿಬಂಧನೆ ಕೂಡ ಇದೆಯಂತೆ. ದಂಡ, ಶುಲ್ಕ ಅಥವಾ ಬಡ್ಡಿ, ಯಾವುದೇ ಇರಲಿ, ಅವು ಆರಂಭದ ದಿನಗಳಲ್ಲಿ ಅಥವಾ ಅವುಗಳನ್ನು ಪ್ರಥಮ ಬಾರಿ ಜಾರಿಗೆ ತಂದಾಗ ನೆಪಮಾತ್ರಕ್ಕೆ ಅಥವಾ ಸಣ್ಣ ಪ್ರಮಾಣದಲ್ಲಿ ಇರುತ್ತವೆ. ಆದರೆ, ದಿನಗಳು ಕಳೆದಂತೆ, ಅವು ನಾನಾ ಕಾರಣಗಳಿಗಾಗಿ ಹೆಚ್ಚಾಗುತ್ತಾ ಹೋಗುತ್ತವೆ.
ಈ ಹೆಚ್ಚಳ ಅನಿವಾರ್ಯವೆಂದು ಬ್ಯಾಂಕ್‌ಗಳು ಸಮರ್ಥನೆ ಮಾಡಿಕೊಳ್ಳುತ್ತವೆ. ಈ ಸಮರ್ಥನೆಯಲ್ಲಿ ಅರ್ಥವೂ ಇದೆ. ಹಾಗೆಯೇ, ಇದು ಅರ್ಥಿಕವಾಗಿ ಕೆಳಸ್ತರದಲ್ಲಿದ್ದವರಿಗೆ ಭಾರ ಎನ್ನುವುದನ್ನೂ ಅಲ್ಲಗೆಳೆಯಲಾಗದು. ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ಏರುತ್ತಿದೆ. ಸಾಲದ ಬೇಡಿಕೆ ನಿರೀಕ್ಷೆಯಷ್ಟು ಇರುವುದಿಲ್ಲ. ಅಂತೆಯೇ ಬಡ್ಡಿ ಆದಾಯ ಕುಂಠಿತವಾಗಿದ್ದು, ಬ್ಯಾಂಕುಗಳು ತಮ್ಮ ನಿರ್ವಹಣೆಗಾಗಿ ಬಡ್ಡಿಯೇತರ ಅದಾಯವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗುತ್ತದೆ.
* ರಮಾನಂದ ಶರ್ಮ